ನವದೆಹಲಿ: ಇಸ್ರೇಲಿ ಕಂಪೆನಿಯೊಂದು ಪ್ರಧಾನಿ ನರೇಂದ್ರ ಮೋದಿ, ಸಂಪುಟ ಸಚಿವರು, ಆರೆಸ್ಸೆಸ್ ನಾಯಕರು ಹಾಗೂ ಪತ್ರಕರ್ತರ ಫೋನ್ ಕದ್ದಾಲಿಕೆ ಮಾಡುತ್ತಿರುವುದಾಗಿ ಕನಿಷ್ಠ ಎರಡು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ತಯಾರಿಸುತ್ತಿದೆ ಎಂದು ಬಿಜೆಪಿ ರಾಜ್ಯಸಭಾ ಸಂಸದ ಸುಬ್ರಮಣಿಯನ್ ಸ್ವಾಮಿ ಸ್ಫೋಟಕ ಟ್ವೀಟ್ ಮಾಡಿದ್ದಾರೆ.
ಇಂದು ಸಂಜೆ ವಾಷಿಂಗ್ಟನ್ ಪೋಸ್ಟ್, ಲಂಡನ್ ಗಾರ್ಡಿಯನ್ ನಂತಹ ಪ್ರತಿಷ್ಠಿತ ಮಾಧ್ಯಮಗಳು, ಪ್ರಧಾನಿ ಮದಿಯ ಕ್ಯಾಬಿನೆಟ್ ಸಚಿವರು, ಆರೆಸ್ಸೆಸ್ ನಾಯಕರು, ಸುಪ್ರೀಂಕೋರ್ಟ್ ನ್ಯಾಯಾಧೀಶರು ಹಾಗೂ ಪತ್ರಕರ್ತರ ಫೋನ್ ಗಳನ್ನು ಟ್ಯಾಪ್ ಮಾಡಲೆಂದು ಇಸ್ರೇಲಿ ಸಂಸ್ಥೆ ಪೆಗಾಸಸ್ ನೇಮಕವನ್ನು ವರದಿಯನ್ನು ಪ್ರಕಟಿಸಲಿದೆ ಎಂಬ ವದಂತಿ ಹರಡಿದೆ. ಒಂದು ವೇಳೆ ವರದಿಯಾದರೆ ನಾನು ಪಟ್ಟಿ ಪ್ರಕಟಿಸುತ್ತೇನೆ" ಎಂದು ಅವರು ಟ್ವೀಟ್ ಮಾಡಿದ್ದಾರೆ.
ನೀವು ಕೂಡಾ ಈ ಪ್ರಕರಣದಲ್ಲಿ ಗುರಿಯಾಗಿದ್ದೀರೇ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, "ತಾನು ವದಂತಿಗಳು ಸತ್ಯದಿಂದ ಹೊರ ಹೊಮ್ಮಿದಾಗ ಮಾತ್ರ ಉಲ್ಲೇಖಿಸುತ್ತೇನೆ. ಸತ್ಯವನ್ನು ಇಂದು ದಾಖಲಿಸಬೇಕಾದ ಅವಶ್ಯಕತೆಯಿದೆ. ಆದ್ದರಿಂದ ೨ಜಿ, ಏರ್ ಸೆಲ್, ಮ್ಯಾಕ್ಸಿಸ್, ನ್ಯಾಶನಲ್ ಹೆರಾಲ್ಡ್ ಮುಂತಾದ ವಿಚಾರದಲ್ಲಿ ನ್ಯಾಯಾಲಯಕ್ಕೆ ತೆರಳಲು ನನ್ನಲ್ಲಿ ಬಹಳಷ್ಟು ದಾಖಲೆಗಳಿವೆ. ನಾನು ಕೂಡಾ ಈ ಪ್ರಕರಣದ ಬಲಿಪಶು ಎಂದು ಕಂಡುಕೊಂಡರೆ ಸುಪ್ರೀಂಕೋರ್ಟ್ ಮೊರೆ ಹೋಗುತ್ತೇನೆಂದು ಸ್ವಾಮಿ ತಿಳಿಸಿದ್ದಾರೆ.