ಸಮರಸ ಚಿತ್ರ ಸುದ್ದಿ: ಉಪ್ಪಳ: ಕೆ.ಎಸ್.ಬಿ.ಎ(ಕೇರಳ ಸ್ಟೇಟ್ ಬಾರ್ಬರ್ಸ್ ಅಸೋಸಿಯೇಶನ್) ವನಿತಾ ವಿಂಗ್ ಬ್ಯೂಟಿಷನ್ ಸಂಘಟನೆ ನೇತೃತ್ವದಲ್ಲಿ ಕೊರೊನಾದಿಂದ ಹಲವು ಸಮಸ್ಯೆಗಳನ್ನು ಎದುರಿಸುವ ಸದಸ್ಯರ ಪರವಾಗಿ ಸಂಘಟನೆಯು ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಉಪ್ಪಳದಲ್ಲಿರುವ ಮಂಜೇಶ್ವರ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಜಿಲ್ಲಾ ವನಿತಾ ವಿಂಗ್‍ನ ಕಾರ್ಯದರ್ಶಿ ಸುನಿತಾ ಕುಲಾಲ್, ಯೋಗಿತಾ, ಶಕೀಲಾ ಸುಪ್ರಭಾ, ಬಾರ್ಬರ್ ಎಸೋಸೊಯೇಶನ್ ನ ಕೃಷ್ಣ ಭಂಡಾರಿ ಮತ್ತು ಸದಸ್ಯರುಗಳು ಭಾಗವಹಿಸಿದ್ದರು.