ಕಾಸರಗೋಡು: ಉತ್ತರ ಮಲಬಾರ್ ಪ್ರದೇಶದ ಪ್ರಥಮ ಸೆಕೆಂಡರಿ ಸ್ಟಾಂಡರ್ಡ್ ಲೆಬೋರೆಟರಿ ಮತ್ತು ಟಾಂಕರ್ ಲಾರಿ ಕಾಲಿಬ್ರೇಷನ್ ಯೂನಿಟ್ ಕಾಸರಗೋಡು ಜಿಲ್ಲೆಯಲ್ಲಿ ಶೀಘ್ರದಲ್ಲಿ ಆರಂಭಗೊಳ್ಳಲಿದೆ.
ಪನೆಯಾಲ ಗ್ರಾಮದ ಬಟ್ಟತ್ತೂರಿನಲ್ಲಿ ಕಾಸರಗೋಡು- ಕಾಞಂಗಾಡು ರಾಷ್ಟ್ರೀಯ ಹೆದ್ದಾರಿ 66 ರಸ್ತೆಯ ಬಳಿ 1.95 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವ ಈ ಸಂಬಂಧ ಕಟ್ಟಡದ ನಿರ್ಮಾಣಕ್ಕೆ ಚಾಲನೆ ಲಭಿಸಿದೆ.
ಕಾಸರಗೋಡು ನಗರದಿಂದ 15 ಕಿಮೀ, ಕಾಞಂಗಾಡಿನಿಂದ 20 ಕಿಮೀ ದೂರದಲ್ಲಿ ಬಟ್ಟತ್ತೂರು ಇದೆ. ಯೋಜನೆಯ ನಿರ್ಮಾಣದ ಹೊಣೆ ನಿರ್ಮಿತಿ ಕೇಂದ್ರಕ್ಕೆ ನೀಡಲಾಗಿದೆ. ಕಾಸರಗೋಡು ಜಿಲ್ಲೆಯ ಟಾಂಕರ್ ಲಾರಿಗಳ ಕಾಲಿಬ್ರೇಷನ್ ಸದ್ರಿ ಕೋಯಿಕೋಡ್, ಎರ್ನಾಕುಲಂ ಗಳ ಲೀಗಲ್ ಮೆಟ್ರಾಲಜಿ ಕಚೇರಿಗಳಲ್ಲಿ ನಡೆಸಲಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಕಾಲಿಬ್ರೇಷನ್ ಇಲ್ಲ. ತೈಲ ಕಂಪನಿಗಳ ಸ್ವಾಮ್ಯದಲ್ಲಿರುವ ಕಾಲಿಬ್ರೇಷನ್ ಯೂನಿಟ್ ಬಳಸಿ ಮಂಗಳೂರಿನಲ್ಲಿ ಲೀಗಲ್ ಮೆಟ್ರಾಲಜಿ ಇಲಾಖೆ ಅರ್ಹತಾಪತ್ರ ನೀಡುತ್ತಿದೆ. ಕಾಸರಗೋಡು ಜಿಲ್ಲೆಯಲ್ಲಿ ಟಾಂಕರ್ ಲಾರಿ ಕಾಲಿಬ್ರೇಷನ್ ಯೂನಿಟ್ ಆರಂಭಗೊಳ್ಳುವ ಮೂಲಕ ಸ್ಥಳೀಯ ಮಟ್ಟದಲ್ಲಿ ದೊಡ್ಡ ಕೊಡುಗೆಯಾಗಲಿದೆ.
ಲೀಲಗ್ ಮೆಟ್ರಾಲಜಿ ಕಚೇರಿಗಳ ವರಿಂಗ್ ಸ್ಟಾಂಡರ್ಡ್ ಬಳಸಿ ಕಿರು ವ್ಯಾಪಾರಿಗಳಿಂದ ಸೂಪರ್ ಮಾರ್ಕೆಟ್ , ಜ್ಯುವೆಲ್ಲರಿ, ಪೆಟ್ರೋಲ್ ಪಂಪ್, ವೇ ಬ್ರಿಜ್ ಸಹಿತ ವಿವಿಧ ಸಂಸ್ಥೆಗಳಲ್ಲಿ ಬಳಸುವ ಅಳತೆಮಾಪನ ಉಪಕರಣಗಳ ದಕ್ಷತೆಯ ಖಚಿತತೆ ಮೂಡಿಸಲಾಗುತ್ತದೆ. ಲೀಗಲ್ ಮೆಟ್ರಾಲಜಿ ಕಚೇರಿಗಳಲ್ಲಿ ಬಳಸಲಾಗುವ ವಕಿರ್ಂಗ್ ಸ್ಟಾಂಡರ್ಡ್ ಗಳ ದಕ್ಷತೆಯ ಖಚಿತತೆ ಮೂಡಿಸುವ ಕ್ರಮ ಸದ್ರಿ ಎರ್ನಾಕುಲಂ ಜಿಲ್ಲೆಯ ಸೆಕೆಂಡರಿ ಸ್ಟಾಂಡರ್ಡ್ ಲಾಬ್ ನಲ್ಲಿ ನಡೆಯುತ್ತಿದೆ. ಕಾಸರಗೋಡು ಜಿಲ್ಲೆಯಲ್ಲಿ ಸೆಕೆಂಡರಿ ಸ್ಟಾಂಡರ್ಡ್ ಲಾಬ್ ಅನುಷ್ಠಾನಗೊಳ್ಳುವ ಮೂಲಕ ರಾಜ್ಯದ ದ್ವಿತೀಯ ಸೆಕೆಂಡರಿ ಸ್ಟಾಂಡರ್ಡ್ ಲಾಬ್ ಲಭಿಸಿದಂತಾಗುತ್ತದೆ. ಯೋಜನೆಯ ಪೂರ್ಣತೆಯೊಂದಿಗೆ ಲೀಗಲ್ ಮೆಟ್ರಾಲಜಿ ವಿಭಾಗಕ್ಕೆ ಉತ್ತರ ಮಲಬಾರ್ ಪ್ರದೇಶದಲ್ಲಿ ಸ್ವಂತ ಕಟ್ಟಡ ಹೊಂದಿರುವ ಜಿಲ್ಲೆ ಕಾಸರಗೋಡು ಆಗಲಿದೆ.