HEALTH TIPS

ಮಹಿಳೆಯರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕೇರಳ ಪೋಲೀಸರು; ಇಂದಿನಿಂದ ಪಿಂಕ್ ಪ್ರೊಟೆಕ್ಷನ್ ಯೋಜನೆ ರಾಜ್ಯಾದ್ಯಂತ ಆರಂಭ

                ತಿರುವನಂತಪುರ: ಮಹಿಳೆಯರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಪೋಲೀಸರ ಹೊಸ ಉಪಕ್ರಮವಾದ ಪಿಂಕ್ ಪ್ರೊಟೆಕ್ಷನ್ ಯೋಜನೆ ಇಂದಿನಿಂದ ಪ್ರಾರಂಭವಾಗಲಿದೆ. ತಿರುವನಂತಪುರಂನ ಪಿಂಕ್ ಪೆಟ್ರೋಲ್ ತಂಡಗಳಿಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ದಾನ ಮಾಡಿದ ವಾಹನಗಳಿಗೆ ಧ್ವಜ ಬೀಸಿ ಈ ಯೋಜನೆಗೆ ಚಾಲನೆ ನೀಡುವರು. 

            ಪಿಂಕ್ ಪ್ರೊಟೆಕ್ಷನ್ ಪ್ರಾಜೆಕ್ಟ್ ವರದಕ್ಷಿಣೆ ಸಂಬಂಧಿತ ಪೀಡನೆಗಳು, ಸೈಬರ್ ಬೆದರಿಕೆ ಮತ್ತು ಸಾರ್ವಜನಿಕ ಅವಮಾನಗಳನ್ನು ತಡೆಯುವ ಗುರಿಯನ್ನು ಹೊಂದಿದೆ. ಕಾರ್ಯಕ್ರಮವು ಅಸ್ತಿತ್ವದಲ್ಲಿರುವ ಪಿಂಕ್ ಪೆÇಲೀಸ್ ಗಸ್ತು ವ್ಯವಸ್ಥೆಯನ್ನು ಸಕ್ರಿಯಗೊಳಿಸುವುದನ್ನು ಒಳಗೊಂಡಿದೆ.

              ಕೌಟುಂಬಿಕ ಹಿಂಸಾಚಾರದ ಬಗ್ಗೆ ಪೋಲೀಸರಿಗೆ ದೂರುಗಳು ಬರುತ್ತಿರುತ್ತವೆ.  ಪಿಂಕ್ ಜನಮೈತ್ರಿ ಬೀಟ್ ಎಂದು ಕರೆಯಲ್ಪಡುವ ಹೊಸ ಯೋಜನೆಯು ಅಂತಹ ಕಿರುಕುಳವನ್ನು ನಿರೀಕ್ಷಿಸಲು ಮತ್ತು ತಡೆಯಲು ಅಗತ್ಯವಾದ ಮಾಹಿತಿಯನ್ನು ಒದಗಿಸುತ್ತದೆ. ಗೃಹ ಹಿಂಸಾಚಾರದ ಬಗ್ಗೆ ಮಾಹಿತಿ ಸಂಗ್ರಹಿಸುವ ಮನೆ ಮನೆಗೆ ತೆರಳಿ ಪಿಂಕ್ ಜನಮೈತ್ರಿ ಬೀಟ್ ವ್ಯವಸ್ಥೆಯನ್ನು ನಿರ್ವಹಿಸಲಾಗುತ್ತದೆ. ಗ್ರಾಮ ಪಂಚಾಯತಿ ಸದಸ್ಯರು, ನೆರೆಹೊರೆಯವರು ಮತ್ತು ಇತರ ಸ್ಥಳೀಯರಿಂದ ಮಾಹಿತಿಯನ್ನು ಸಂಗ್ರಹಿಸಿ ಮುಂದಿನ ಕ್ರಮಕ್ಕಾಗಿ ಸ್ಟೇಷನ್ ಹೌಸ್ ಅಧಿಕಾರಿಗಳಿಗೆ ಹಸ್ತಾಂತರಿಸುತ್ತಾರೆ.

              ವಿಶೇಷ ತರಬೇತಿ ಪಡೆದ ಮಹಿಳಾ ಪೋಲೀಸ್ ಅಧಿಕಾರಿಗಳನ್ನು ಒಳಗೊಂಡ ಪಿಂಕ್ ಬೀಟ್ ವ್ಯವಸ್ಥೆಯು ಈಗ ಕೆಎಸ್‍ಆರ್‍ಟಿಸಿ ಮತ್ತು ಖಾಸಗಿ ಬಸ್‍ಗಳಲ್ಲಿ ಮತ್ತು ಶಾಲೆಗಳು, ಕಾಲೇಜುಗಳು ಮತ್ತು ಇತರ ಸಾರ್ವಜನಿಕ ಸ್ಥಳಗಳು ಮತ್ತು ಬಸ್ ನಿಲ್ದಾಣಗಳಲ್ಲಿ ಇರುತ್ತದೆ. ಅವರಿಗೆ ಸಹಾಯ ಮಾಡಲು, ಸೋಮವಾರದಿಂದ ಎಲ್ಲಾ 14 ಜಿಲ್ಲೆಗಳಲ್ಲಿ ಪಿಂಕ್ ನಿಯಂತ್ರಣ ಕೊಠಡಿ ಕಾರ್ಯನಿರ್ವಹಿಸಲಿದೆ.

                 ಜನನಿಬಿಡ ಪ್ರದೇಶಗಳಲ್ಲಿ ಸಮಾಜ ವಿರೋಧಿಗಳ ಇರುವಿಕೆ ಪತ್ತೆಹಚ್ಚಲು ಮತ್ತು ಕ್ರಮ ತೆಗೆದುಕೊಳ್ಳಲು ಪಿಂಕ್ ಶ್ಯಾಡೋ ಪೆಟ್ರೋಲ್ ತಂಡವನ್ನು ಸಹ ನಿಯೋಜಿಸಲಾಗುವುದು. ಮಹಿಳಾ ಅಧಿಕಾರಿಗಳನ್ನು ಮಾತ್ರ ಒಳಗೊಂಡಿರುವ ಬುಲೆಟ್ ಪೆಟ್ರೋಲ್ ತಂಡವಾದ ಪಿಂಕ್ ರೋಮಿಯೋ ಇಂದಿನಿಂದ ಹಾಜರಾಗಲಿದೆ.

                 ಅತ್ಯುತ್ತಮ ಎನ್‍ಜಿಒಗಳ ಸಹಾಯದಿಂದ ಮಹಿಳಾ ಸೆಲ್ ಗಳಲ್ಲಿ ಅಸ್ತಿತ್ವದಲ್ಲಿರುವ ಸಮಾಲೋಚನಾ ವ್ಯವಸ್ಥೆಯನ್ನು ಬಲಪಡಿಸಲಾಗುತ್ತದೆ. ಮಹಿಳೆಯರ ಮೇಲಿನ ದೌರ್ಜನ್ಯದ ದೂರುಗಳನ್ನು ಪರಿಣಾಮಕಾರಿಯಾಗಿ ನಿರ್ಣಯಿಸಲು ಅಧಿಕಾರಿಗಳಿಗೆ ತರಬೇತಿ ನೀಡಲಾಗುವುದು. ಹೊಸ ಯೋಜನೆಯು ಮಹಿಳೆಯರಿಗೆ ಸಹಾಯ ಮಾಡಲು ಪೋಲೀಸ್ ಮೊಬೈಲ್ ಅಪ್ಲಿಕೇಶನ್ ಪೆÇೀಲ್-ಅಪ್ಲಿಕೇಶನ್ ಮತ್ತು ನಿರ್ಭಯಾ ಅಪ್ಲಿಕೇಶನ್ ಬಳಕೆಯನ್ನು ವಿಸ್ತರಿಸಲು ಪ್ರಯತ್ನಗಳೂ ಸಾಗಿವೆ. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries