ತಿರುವನಂತಪುರ: ಲೋಕ ವಿಖ್ಯಾತ ಕೋಟಕಲ್ ಆರ್ಯವೈದ್ಯಶಾಲೆಯ ವ್ಯವಸ್ಥಾಪಕ ಟ್ರಸ್ಟಿ ಮತ್ತು ವೈದ್ಯಕೀಯ ನಿರ್ದೇಶಕ ಪದ್ಮಭೂಷಣ್. ಡಾ.ಪಿ.ಕೆ. ವಾರಿಯರ್ (100)ಇಂದು ವಯೋಸಹಜ ಕಾಯಿಲೆಯಿಂದ ನಿಧನರಾದರು. ಕೋಟ್ಟಕಲ್‍ನ ಕೈಲಾಸ ಮಂದಿರದಲ್ಲಿ ಕೊನೆಯುಸಿರೆಳೆದು ವೈದ್ಯಲೋಕಕ್ಕೆ ತುಂಬಲಾದ ನಷ್ಟವೆಂದೇ ಸಮಗ್ರ ವಲಯದಿಂದ ಮಾತುಗಳು ಕೇಳಿಬಂದಿದೆ. ಪಿ.ಕೆ ವಾರಿಯರ್ ಅವರು ಆಯುರ್ವೇದ ಶಿಕ್ಷಕರಾಗಿದ್ದರು, ಅವರು ಆಯುರ್ವೇದ ಚಿಕಿತ್ಸೆಗೆ ನೀಡಿದ ಕೊಡುಗೆಗಾಗಿ ದೇಶದ ಪದ್ಮಶ್ರೀ ಮತ್ತು ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿದ್ದರು.
ಪಿಕೆ ವಾರಿಯರ್ ಅವರ ನೂರರ ಜನ್ಮದಿನವನ್ನು ಜೂನ್ 5 ರಂದು ಆಚರಿಸಲಾಗಿತ್ತು. ಕೇರಳದ ವೈದ್ಯಕೀಯ ಪಾರಂಪರಿಕ ಶ್ರೀಮಂತಿಕೆಯನ್ನು ವಿಶ್ವದ ಮುಂಚೂಣಿಗೆ ತರುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ.
ಪಿಕೆ ವಾರಿಯರ್ ಅವರು ಕೊಟ್ಟಕಲ್ ಆರ್ಯವೈದ್ಯಶಾಲ ನಿವಾಸಿಯಾಗಿದ್ದರು. ಕಠಿಣ ಪರಿಶ್ರಮ ಮತ್ತು ಪ್ರಯೋಗಗಳ ಮೂಲಕ ಅವರು ಆಯುರ್ವೇದವನ್ನು ಸಂಪೂರ್ಣವಾಗಿ ಜಗತ್ತಿಗೆ ಪರಿಚಯಿಸಿದರು. ಆಯುರ್ವೇದ ಚಿಕಿತ್ಸೆಯನ್ನು ಕಲಿಯಲು ಪ್ರಪಂಚದಾದ್ಯಂತದ ಅನೇಕ ಜನರು ಕೇರಳಕ್ಕೆ ಬರುತ್ತಿದ್ದರು. ಡಾ.ಪಿಕೆ ವಾರಿಯರ್ ಅವರ ಚಿಕಿತ್ಸೆಗಾಗಿ ಪ್ರಧಾನಿಗಳು ಮತ್ತು ರಾಷ್ಟ್ರಪತಿ ಸೇರಿದಂತೆ ವಿ.ವಿ.ಐ.ಪಿಗಳು ಕೊಟ್ಟಾಯಂಗೆ ಬರುತ್ತಿದ್ದರು. .
1921 ರ ಜೂನ್ 5 ರಂದು ಮಲಪ್ಪುರಂ ಜಿಲ್ಲೆಯ ಕೊಟ್ಟಕ್ಕಲ್ ಗ್ರಾಮದಲ್ಲಿ ಜನಿಸಿದರು. ಅವರು ಶ್ರೀಧರನ್ ನಂಬೂದಿರಿ ಮತ್ತು ಪನ್ನಿಯಂಪಳ್ಳಿ ಕುನ್ಹಿವರಸ್ಯ ದಂಪತಿಯ ಮಗನಾಗಿ ಜನಿಸಿದರು. ಕೊಟ್ಟಕ್ಕಲ್ ರಾಜಸ್ ಪ್ರೌಢಶಾಲೆಯಲ್ಲಿ ಪ್ರೌಢ ಶಿಕ್ಷಣವನ್ನು ಮುಗಿಸಿದರು. ವೈದ್ಯರತ್ನ ಪಿಎಸ್ ವಾರಿಯರ್ ಆಯುರ್ವೇದ ಕಾಲೇಜಿನಲ್ಲಿ ವೈದ್ಯಕೀಯ ಅಧ್ಯಯನವನ್ನು ಮಾಡಿದ್ದರು.
ಆರ್ಯವೈದ್ಯಶಾಲೆಯ ಸಂಸ್ಫಾಪಕರಾದ ಡಾ.ಪಿ.ಎಸ್. ವಾರಿಯರ್ ಅವರ ಸೋದರಳಿಯನಾದ ಪಿಕೆ ವಾರಿಯರ್ ಮಾವನ ನಿಧನಾನಂತರ ಅಚವರ ಇಚ್ಚೆಯಂತೆ ಆರ್ಯವೈದ್ಯಶಾಲೆಯ ಜವಾಬ್ದಾರಿ ವಹಿಸಿ ಮುನ್ನಡೆಸಿದರು. ಬಳಿಕ ಅಂತರರಾಷ್ಟ್ರೀಯ ಮಟ್ಟಕ್ಕೆ ಹೆಸರುಗಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಪಿಕೆ ವಾರಿಯರ್ ಅವರನ್ನು ಆಯುರ್ವೇದ ವಿಜ್ಞಾನಕ್ಕೆ ಹೊಸದಿಶೆ ನೀಡಿದ ಪ್ರತಿಭೆ ಎಂದು ವಿಶ್ವವು ಗೌರವಿಸುತ್ತದೆ.
ಪಿಕೆ ವಾರಿಯರ್ ಅವರ ಆತ್ಮಚರಿತ್ರೆ ಸ್ಮೃತಿ ಪರ್ವಂ ಗೆ ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿದೆ. ಡಾ. ಪಿಕೆ ವಾರಿಯರ್ ಅವರು ಕೊಟ್ಟಕಲ್ ಆರ್ಯವೈದ್ಯಶಾಲೆಯನ್ನು ಭಾರತದಾದ್ಯಂತ ಮತ್ತು ವಿಶ್ವದಾದ್ಯಂತ ವಿಸ್ತರಿಸಿದರು. ಅವರಿಗೆ 1999 ರಲ್ಲಿ ಪದ್ಮಶ್ರೀ ಮತ್ತು 2009 ರಲ್ಲಿ ಪದ್ಮಭೂಷಣ ನೀಡಲಾಯಿತು.