ಕೊಚ್ಚಿನ್; ಎರ್ನಾಕುಳಂ ಜಿಲ್ಲಾಧಿಕಾರಿಯವರಿಗೆ ವರ್ಗವಾಗಿದ್ದು, ಅಲ್ಲಿಯ ಜಿಲಾಧಿಕಾರಿ, ಕನ್ನಡಿಗ ಸುಹಾಸ್ ಅವರ ಫೇಸ್‍ಬುಕ್ ಪೋಸ್ಟ್ ವೈರಲ್ ಆಗಿದೆ. ಇಲ್ಲಿಯವರೆಗೆ ನೀಡಿದ ಬೆಂಬಲಕ್ಕೆ ಎಲ್ಲರಿಗೂ ಧನ್ಯವಾದ ಅರ್ಪಿಸಿದ್ದು, ಕೋವಿಡ್ ಅವಧಿಯಲ್ಲಿ ಪ್ರತಿಯೊಬ್ಬರೂ ಎಸ್‍ಎಂಎಸ್ ಅನುಸರಿಸಬೇಕೆಂದು ವಿಶೇಷವಾಗಿ ವಿನಂತಿಸಿದರು.
ನಾನು ಮೂಲತಃ ಕರ್ನಾಟಕ ಮೂಲದವನು. ಎರ್ನಾಕುಳಂನಿಂದ ಜಿಲ್ಲಾಧಿಕಾರಿಯಾಗಿ ಅಧಿಕೃತ ವೃತ್ತಿಜೀವನವನ್ನು ಪ್ರಾರಂಭಿಸಿದಾಗಿಂದ ಮಲಯಾಳೀಯನಾದೆ ಎಂಬ ವಾಕ್ಯದಿಂದ ಸಂದೇಶ ಪ್ರಾರಂಭವಾಗುತ್ತದೆ.
ಪೋಸ್ಟ್ ನ್ನು ಈಗಾಗಲೇ ಬಹಳಷ್ಟು ಜನರು ಹಂಚಿಕೊಂಡಿದ್ದಾರೆ. ಅವರನ್ನು ಅಭಿನಂದಿಸಿ ವಿದ್ಯಾರ್ಥಿಗಳು ಸಹಿತ ಅನೇಕರು ಪೋಸ್ಟ್ ಮಾಡಿದ್ದಾರೆ.
ಪೂರ್ಣ ಆವೃತ್ತಿ:
ಆತ್ಮೀಯರೇ,
ಕರ್ನಾಟಕದ ಮೂಲದ ನಾನು 2013 ರಲ್ಲಿ ಎರ್ನಾಕುಳಂನಲ್ಲಿ ಸಹಾಯಕ ಜಿಲ್ಲಾಧಿಕಾರಿಯಾಗಿ ವೃತ್ತಿಜೀವನವನ್ನು ಪ್ರಾರಂಭಿಸಿದಾಗಿಂದ ನಾನು ಮಲಯಾಳಿಯಾದೆ. ಅಂದಿನಿಂದ ಎರ್ನಾಕುಳಂ ಮೇಲಿನ ನನ್ನ ಪ್ರೀತಿಯ ಪ್ರತಿಬಿಂಬವಾಗಿ, ನಾನು ಇಲ್ಲಿ ಸಬ್ ಕಲೆಕ್ಟರ್ ಆಗಿದ್ದೇನೆ ಮತ್ತು ಅದರ ನಂತರ ನಾನು ಕೆಲವು ದಿನಗಳ ಕಾಲ ತಿರುವನಂತಪುರಂನ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ ಮತ್ತು ವಯನಾಡ್ ಮತ್ತು ಆಲಪ್ಪುಳದಲ್ಲಿ ಜಿಲ್ಲಾಧಿಕಾರಿಯಾದೆ. ಆ ಬಳಿಕ ನಿಮ್ಮ ಜಿಲ್ಲಾಧಿಕಾರಿಯಾಗಿ ಎರ್ನಾಕುಳಂ ನ ಜವಾಬ್ದಾರಿವಹಿಸಿದೆ.
ಇಲ್ಲಿದ್ದಷ್ಟು ಕಾಲ ನಿಮಗೆ ಅತ್ಯುತ್ತಮ ಸೇವೆ ನೀಡಿರುವೆನೆಂಬ ಭರವಸೆ ಇದೆ. ಕರ್ತವ್ಯದ ಒತ್ತಡಗಳಿಂದ ನನಗೆ ಬರುತ್ತಿದ್ದ ಸಲಹೆ, ಸವಾಲುಗಳಿಗೆ ಕೆಲವೊಮ್ಮೆ ಪ್ರತ್ಯುತ್ತರಗಳನ್ನು ಕಳುಹಿಸಲು ಸಾಧ್ಯವಾಗದಿದ್ದರೂ, ಪೇಸ್ ಬುಕ್ ನಲ್ಲಿ ನೀವು ವರದಿ ಮಾಡಿದ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಲು ನಾನು ನನ್ನ ಅತ್ಯುತ್ತಮ ಪ್ರಯತ್ನ ಮಾಡಿದ್ದೇನೆ.
2018 ರ ಪ್ರವಾಹದ ಭೀತಿಯಲ್ಲಿದ್ದ ಅಲಪ್ಪುಳ, ವಯನಾಡಿನ ಜನರು ಇದ್ದಕ್ಕಿದ್ದಂತೆ ಸಂಕಷ್ಟಕ್ಕೊಳಗಾದಾಗ ಶಕ್ತಿಮೀರಿ ಸಹಕರಿಸಿದ್ದೇನೆ ಎಂದು ಭಾವಿಸುವೆ. ಆಲಪ್ಪುಳ ಜನರ ಸಹೋದರರಾಗಲು ಸಾಧ್ಯವಾದುದು ನನ್ನ ಸುಯೋಗ ಎಂದು ನೆನಪಿಸಲು ನಾನು ಈ ಅವಕಾಶವನ್ನು ಬಳಸುತ್ತೇನೆ.
ವಯನಾಡ್ ಮತ್ತು ಆಲಪ್ಪುಳರಿಂದ ಪಡೆದ ಅನುಭವ ಮತ್ತು ಪ್ರೀತಿಯ ಸಂಪತ್ತಿನೊಂದಿಗೆ, ನಾನು ಜೂನ್ 20, 2019 ರಂದು ಎರ್ನಾಕುಳಂನ ಉಸ್ತುವಾರಿ ವಹಿಸಿಕೊಂಡಾಗಿನಿಂದ ನೀವು ನನಗೆ ನೀಡಿದ ಪ್ರೀತಿ ಮತ್ತು ನಂಬಿಕೆಯ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಳ್ಳಲು ನಾನು ಎಲ್ಲ ಪ್ರಯತ್ನಗಳನ್ನು ಮಾಡಿದ್ದೇನೆ.
ಸರ್ಕಾರ ನಿಯೋಜಿಸಿದ ಕರ್ತವ್ಯವನ್ನು ಪೂರ್ಣ ಹೃದಯದಿಂದ, ಜವಾಬ್ದಾರಿಯುತವಾಗಿ ಮತ್ತು ನಿಷ್ಠೆಯಿಂದ ಈವರೆಗೂ ಮಾಡಿರುವೆ ಮತ್ತು ನಾಳೆ ಅದನ್ನು ಮುಂದುವರಿಸಲಿರುವೆ.
ನನ್ನ ಚಟುವಟಿಕೆಗಳ ಯಶಸ್ಸನ್ನು ನನ್ನ ಏಕೈಕ ಯಶಸ್ಸು ಎಂದು ನಾನು ಭಾವಿಸಲಾರೆ. ಆದರೆ ನನ್ನೊಂದಿಗೆ ಭುಜಕ್ಕೆ ಭುಜ ನೀಡಿ ಕೆಲಸ ಮಾಡಿದ ಜಿಲ್ಲೆಯ ವಿವಿಧ ಇಲಾಖಾ ಅಧಿಕಾರಿಗಳು ಮತ್ತು ನೌಕರರಿಗೆ ಮತ್ತು ಪಕ್ಷದ ಸಂಬಂಧವಿಲ್ಲದೆ ಕೆಲಸ ಮಾಡಿದ ಜನರ ಪ್ರತಿನಿಧಿಗಳಿಗೆ ವಿಶೇಷ ಅಭಿನಂದನೆಗಳು - ಧನ್ಯವಾದಗಳು.
ಇಂದು ನನ್ನ ಉತ್ತರಾಧಿಕಾರಿ ಜಾಫರ್ ಮಲಿಕ್ ಅ|ಧಿಕಾರ ವಹಿಸುತ್ತಿದ್ದು ಅವರಿಗೂ ಎಲ್ಲ ಬೆಂಬಲವನ್ನು ನಾನು ವಿನಮ್ರವಾಗಿ ವಿನಂತಿಸುತ್ತೇನೆ.
ನಿಮ್ಮ ಪ್ರೀತಿ ಮತ್ತು ಬೆಂಬಲಕ್ಕೆ ಪ್ರತಿಕ್ರಿಯೆಯಾಗಿ ಕೇವಲ ಎರಡು ಪದಗಳು ‘ಧನ್ಯವಾದಗಳು’ ಮತ್ತು ‘ಪ್ರೀತಿ’.
ಈ ಎಲ್ಲದರ ಹೊರತಾಗಿಯೂ, ಒಂದು ವಿಷಯವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು, ದೇಶವು ಕೊರೋನಾದಿಂದ ಸಂಪೂರ್ಣವಾಗಿ ಮುಕ್ತವಾಗುವವರೆಗೆ, ಎಸ್.ಎಂ.ಎಸ್ ಮುಂದುವರಿಸಬೇಕು. (ತಮಿಶೇಶಿಲೈ ನಮಸೆ ತಿರಸಮಹಾ ಉಶೇಮಿರಾಲಾ)
ನಿಮ್ಮವನಾದ
ಸುಹಾಸ್