HEALTH TIPS

ಭಾರತದ ಮೀರಾಬಾಯಿ ಚಾನುಗೆ ದಕ್ಕಬಹುದೇ ಚಿನ್ನ?!

            ಟೋಕಿಯೋ : ಜಪಾನಿನ ಟೋಕಿಯೋದಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್​ನಲ್ಲಿ ಭಾರತಕ್ಕೆ ಬೆಳ್ಳಿ ಪದಕ ಗೆದ್ದ ಮೀರಾಬಾಯಿ ಚಾನು ಅವರಿಗೆ ಚಿನ್ನದ ಪದಕವೇ ಒಲಿಯುವ ಸಾಧ್ಯತೆ ಇದೆ ಎನ್ನಲಾಗಿದೆ. ಏಕೆಂದರೆ, ವೇಯ್ಟ್​ ಲಿಫ್ಟಿಂಗ್​ ಸ್ಪರ್ಧೆಯಲ್ಲಿ ಚಾನು ಅವರನ್ನು ಮೀರಿಸಿ ಮೊದಲ ಸ್ಥಾನ ಪಡೆದಿದ್ದ ಚೀನಾದ ಜಿಹುಯಿ ಹೌ ಅವರನ್ನು ಇಂದು ಎರಡನೇ ಡೋಪಿಂಗ್ ಪರೀಕ್ಷೆಗೆ ಒಡ್ಡಲಾಗುತ್ತಿದೆ ಎಂದು ವರದಿಗಳು ತಿಳಿಸಿವೆ.

            ಜುಲೈ 24 ರಂದು ನಡೆದ ಮಹಿಳೆಯರ 49 ಕೆಜಿ ವೇಯ್ಟ್​ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಚೀನಾದ ಹೌ, 210 ಕೆಜಿ ಭಾರ ಎತ್ತಿ ಮೊದಲ ಸ್ಥಾನ ಪಡೆದಿದ್ದರು. ಕ್ರೀನ್ ಅಂಡ್​ ಜರ್ಕ್​ ವಿಶ್ವ ದಾಖಲೆ ಹೊಂದಿರುವ ಚಾನು, 202 ಕೆಜಿ ಭಾರ ಎತ್ತಿ ಎರಡನೇ ಸ್ಥಾನ ಗಳಿಸಿದ್ದರು. ಇಂಡೋನೇಷಿಯಾದ ವಿಂಡಿ ಕಾಂಟಿಕ ಅವರು 194 ಕೆಜಿ ಭಾರ ಎತ್ತಿ ಕಂಚಿನ ಪದಕ ಗಳಿಸಿದ್ದರು.

        ದೈಹಿಕ ಪರೀಕ್ಷೆಯಲ್ಲಿ ಹೌ ವಿಷಯದಲ್ಲಿ ಕೆಲವು ಅಡ್ಡ ವಿಶ್ಲೇಷಣೆ ಬಂದಿರುವ ಹಿನ್ನೆಲೆಯಲ್ಲಿ ಅವರ ರಕ್ತದ ಸ್ಯಾಂಪಲ್​ಅನ್ನು ಮತ್ತೆ ಪರೀಕ್ಷೆಗೆ ಕಳುಹಿಸಲಾಗುತ್ತಿದೆ. ಅವರು ಯಾವುದಾದರೂ ಔಷಧಿ ತೆಗೆದುಕೊಳ್ಳುತ್ತಿರುವ ಬಗ್ಗೆ ಆಯಂಟಿ ಡೋಪಿಂಗ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೇ ಎಂದೂ ಪರಿಶೀಲಿಸಲಾಗುತ್ತಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries