HEALTH TIPS

ಮದುವೆಯಾಗುವುದಾಗಿ ಸಂಬಂಧ ಬೆಳೆಸಿದ: ಕಿಡ್ನಿಯನ್ನು ಮಾರಿ ದುಡ್ಡಿನ ಜತೆ ಎಸ್ಕೇಪ್​ ಆದ!

              ಕೊಚ್ಚಿ: ಮದುವೆಯಾಗುವುದಾಗಿ ಮಹಿಳೆಯೊಬ್ಬಳ ಜತೆ ಸಂಬಂಧ ಬೆಳೆಸಿದ ವ್ಯಕ್ತಿಯೊಬ್ಬ ನಂತರ ಆಕೆಯ ಕಿಡ್ನಿಯನ್ನು ಮಾರಿ ಎಂಟು ಲಕ್ಷ ರೂಪಾಯಿಗಳ ಜತೆ ಪರಾರಿಯಾಗಿರುವ ಭಯಾನಕ ಘಟನೆ ಕೊಚ್ಚಿಯಲ್ಲಿ ನಡೆದಿದೆ.

           ಕೆಲ ವರ್ಷಗಳಿಂದ ಲಿವ್‌ ಇನ್‌ ರಿಲೇಷನ್‌ಶಿಪ್‌ನಲ್ಲಿ ಇದ್ದ ವ್ಯಕ್ತಿ ವಂಚಿಸಿ ಬಲವಂತವಾಗಿ ತಮ್ಮ ಮೂತ್ರಪಿಂಡವನ್ನು ಮಾರಾಟ ಮಾಡಿರುವುದಾಗಿ ಮಹಿಳೆ ಈಗ ದೂರಿದ್ದಾರೆ. ಸದ್ಯ ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಆರೋಪಿ ಮೊಹಮ್ಮದ್ ರನೀಶ್ ಹುಡುಕಾಟದಲ್ಲಿ ಪೊಲೀಸರು ತೊಡಗಿದ್ದಾರೆ.

           43 ವರ್ಷದ ಮಹಿಳೆ ಸೋಫಿಯಾ, ಮೊಹಮ್ಮದ್​ ಜತೆ ವರ್ಷದಿಂದ ಲಿವ್​ ಇನ್​ ರಿಲೇಷನ್​ನಲ್ಲಿ ಇದ್ದರು. ಹಣದ ಸಮಸ್ಯೆ ಇದ್ದ ಕಾರಣ, ಅದನ್ನು ಕೊನೆಗಾಣಿಸಲು ಕಿಡ್ನಿ ಮಾರಲು ಸೋಫಿಯಾರನ್ನು ಈತ ಒಪ್ಪಿಸಿದ್ದಾನೆ. ನಾಲ್ಕನೆಯ ತರಗತಿಯವರೆಗೆ ಮಾತ್ರ ಕಲಿತಿರುವ ಸೋಫಿಯಾಳದಿಂದ ಯಾವ್ಯಾವುದೋ ದಾಖಲೆಗಳಿಗೆ ಆತ ಸಹಿ ಹಾಕಿಸಿಕೊಂಡಿದ್ದಾನೆ. ಸ್ವ ಇಚ್ಛೆಯಿಂದ ಮೂತ್ರಪಿಂಡ ದಾನ ಮಾಡುತ್ತಿರುವುದಾಗಿ ಒಪ್ಪಿಗೆ ಸೂಚಿಸುವ ದಾಖಲೆ ಅದಾಗಿವೆ. ನಂತರ ಶಸ್ತ್ರಚಿಕಿತ್ಸೆ ಮೂಲಕ ಕಿಡ್ನಿ ತೆಗೆಸಿರುವ ಆತ, ಅದನ್ನು ಎಂಟು ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದಾನೆ.

               ಸಿಕ್ಕ ಹಣವನ್ನು ತನ್ನ ಬ್ಯಾಂಕ್ ಖಾತೆಗೆ ಈಕೆಯಿಂದ ವರ್ಗಾವಣೆ ಮಾಡಿಸಿಕೊಂಡಿದ್ದಾನೆ. ನಂತರ ಅಲ್ಲಿಂದ ಪರಾರಿಯಾಗಿದ್ದಾನೆ. ಆತ ಎಲ್ಲಿಯೂ ಸಿಗದಾಗ ಮಹಿಳೆಗೆ ತಾನು ಮೋಸ ಹೋಗಿರುವುದು ತಿಳಿದಿದ್ದು, ಈಗ ಪೊಲೀಸರಲ್ಲಿ ದೂರು ದಾಖಲು ಮಾಡಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries