HEALTH TIPS

ಹಲವು ರಾಷ್ಟ್ರಗಳು ಕೋವಿಡ್ ಲಸಿಕೆ ನೀಡುವಲ್ಲಿ ವಿಫಲ: ಡಬ್ಲ್ಯುಎಚ್‌ಒ ಕಳವಳ

          ಲಂಡನ್: ಹಲವು ರಾಷ್ಟ್ರಗಳು ಕೋವಿಡ್ ಲಸಿಕೆ ನೀಡುವಲ್ಲಿ ವಿಫಲವಾಗಿದೆ ಎಂಬ ಬಗ್ಗೆ ಕಳವಳ ವ್ಯಕ್ತಪಡಿಸಿರುವ ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಡಾ. ಟೆಡ್ರೋಸ್ ಅಧಾನೊಮ್ ಘೆಬ್ರೆಯಸಸ್, ಸೆಪ್ಟೆಂಬರ್ ವೇಳೆಗೆ ಜಗತ್ತಿನ ಎಲ್ಲ ದೇಶಗಳ ಜನಸಂಖ್ಯೆಯ ಶೇಕಡಾ 10ರಷ್ಟು ಜನರಿಗೆ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

       'ಜಗತ್ತಿನೆಲ್ಲೆಡೆ ಕೋವಿಡ್-19 ಸಾಂಕ್ರಾಮಿಕ ರೋಗವನ್ನು ಕೊನೆಗೊಳಿಸುವ ವರೆಗೂ ನಾವದನ್ನು ಎಲ್ಲಿಯೂ ಕೊನೆಗೊಳಿಸಲಾಗದು' ಎಂದು ಎಚ್ಚರಿಸಿದರು.

         ಇಂಡಿಯಾ ಗ್ಲೋಬಲ್ ಫೋರಂನಲ್ಲಿ ವರ್ಚುವಲ್ ಆಗಿ ಭಾಗವಹಿಸಿದ ಅವರು, 'ಲಸಿಕೆಗಳ ಲಭ್ಯತೆಯಲ್ಲಿನ ಅಸಮಾನತೆಯು ಸಾಂಕ್ರಾಮಿಕ ರೋಗಕ್ಕೆ ಉತ್ತೇಜನವನ್ನು ನೀಡುತ್ತದೆ. ಕೆಲವು ರಾಷ್ಟ್ರಗಳು ಅಧಿಕ ಮಟ್ಟದ ವ್ಯಾಪ್ತಿಯನ್ನು ತಲುಪಿದ್ದರೂ, ಇನ್ನೂ ಅನೇಕ ರಾಷ್ಟ್ರಗಳಲ್ಲಿ ಆರೋಗ್ಯ ಕಾರ್ಯಕರ್ತರು, ವೃದ್ಧರು ಮತ್ತು ಇತರೆ ಸೋಂಕಿಗೆ ಒಳಗಾಗುವ ಅಪಾಯವಿರುವ ಗುಂಪುಗಳಲ್ಲಿ ಲಸಿಕೆ ಲಭ್ಯವಾಗಿಲ್ಲ' ಎಂದು ಹೇಳಿದ್ದಾರೆ.

           'ಕೆಲವು ರಾಷ್ಟ್ರಗಳಿಗೆ ಲಸಿಕೆ ಹಾಕಿಸಿಕೊಳ್ಳಲು ಸಾಧ್ಯವಾಗದಿದ್ದಾಗ ಅದು ಎಲ್ಲ ದೇಶಗಳಿಗೂ ಅಪಾಯಕಾರಿ' ಎಂದವರು ಎಚ್ಚರಿಸಿದರು.

          ಸೆಪ್ಟೆಂಬರ್ ವೇಳೆಗೆ ಪ್ರತಿ ದೇಶದ ಜನಸಂಖ್ಯೆಯ ಕನಿಷ್ಠ ಶೇಕಡಾ 10ರಷ್ಟು, ವರ್ಷಾಂತ್ಯಕ್ಕೆ ಶೇಕಡಾ 40ರಷ್ಟು ಮತ್ತು ಮುಂದಿನ ವರ್ಷ ಮಧ್ಯಂತರ ಅವಧಿಯಲ್ಲಿ ಕನಿಷ್ಠ 70ರಷ್ಟು ಮಂದಿ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಕರೆ ನೀಡಿದರು.

            'ಕೋವಿಡ್ ಲಸಿಕೆ ಸಮಾನವಾಗಿ ಹಂಚುವುದರಿಂದ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸುವ ಮೂಲಕ ಜಾಗತಿಕ ಆರ್ಥಿಕತೆಗೆ ಉತ್ತೇಜನ ನೀಡಲು ಸಾಧ್ಯವಾಗಲಿದೆ' ಎಂದವರು ಪ್ರತಿಪಾದಿಸಿದರು.

ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಪ್ರಕಾರ ವಿಶ್ವದಾದ್ಯಂತ 18.2 ಕೋಟಿ ಮಂದಿಗೆ ಕೋವಿಡ್ ಸೋಂಕು ತಗುಲಿದ್ದು, ಸರಿ ಸುಮಾರು 40 ಲಕ್ಷ ಜನರು ಮೃತಪಟ್ಟಿದ್ದಾರೆ. ಭಾರತದಲ್ಲಿ 3 ಕೋಟಿಗೂ ಹೆಚ್ಚು ಸೋಂಕು ಪ್ರಕರಣಗಳು ದಾಖಲಾಗಿದ್ದು, ನಾಲ್ಕು ಲಕ್ಷಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries