ಆಟದಲ್ಲಿ ಪದಕ, ಟ್ರೋಫಿ ಗೆದ್ದಾಗ ಮುತ್ತಿಕ್ಕುವುದನ್ನು ನೋಡುತ್ತೇವೆ, ಆದರೆ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಸಿಕ್ಕಾಗ ಅದಕ್ಕೆ ಕಚ್ಚುವ ಸಂಪ್ರದಾಯವಿದೆ... ಆಟದಲ್ಲಿ ಗೆದ್ದ ವಿಜೇತರು ತಮ್ಮ ಸಿಕ್ಕ ಪದಕಕ್ಕೆ ಕಚ್ಚಿ ಪೋಸ್ ನೀಡುತ್ತಾರೆ.
ಪದಕಕ್ಕೆ ಏಕೆ ಕಚ್ಚುತ್ತಾರೆ. ಈ ಪದಕ ಕಚ್ಚುವುದರ ಹಿಂದಿನ ಇತಿಹಾಸವೇನು? ಎಂಬುವುದನ್ನು ತಿಳಿಯೋಣ ಬನ್ನಿ:
ಒಲಿಂಪಿಕ್ ಪದಕವನ್ನು ವಿಜೇತರು ಏಕೆ ಕಚ್ಚುತ್ತಾರೆ?
ಒಲಿಂಪಿಕ್ ಕ್ರೀಡಾಕೂಟವನ್ನು 1896ರಲ್ಲಿ ಪ್ರಾರಂಭಿಸಲಾಯಿತು. ಮೊದಲಿಗೆ ಚಿನ್ನದ ಬದಲಿಗೆ ಮೊದಲ ಬಹುಮಾನ ಬೆಳ್ಳಿಯದು, ಎರಡನೇಯ ಬಹುಮಾನ ಕಂಚಿನ ಪದಕ ನೀಡಲಾಗಿತ್ತು. ನಂತರ 1990ರಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ವಿಜೇತರಿಗೆ ಟ್ರೋಫಿ ಅಥವಾ ಕಪ್ ನೀಡಲಾಗಿತ್ತು. ಆದರೆ 1904ರಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಪ್ರಥಮ ಸ್ಥಾನ ಗಳಿಸಿದವರಿಗೆ ಶುದ್ಧ ಚಿನ್ನದಿಂದ ಮಾಡಿದ ಪದಕ ನೀಡಲಾಯಿತು. ಆದರೆ ಆ ರೀತಿ ಶುದ್ಧ ಚಿನ್ನದ ಪದಕವನ್ನು ಕೊನೆಯದಾಗಿ 1912ರಲ್ಲಿ ಸ್ಟೋಕ್‌ಹೋಂ ಸಮ್ಮರ್ ಒಲಿಂಪಿಕ್ಸ್‌ನಲ್ಲಿ ಮಾತ್ರ ನೀಡಲಾಯಿತು. ಅದಾದ ಬಳಿಕ ಮೊದಲನೇ ಮಹಾಯುದ್ಧವಾಯ್ತು, ಆಗ ಚಿನ್ನ ತುಂಬಾ ದುಬಾರಿಯಾಯ್ತು, ಆಗ ಚಿನ್ನದ ಪ್ರಮಾಣದ ಕಡಿಮೆ ಮಾಡಿ, 6ಗ್ರಾಂ ಚಿನ್ನ, ಸ್ವಲ್ಪ ಬೆಳ್ಳಿ, ಸ್ವಲ್ಪ ಕಂಚು ಮಿಶ್ರ ಮಾಡಿ ಪದಕ ತಯಾರಿಸಲಾಗುವುದು.
ಪದಕವನ್ನು ಕಚ್ಚುವ ಸಂಪ್ರದಾಯ
ಪದಕ ಶುದ್ಧ ಚಿನ್ನದ್ದೇ, ಅಲ್ಲವೇ ಎಂದು ಅದರ ಗುಣಮಟ್ಟ ಪರೀಕ್ಷಿಸಲು ಪದಕವನ್ನು ಕಚ್ಚಲಾಗುತ್ತಿತ್ತು. ಶುದ್ಧ ಚಿನ್ನ ಮೃದುವಾಗಿರುತ್ತದೆ, ಕಚ್ಚಿದಾಗ ಹಲ್ಲಿನ ಗುರುತು ಬೀಳುವುದು, ಆದರೆ ಈಗ ನೀಡುವ ಪದಕ ಶುದ್ಧ ಚಿನ್ನದಿಂದ ಮಾಡಿದ್ದಲ್ಲ, ಚಿನ್ನದ ಜೊತೆಗೆ ಬೆಳ್ಳಿ, ಕಂಚು ಮಿಶ್ರ ಮಾಡಿ ಪದಕ ತಯಾರಿಸಲಾಗುತ್ತಿತ್ತು, ಅದು ಗಟ್ಟಿಯಾಗಿರುತ್ತದೆ. ಆದರೂ ಪದಕವನ್ನು ಕಚ್ಚುವ ಸಂಪ್ರದಾಯ ಮುಂದುವರೆದಿದೆ.
ಬೇರೆ ಕ್ರೀಡಾಪಟುಗಳನ್ನು ನೋಡಿ ಸಂಪ್ರದಾಯ ಮುಂದುವರೆದಿದೆ
ಈ ಹಿಂದೆ ನಡೆದ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಸ್ಪರ್ಧಿಗಳು ಪದಕಕ್ಕೆ ಕಚ್ಚುವುದನ್ನು ನೋಡಿದ್ದೇವೆ, ಈಗೀನ ಸ್ಪರ್ಧಿಗಳು ಅದನ್ನು ನೋಡಿರುತ್ತಾರೆ, ಅದೇ ಸಂಪ್ರದಾಯ ಮುಂದುವರೆದಿದೆ, ಜೊತೆಗೆ ಪ್ರೋಟೋಗ್ರಾಫರ್‌ಗಳು ಕೂಡ ವಿಜೇತರಿಗೆ ಪದಕಕ್ಕೆ ಕಚ್ಚಿ ಪೋಸ್ ನೀಡಲು ಹೇಳುತ್ತಾರೆ, ಅವರು ಪೋಸ್ ಕೊಡುತ್ತಾರೆ, ಹೀಗಾಗಿ ಪದಕವನ್ನು ಕಚ್ಚುವ ಸಂಪ್ರದಾಯ ಮುಂದುವರೆದಿದೆ.