ಜಗತ್ತಿನ ನಾಗರೀಕತೆಯ ಆರಂಭದಿAದಲೂ ಮನುಷ್ಯನನ್ನು ಕಾಡಿದ ವಿಚಾರ ಸ್ವಾಥ್ಯ ಅಥವಾ ಆರೋಗ್ಯ ಕ್ಷೇತ್ರ. ಆರೋಗ್ಯ ವಿಭಾಗದ ಇಂದಿನ ಇಷ್ಟೊಂದು ಮುನ್ನಡೆಯ ಹಿಂದೆ ಅದೆಷ್ಟೋ ಸಾಧಕರು, ತತ್ವಜ್ಞಾನಿಗಳು, ವಿಜ್ಞಾನಿಗಳ ನಿರಂತರ ಕೊಡುಗೆ ತೆರೆಮರೆಯಲ್ಲಿ ಇದ್ದೇ ಇದೆ.
ಗಡಿನಾಡು ಕಾಸರಗೋಡು ನಾಲ್ಕು ದಶಕಗಳ ಹಿಂದೆ ಎಲ್ಲಿಯೂ ದಾಖಲೆಯಾಗದಷ್ಟು ಹಿನ್ನಡೆಯಲ್ಲಿತ್ತು. ಕುಗ್ರಾಮಗಳೇ ಇದ್ದೆ ಇಲ್ಲಿಯ ಒಂದಷ್ಟು ಮಂದಿ ಸಾಧನಾ ಶಿಖರದಲ್ಲಿ ಏರುವ ಕನಸುಗಳೊಂದಿಗೆ ಹೊರ ಪ್ರಪಂಚದತ್ತ ಮುಖಮಾಡಿ ಬಳಿಕ ತಮ್ಮ ಹುಟ್ಟೂರಿಗೇ ಮರಳಿ ಇಲ್ಲಿಯ ಬೆಳವಣಿಗೆಗೆ ಅಭೂತಪೂರ್ವ ಕೊಡುಗೆ ನೀಡಿದವರ ಪೈಕಿ ಪೈವಳಿಕೆ ಜೋಡುಕ್ಲು ಸಮೀಪದ ಕಯ್ಯಾರಿನ ಡಾ. ಪ್ರಭಾಕರ ಹೊಳ್ಳರೂ ಒಬ್ಬರು.
ಉಪ್ಪಳದಲ್ಲಿ ಕೆ.ಎನ್.ಎಚ್.ನರ್ಸಿಂಗ್ ಹೋಂ ನಿರ್ಮಿಸಿ ಸಾವಿರಾರು ಜನರಿಗೆ ನಾಲ್ಕು ದಶಕಗಳಿಂದ ಸೇವೆ ಸಲ್ಲಿಸಿ ಪ್ರಸ್ತುತ ಕುಟುಂಬದ ಮನೆಯಲ್ಲಿ ವಿಶ್ರಾಂತ ಜೀವನ ನಡೆಸುತ್ತಿರುವ ಡಾ.ಹೊಳ್ಳರೊಂದಿಗೆ ಸಮರಸ ಸುದ್ದಿ ನಡೆಸಿದ ಸಂವಾದ ಆಯ್ದ ಭಾಗ ವೀಕ್ಷಕರಿಗೆ.
ವೀಕ್ಷಿಸಿ, ಪ್ರೋತ್ಸಾಹಿಸಿ...............ಸಮರಸ ಸುದ್ದಿ ಕಾಸರಗೋಡಿನ ಪರಿಪೂರ್ಣ ಆನ್ ಲೈನ್ ಮಾಧ್ಯಮ. ಸಮಗ್ರ ಸುದ್ದಿ, ವಿಶೇಷ, ಅರಿವಿನ ವಿಸ್ತಾರತೆ ಮತ್ತು ಸದಾಶಯದ ಅಕ್ಷರ ಸ್ವರ್ಗ ಸಮರಸದ್ದು.
ಸಮರಸ ಸಂವಾದ: ವೈದ್ಯಕೀಯ ಕ್ಷೇತ್ರದ ಕೆಚ್ಚೆದೆಯ ಕೆ.ಎನ್.ಎಚ್: ಅತಿಥಿ: ಡಾ.ಪ್ರಭಾಕರ ಹೊಳ್ಳ ಕಯ್ಯಾರು
0
ಜುಲೈ 13, 2021
Tags