ಕಾಸರಗೋಡು: ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳ ಪ್ರಥಮ ಚಾತುರ್ಮಾಸ್ಯದ ಅಂಗವಾಗಿ ನಡೆಯುತ್ತಿರುವ ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಎರಡನೇ ದಿನವಾದ ನಿನ್ನೆ ಬಳ್ಳಪದವಿನ ನಾರಾಯಣೀಯಂನ ವೀಣಾವಾದಿನಿ ಸಂಗೀತ ಕಲಾಶಾಲೆಯ ವಿದ್ವಾನ್. ಯೋಗೀಶ ಶರ್ಮ ಬಳ್ಳಪದವು ಅವರಿಂದ ವಿದ್ವತ್ಪೂರ್ಣ ಸಂಗೀತಾರ್ಚನೆ ನೆರೆದವರನ್ನು ಮಂತ್ರಮುಗ್ದರನ್ನಾಗಿಸಿತು. ಇಳಿ ಸ್ಥಾಯಿಯಿಂದ ಆರಂಭಗೊಂಡ ಸಂಗೀತ ಕಚೇರಿ ಬಳಿಕ ಏರುಸ್ಥಾಯಿಯಲ್ಲಿ ಅಪಾರ ಜನಮೆಚ್ಚುಗೆಗೆ ಒಳಗಾಯಿತು. ವಿಶೇಷವಾಗಿ ಬಕುಳಾಭರಣ ರಾಗದ ಗಾಯನ ಮತ್ತು ಮಲೆಯಾಳಂ ಚಲನಚಿತ್ರ ಹಿಸ್ ಹೈನಸ್ ಅಬ್ದುಲ್ಲ ಚಿತ್ರದಲ್ಲಿ ಗಾನ ಗಂಧರ್ವ ಯೇಸುದಾಸ್ ಹಾಡಿ ರೋಮಾಂಚನಗೊಳಿಸಿದ ಗೀತೆ ಪ್ರಮದವನಂ ವೀಂಡುಂ ಗಾಯನ ಗಮನ ಸೆಳೆಯಿತು. ಶ್ರೀಸಚ್ಚಿದಾನಂದ ಭಾರತೀ ಶ್ರೀಗಳು ಉಪಸ್ಥಿತರಿದ್ದು ಹರಸಿದರು.
ಪಕ್ಕವಾದ್ಯದಲ್ಲಿ ವೈಕ್ಕಂ ಪ್ರಕಾಶ(ಮೃದಂಗ), ಮಂಞÁರ್ ರಂಜಿತ್(ವಯಲಿನ್) ಹಾಗೂ ಮಂಞÁರ್ ಉಣ್ಣಿಕೃಷ್ಣನ್(ಘಟಂ) ನಲ್ಲಿ ಸಹಕರಿಸಿದರು. ಕಾಸರಗೋಡು ಚಿನ್ನಾ ಸ್ವಾಗತಿಸಿ, ಶ್ರೀಕರ ಭಟ್ ವಂದಿಸಿದರು.