ಕಾಸರಗೋಡು: ಬಿಜೆಪಿ ರಾಜ್ಯ ಪದಾಧಿಕಾರಿಗಳ ಸಭೆ ಜುಲೈ 6ರಂದು|(ಇಂದು) ಕಾಸರಗೋಡು ಬಿಜೆಪಿ ಜಿಲ್ಲಾ ಕಚೇರಿ ಶ್ಯಾಂ ಪ್ರಸಾದ್ ಮುಖರ್ಜಿ ಮಂದಿರದಲ್ಲಿ ಜರುಗಲಿದೆ.
ಬೆಳಗ್ಗೆ 10.30ಕ್ಕೆ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ, ಬಿಜೆಪಿ ರಾಜ್ಯ ಪ್ರಭಾರಿ ಸಿ.ಪಿ ರಾಧಾಕೃಷ್ಣನ್ ಸಮಾರಂಭ ಉದ್ಘಾಟಿಸುವರು. ಬಿಜೆಪಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ಅಧ್ಯಕ್ಷತೆ ವಹಿಸುವರು. ಶಾಸಕ, ಕರ್ನಾಟಕ ಸರ್ಕಾರದ ಮುಖ್ಯ ಸಚೇತಕ ಸುನಿಲ್‍ಕುಮಾರ್ ಪಾಲ್ಗೊಳ್ಳುವರು. ಹಿರಿಯ ಮುಖಂಡರಾದ, ಮಾಜಿ ಶಾಸಕ ಓ.ರಾಜಗೋಪಾಲ್, ಕುಮ್ಮನಂ ರಾಜಶೇಖರನ್ ಒಳಗೊಂಡಂತೆ 70ಮಂದಿ ಪ್ರತಿನಿಧಿಗಳು ಪಾಲ್ಗೊಳ್ಳುವರು. ರಾಜ್ಯ, ರಾಷ್ಟ್ರೀಯ ವಿದ್ಯಮಾನಗಳ ಬಗ್ಗೆ ಚರ್ಚೆ, ಚಿನ್ನಕಳ್ಳಸಾಗಾಟ, ಅರಣ್ಯ ಲೂಟಿ, ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರದ ಆಡಳಿತ ವೈಫಲ್ಯ, ಕೇಂದ್ರ ಸರ್ಕಾರದ ಯೋಜನೆಗಳನ್ನು ಹೆಸರುಬದಲಾಯಿಸಿ ರಾಜ್ಯದಲ್ಲಿ ಜಾರಿಗೆ ತರುವ ಧೋರಣೆ ಬಗ್ಗೆಯೂ ಚರ್ಚೆ ನಡೆಯಲಿರುವುದಾಘಿ ಪ್ರಕಟಣೆ ತಿಳಿಸಿದೆ.