ಕಾಸರಗೋಡು: ಅಂತಾರಾಷ್ಟ್ರೀಯ ಮಾದಕ ಪದಾರ್ಥ ದಿನಾಚರಣೆ ಅಂಗವಾಗಿ ಕಾಸರಗೋಡು ಜಿಲ್ಲೆಯಲ್ಲಿ ಮಾದಕ ಪದಾರ್ಥ ವ್ಯಸನ ವಿರುದ್ಧ ಸಪ್ತಾಹಕ್ಕೆ ಚಲನೆ ನೀಡಲಾಯಿತು. ಸಮಾಜನೀತಿ ಇಲಾಖೆಯ ನೇತೃತ್ವದಲ್ಲಿ ಪೆÇಲೀಸ್, ಅಬಕಾರಿ, ಮಹಿಳಾ-ಶಿಶು ಅಭಿವೃದ್ಧಿ, ಶಿಕ್ಷಣ ಇಲಾಖೆಗಳು, ಕುಟುಂಬಶ್ರೀ ಮಿಷನ್, ನೆಹರೂ ಯುವಕೇಂದ್ರ, ಬೆಟರ್ ಲೈಫ್ ಫೌಂಡೇಷನ್ ಜಂಟಿ ಸಹಕಾರದೊಂದಿಗೆ ಒಂದು ವಾರ ಕಾಲ ವಿವಿಧ ಕಾರ್ಯಕ್ರಮಗಳು ಜರುಗಲಿವೆ.
ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಸಪ್ತಾಹಕ್ಕೆ ಚಾಲನೆ ನೀಡಿದರು. ಜಿಲ್ಲಾ ಸಮಾಜನೀತಿ ಅಧಿಕಾರಿ ಸಿ.ಕೆ.ಷೀಬಾ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಅಬಕಾರಿ ಕಮೀಷನರ್ ವಿನೋದ್ ಬಿ.ನಾಯರ್ ಮುಖ್ಯ ಅತಿಥಿಯಾಗಿದ್ದರು. ನಾರ್ಕೋಟಿಕ್ಸ್ ಡಿ.ವೈ.ಎಸ್.ಪಿ. ಟಿ.ಪಿ.ಪ್ರೇಮರಾಜನ್ ಪ್ರಧಾನ ಭಾಷಣ ಮಾಡಿದರು. ಜಿಲ್ಲಾ ಶಿಕ್ಷಣ ಉಪನಿರ್ದೇಶಕಿ ಕೆ.ವಿ.ಪುಷ್ಪಾ, ಜಿಲ್ಲಾ ಮಹಿಳಾ-ಶಿಶು ಅಭಿವೃದ್ಧಿ ಅಧಿಕಾರಿ ಕವಿತಾರಾಣಿ ರಂಜಿತ್, ಕುಟುಂಬಶ್ರೀ ಮಿಷನ್ ಜಿಲ್ಲಾ ಸಂಚಾಲಕ ಟಿ.ಟಿ.ಸುರೇಂದ್ರನ್, ಬೆಟರ್ ಲೈಫ್ ಫೌಂಡೇಷನ್ ಅಧ್ಯಕ್ಷ ಮೋಹನದಾಸ್ ಉಪಸ್ಥಿತರಿದ್ದರು. ಪೆÇ್ರಬೇಷನ್ ಅಧಿಕಾರಿ ಪಿ. ಬಿಜು ಸ್ವಾಗತಿಸಿದರು. ಎಂ.ಅಬ್ದುಲ್ಲ ವಂದಿಸಿದರು.