ಕುಂಬಳೆ: ಆರಿಕ್ಕಾಡಿ ಒಡ್ಡಿನಬಾಗಿಲು ಹಿಂದೂ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಸಲು ಅನುಮತಿ ಕೋರಿ ಒಡ್ಡಿನಬಾಗಿಲು ಹಿಂದೂ ಪರಿಶಿಷ್ಠ ಜಾತಿ ಮತ್ತು ವರ್ಗ ರುದ್ರ ಭೂಮಿ ಸಂರಕ್ಷಣ ಸಮಿತಿ ಮತ್ತು ಊರವರು ಕುಂಬಳೆ ಪಂಚಾಯತಿನ ಮುಂದೆ ಗುರುವಾರ ಪ್ರತಿಭಟನಾ ರ‍್ಯಾಲಿ ನಡೆಸಿದರು.
ಎರಡು ಶತಮಾನಗಳಷ್ಟು ಇತಿಹಾಸವಿರುವ ಆರಿಕ್ಕಾಡಿ ಒಡ್ಡಿನಬಾಗಿಲು ಹಿಂದೂ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆಗಳನ್ನು ನಡೆಸಲು ಸ್ಥಳೀಯಾಡಳಿತ ಅನುಮತಿ ನೀಡಬೇಕು ಎಂದು ಆರಿಕ್ಕಾಡಿ ಒಡ್ಡಿನಬಾಗಿಲು ಹಿಂದೂ ಪರಿಶಿಷ್ಟ ಜಾತಿ ಮತ್ತು ವರ್ಗ ಪದಾಧಿಕಾರಿಗಳು ತಿಳಿಸಿದ್ದಾರೆ
ಪಂಚಾಯಿತಿಯಲ್ಲಿ ಪ್ರತಿಭಟನೆ ನಡೆದರೂ ಅಧಿಕಾರಿಗಳು ಈ ಬಗ್ಗೆ ಗಮನಹರಿಸಲಿಲ್ಲ. ಈ ಪ್ರದೇಶದ ಜನರು ಈಗ ಐದು ಕಿಲೋಮೀಟರ್ ದೂರದಲ್ಲಿರುವ ಕುಂಬಳೆ ಸಾರ್ವಜನಿಕ ಸ್ಮಶಾನವನ್ನು ಅಂತ್ಯಕ್ರಿಯೆಗಳಿಗಾಗಿ ಅವಲಂಬಿಸಿದ್ದಾರೆ. ಒಡ್ಡಿನಬಾಗಿಲಲ್ಲಿ 85 ಸೆಂಟ್ಸ್ ಭೂಮಿಯನ್ನು ವಿಶೇಷವಾಗಿ ತಾಲ್ಲೂಕು ಕಚೇರಿಯ ದಾಖಲೆಗಳಲ್ಲಿ ಗುರುತಿಸಲಾಗಿದೆ. ಇದು ವರ್ಷಗಳ ಹಿಂದೆ ಕುಂಬಳೆ ಪಂಚಾಯತ್‌ನ ದಾಖಲೆಗಳಲ್ಲೂ ಇದೆ . ಕುಂಬಳೆ ಪಂಚಾಯತ್ 1961 ರಲ್ಲಿ ರುದ್ರ ಭೂಮಿ ಎಂದು ಸ್ಥಾಪಿಸಲಾದ ನಾಮ ಫಲಕವನ್ನು ಬದಲಾಯಿಸಿ ಕಾನೂನುಬಾಹಿರವಾಗಿ ಆವರಣದ ಮೂಲಕ ರಸ್ತೆ ನಿರ್ಮಿಸಿ ಶವ ಸಂಸ್ಕಾರಕ್ಕೆ ಅಡ್ಡಿಯುಂಟುಮಾಡಿದೆ ಎಂದು ಸಮಿತಿ ಆರೋಪಿಸಿದೆ.
ಜಿಲ್ಲಾಧಿಕಾರಿ, ಮಾನವ ಹಕ್ಕುಗಳ ಆಯೋಗ, ಎಸ್‌ಸಿ ಆಯುಕ್ತರು, ಭೂ ವಿಜಿಲೆನ್ಸ್ ಆಯುಕ್ತರು, ಜಿಲ್ಲಾ ಪಂಚಾಯತ್ ಮತ್ತು ಪ್ರಧಾನ ಮಂತ್ರಿಗೆ ದೂರು ನೀಡಲಾಗಿದ್ದು, ಈ ಬಗ್ಗೆ ವಿಚಾರಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಪ್ರಧಾನಿ ಕಚೇರಿ ನಿರ್ದೇಶನ ನೀಡಿತ್ತು ಮತ್ತು ಪರಿಶಿಷ್ಟ ಜಾತಿ ಆಯುಕ್ತರು ಮತ್ತು ಪರಿಶಿಷ್ಟ ಪಂಗಡಗಳು ಈ ಬಗ್ಗೆ ವಿಚಾರಿಸಿ ಭೂಮಿಯನ್ನು ಅಂತ್ಯಕ್ರಿಯೆ ವಿಧಿಗಳಿಗಾಗಿ ಪಂಚಾಯತ್ ಆಸ್ತಿ ರಿಜಿಸ್ಟರ್‌ಗೆ ಸೇರಿಸಬೇಕು ಎಂದು ನಿರ್ದೇಶಿಸಿತ್ತು.ಒಂದು ಜೊತೆಗೆ ಈ ಬಗ್ಗೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು 2020 ರ ಜೂನ್ 25 ರಂದು ಪಂಚಾಯಿತಿಗೆ ನಿರ್ದೇಶನ ನೀಡಲಾಗಿದೆ ಎಂದು ಪದಾಧಿಕಾರಿಗಳು ತಿಳಿಸಿದ್ದಾರೆ. ಆದರೆ ಅಧಿಕಾರಿಗಳು ಯಾವುದೇ ಕ್ರಮ ಕ್ಯೆಗೊಳ್ಳದೆ ನಿರ್ಲಕ್ಷ್ಯಿಸಿರುವುದನ್ನು ಪ್ರತಿಭಟಿಸಿ ಧರಣಿ ನಡೆಸಲಾಯಿತು.
ಪ್ರತಿಭಟನೆಯನ್ನು ಬಿಜೆಪಿ ಮುಖಂಡ ಎ ಕೆ ಕಯ್ಯಾರು ಉದ್ಘಾಟಿಸಿದರು. ಸಂರಕ್ಷಣಾ ಸಮಿತಿ ಪದಾಧಿಕಾರಿಗಳಾದ ಪದ್ಮನಾಭ,ಸುಂದರ,ರಾಮ,ಆನಂದ,ಕೃಷ್ಣಕುಮಾರ್,ಕೃಷ್ಣ ಹಾಗೂ ಉಪಾಧ್ಯಕ್ಷ ಜಯರಾಮ ಪೂಜಾರಿ ಮಾತನಾಡಿದರು.ಪ್ರಭಾಕರ ಬೀರಂಟಿಕೆರೆ ಸ್ವಾಗತಿಸಿ, ವಂದಿಸಿದರು.