HEALTH TIPS

ಕೇರಳ ಕೋವಿಡ್ ಎರಡನೇ ತರಂಗದಿಂದ ಸಂಪೂರ್ಣವಾಗಿ ಮುಕ್ತರಾಗಿಲ್ಲ: ಎಚ್ಚರಿಕೆ ಮರೆತರೆ ಅಪಾಯ ಖಚಿತ: ಎಚ್ಚರಿಕೆ ನೀಡಿದ ಆರೋಗ್ಯ ಸಚಿವೆ

                                             

              ತಿರುವನಂತಪುರ: ಕೊರೊನಾ ಹರಡುವ ಪ್ರಸ್ತುತ ಪರಿಸ್ಥಿತಿಯಲ್ಲಿ ತೀವ್ರ ಎಚ್ಚರಿಕೆ ವಹಿಸದಿದ್ದರೆ ಮೂರನೇ ತರಂಗ ಸಂಭವಿಸಬಹುದು ಎಂಬ ತಜ್ಞರ ಅಭಿಪ್ರಾಯದ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ಹೆಚ್ಚಿನ ಜಾಗರೂಕರಾಗಿರಬೇಕು ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಎಚ್ಚರಿಕೆ ನೀಡಿದ್ದಾರೆ. ನಾವು ಎರಡನೇ ತರಂಗದಿಂದ ಸಂಪೂರ್ಣವಾಗಿ ಮುಕ್ತರಾಗಿಲ್ಲ. ಕೇರಳದ ಅರ್ಧದಷ್ಟು ಜನಸಂಖ್ಯೆಯು ಅಪಾಯದಲ್ಲಿದೆ. ಹೆಚ್ಚು ಸಾಂಕ್ರಾಮಿಕ ಡೆಲ್ಟಾ ವೈರಸ್ ಇರುವಿಕೆ ಕೂಡ ಇದೆ. ಲಸಿಕೆ ಬಹುತೇಕ ಜನರಿಗೆ  ತಲುಪುವ ಮೊದಲು ಮೂರನೇ ತರಂಗ ಸಂಭವಿಸಿದಲ್ಲಿ, ತೀವ್ರತೆ ಮತ್ತು ಆಸ್ಪತ್ರೆಯ ದಾಖಲಾತಿಗಳು ಹೆಚ್ಚಳಗೊಳ್ಲುವ ಭೀತಿಯೂ ಇದೆ.  ಲಸಿಕೆ ಲಭ್ಯವಾದ ನಂತರ ಸಮರೋಪಾದಿಯಲ್ಲಿ ಗರಿಷ್ಠ ಸಂಖ್ಯೆಯ ಜನರಿಗೆ ಒದಗಿಸಲು ಆರೋಗ್ಯ ಇಲಾಖೆಯು ಸಜ್ಜುಗೊಂಡಿದೆ. ಇದನ್ನು ತಡೆಯಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದ್ದರೂ, ಪ್ರತಿಯೊಬ್ಬರೂ ಮಾಸ್ಕ್ ಮತ್ತು ಸಾಮಾಜಿಕ ಅಂತರದ ಮೂಲಕ ತಮ್ಮನ್ನು ತಾವು ರಕ್ಷಿಸಿಕೊಳ್ಳುವುದನ್ನು ಲಸಿಕೆ ತಲುಪುವವರೆಗೂ ಮುಂದುವರಿಸಬೇಕು. ಲಸಿಕೆ ತೆಗೆದುಕೊಂಡ ನಂತರವೂ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂದು ಸಚಿವರು ಹೇಳಿದರು.

                        ಆರೋಗ್ಯ ಇಲಾಖೆ ಈಗಾಗಲೇ ಮೂರನೇ ತರಂಗಕ್ಕೆ ಮುಂಚಿತವಾಗಿ ಸಿದ್ಧತೆಗಳನ್ನು ಮಾಡಿತ್ತು. ಆಮ್ಲಜನಕ ಮತ್ತು ವೈದ್ಯಕೀಯ ಸೌಲಭ್ಯಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಆರೋಗ್ಯ ಸಚಿವರ ಅಧ್ಯಕ್ಷತೆಯಲ್ಲಿ ವಿಶೇಷ ಪರಿಶೀಲನಾ ಸಭೆಯನ್ನು ಕರೆಯಲಾಯಿತು. ಎರಡನೇ ತರಂಗದ ಸಮಯದಲ್ಲಿ ಕೇರಳದಲ್ಲಿ ಆಮ್ಲಜನಕದ ಅಲಭ್ಯತೆ ದೊಡ್ಡ ಸಮಸ್ಯೆ ಸೃಷ್ಟಿಸಿಲ್ಲ. 

            ಸಭೆಯಲ್ಲಿ ಮೂರನೇ ತರಂಗದ ಸಂದರ್ಭದಲ್ಲಿ ಆಮ್ಲಜನಕದ ಲಭ್ಯತೆಗೆ ಸಂಬಂಧಿಸಿದ ಸಂಭಾವ್ಯ ತೊಂದರೆಗಳ ಕುರಿತು ಚರ್ಚಿಸಲಾಯಿತು. ಕೇಂದ್ರೀಕೃತ ಯೋಜನೆಗಳು, ರಾಜ್ಯ ಯೋಜನೆಗಳು, ಸಿಎನ್ ಆರ್ ಸ್ವಯಂಸೇವಾ ಸಂಸ್ಥೆಗಳ ನೆರವು ಮತ್ತು ನಿಧಿಯೊಂದಿಗೆ ರಾಜ್ಯದಲ್ಲಿ ಆಮ್ಲಜನಕ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ. ರಾಜ್ಯದ ವಿವಿಧ ಭಾಗಗಳಲ್ಲಿ 33 ಆಮ್ಲಜನಕ ಉತ್ಪಾದನಾ ಘಟಕಗಳನ್ನು ಆಗಸ್ಟ್ ವೇಳೆಗೆ ಕಾರ್ಯಗತಗೊಳಿಸುವಂತೆ ವೈದ್ಯಕೀಯ ಸೇವೆಗಳ ನಿಗಮಕ್ಕೆ ಸಚಿವರು ಸೂಚಿಸಿದರು. ಇದು ಹೆಚ್ಚುವರಿ 77 ಮೆಟ್ರಿಕ್ ಟನ್ ಆಮ್ಲಜನಕವನ್ನು ಉತ್ಪಾದಿಸಬಹುದು.

                 ರಾಜ್ಯ ಸರ್ಕಾರವು ವಿವಿಧ ನಿಧಿಯನ್ನು ಬಳಸಿ ನಿರ್ಮಿಸುತ್ತಿರುವ 38 ಆಮ್ಲಜನಕ ಉತ್ಪಾದನಾ ಘಟಕಗಳ ನಿರ್ಮಾಣದ ಪ್ರಗತಿಯನ್ನು ಸಭೆಯಲ್ಲಿ ಅವಲೋಕನ ನಡೆಸಲಾಯಿತು. ರಾಜ್ಯದ ಮಕ್ಕಳ ಆರೈಕೆ ವಲಯವನ್ನು ಎರಡನೇ ಪ್ಯಾಕೇಜ್‍ಗೆ ತಕ್ಷಣ ವಿಸ್ತರಿಸುವ ಬಗ್ಗೆಯೂ ಚರ್ಚಿಸಿತು. ಕೆಎಂಎಸ್‍ಸಿಎಲ್, ಆರೋಗ್ಯ ಇಲಾಖೆ ಮತ್ತು ಆರೋಗ್ಯ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸಚಿವರು ಈ ಯೋಜನೆಗಳ ಅನುಷ್ಠಾನವನ್ನು ಶೀಘ್ರ ಪೂರ್ಣಗೊಳಿಸುವಂತೆ ಸೂಚಿಸಿದರು.

                  ಕೊರೊನಾ ಪ್ರಕರಣಗಳ ಹೆಚ್ಚಳ ಮತ್ತು ಮೂರನೇ ತರಂಗವನ್ನು ಗಮನದಲ್ಲಿಟ್ಟುಕೊಂಡು, ವೈದ್ಯಕೀಯ ಕಾಲೇಜುಗಳು ಮತ್ತು ಇತರ ವೈದ್ಯಕೀಯ ಕೇಂದ್ರಗಳಲ್ಲಿ ವೈದ್ಯಕೀಯ ಸಾಮಗ್ರಿಗಳ ಸಂಗ್ರಹವನ್ನು ಖಾತ್ರಿಪಡಿಸುವಂತೆ ಸಚಿವರು ಇಲಾಖಾ ಮುಖ್ಯಸ್ಥರಿಗೆ ಸೂಚಿಸಿದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries