HEALTH TIPS

ರೈಲಿನ ಟಿಕೆಟ್ ಕ್ಯಾನ್ಸಲ್ ಮಾಡಿದ್ರೆ ಎಷ್ಟು ಹಣ ವಾಪಸ್ ಬರತ್ತೆ? ಇಲ್ಲಿದೆ ಸಂಪೂರ್ಣ ಮಾಹಿತಿ

           ನವದೆಹಲಿ: ರೈಲಲ್ಲಿ ಪ್ರಯಾಣಿಸುವವರು ಒಂದು ವೇಳೆ ಅವರ ಟಿಕೆಟ್ ಕ್ಯಾನ್ಸೆಲ್ ಮಾಡಿದರೆ ಅದರ ಹಣ ವಾಪಸಾಗುವುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಈ ರೀತಿ ಹಣ ವಾಪಸು ಕೊಡಲೂ ಸಾಕಷ್ಟು ನಿಯಮವಿದೆ. ಯಾವ ಸಮಯದಲ್ಲಿ ಟಿಕೆಟ್ ಬುಕ್ ಆಗಿದೆ? ಯಾವ ಸಮಯದಲ್ಲಿ ಕ್ಯಾನ್ಸಲ್ ಆಗಿದೆ ಎನ್ನುವ ಹಲವು ವಿಚಾರಗಳನ್ನು ಗಮನಿಸಿಯೇ ಎಷ್ಟು ಹಣ ವಾಪಸು ಕೊಡಬೇಕು ಎನ್ನುವುದನ್ನು ನಿರ್ಧರಿಸಲಾಗುತ್ತದೆ.

                   ಟಿಕೆಟ್​ ಆರ್​ಎಸಿ ಅಥವಾ ವೇಟಿಂಗ್ ಲಿಸ್ಟ್​ನಲ್ಲಿದ್ದರೆ: 
        ಸಾಮಾನ್ಯವಾಗಿ ನೀವು ಟಿಕೆಟ್ ಕಾಯ್ದಿರಿಸಲು ಹೋದಾಗ ನಿಮ್ಮ ಟಿಕೆಟ್ ವೇಟಿಂಗ್​ ಲಿಸ್ಟ್ ಅಥವಾ ಆರ್​ಎಸಿಗೆ ಸೇರಿಕೊಳ್ಳಬಹುದು. ರೈಲು ಹೊರಡುವ ಕೆಲ ಸಮಯದ ಮೊದಲು ಚಾರ್ಟ್​ ನೀಡಲಾಗುವುದು. ಅದರಲ್ಲೂ ನಿಮ್ಮ ಟಿಕೆಟ್ ಕನ್ಫರ್ಮ್ ಆಗಿಲ್ಲವೆಂದಾದಲ್ಲಿ ನೀವು ರೈಲು ಹೊರಡುವುದಕ್ಕೆ ಅರ್ಧ ಗಂಟೆ ಮೊದಲು ಟಿಕೆಟ್ ಕ್ಯಾನ್ಸಲ್ ಮಾಡಿದರೆ ಸ್ಲೀಪರ್ ಕೋಚ್ ಟಿಕೆಟ್​ಗೆ 30 ರೂಪಾಯಿ ಹಾಗೂ ಎಸಿ ಕೋಚ್​ಗೆ 60 ರೂಪಾಯಿ ಶುಲ್ಕ ತೆಗೆದುಕೊಳ್ಳಲಾಗುವುದು.

ಕನ್ಫರ್ಮ್ ಟಿಕೆಟ್ ಆಗಿದ್ದರೆ:
               ನೀವು ಬುಕ್ ಮಾಡಿದ ಟಿಕೆಟ್ ಕನ್ಫರ್ಮ್ ಆಗಿದ್ದು, ನಿಮ್ಮ ಸೀಟಿನ ನಂಬರ್ ನಿಮಗೆ ಬಂದಿದ್ದರೆ ಅದಕ್ಕೆ ಸಮಯದ ಆಧಾರದ ಮೇಲೆ ಶುಲ್ಕ ಹಾಕಲಾಗುವುದು. ಫಸ್ಟ್ ಕ್ಲಾಸ್ ಎಸಿಗೆ 240 ರೂಪಾಯಿ, 2 ಎಸಿ/ ಫಸ್ಟ್ ಕ್ಲಾಸ್​ಗೆ 200 ರೂಪಾಯಿ, 3 ಎಸಿ/ಎಸಿಸಿ/ 3 ಎ ಎಕಾನಮಿಗೆ 180 ರೂಪಾಯಿ, ಸೆಕಂಡ್ ಸ್ಲೀಪರ್ ಕ್ಲಾಸ್​ಗೆ 120 ರೂಪಾಯಿ ಹಾಗೂ ಸೆಕೆಂಡ್ ಕ್ಲಾಸ್​ಗೆ 60 ರೂಪಾಯಿಯನ್ನು ಮಿನಿಮಮ್ ಚಾರ್ಜಸ್ ಎಂದು ಕಟ್ ಮಾಡಲಾಗುವುದು. ಹಾಗೆಯೇ ಒಂದು ವೇಳೆ ನೀವು ಟಿಕೆಟ್​ ಅನ್ನು ರೈಲು ಹೊರಡುವುದಕ್ಕೆ 12 ಗಂಟೆ ಮೊದಲು 48 ಗಂಟೆಗಳೊಳಗೆ ಕ್ಯಾನ್ಸಲ್ ಮಾಡಿದರೆ ಅದಕ್ಕೆ ಟಿಕೆಟ್​ನ ಶೇ. 25ನ್ನು ಕಟ್ ಮಾಡಲಾಗುವುದು. ಹಾಗೆಯೇ ರೈಲು ಹೊರಡುವುದಕ್ಕೆ 4 ಗಂಟೆಯ ಮೊದಲು 12 ಗಂಟೆಯ ಒಳಗೆ ಟಿಕೆಟ್ ಕ್ಯಾನ್ಸಲ್ ಮಾಡಿದರೆ ಟಿಕೆಟ್​ನ ಶೇ. 50 ಅನ್ನು ಕಟ್ ಮಾಡಲಾಗುತ್ತದೆ. ರೈಲು ಹೊರಡುವುದಕ್ಕೆ 4 ಗಂಟೆ ಮೊದಲು ಟಿಕೆಟ್ ಕ್ಯಾನ್ಸಲ್ ಮಾಡುವುದಕ್ಕೆ ಅವಕಾಶವಿಲ್ಲ ಹಾಗೆಯೇ ಆ ಹಣ ನಿಮಗೆ ವಾಪಸು ಬರುವುದಿಲ್ಲ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries