ಕುಂಬಳೆ: ಎರಡೂವರೆ ಶತಮಾನಗಳಷ್ಟು ಇತಿಹಾಸವಿರುವ ಆರಿಕ್ಕಾಡಿ ಒಡ್ಡಿನಬಾಗಿಲು ಹಿಂದೂ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆಗಳನ್ನು ನಡೆಸಲು ಸ್ಥಳೀಯಾಡಳಿತ ಅನುಮತಿ ನೀಡಬೇಕು ಎಂದು ಆರಿಕ್ಕಾಡಿ ಒಡ್ಡಿನಬಾಗಿಲು ಹಿಂದೂ ಪರಿಶಿಷ್ಟ ಜಾತಿ ಮತ್ತು ವರ್ಗ ರುದ್ರಭೂಮಿ ಸಂರಕ್ಷಣಾ ಸಮಿತಿ ಪದಾಧಿüಕಾರಿಗಳು ಸೋಮವಾರ ಕುಂಬಳೆ ಪ್ರೆಸ್ ಪೋರಂ ನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಇಲ್ಲಿನ ರುದ್ರಭೂಮಿಗೆ ನಿಗದಿಪಡಿಸಿದ ಒಂದು ಎಕರೆ ಭೂಮಿಯಲ್ಲಿ ಕಳೆದ ಹತ್ತು ವರ್ಷಗಳ ಹಿಂದೆ ನಡೆಸಲಾಗಿದ್ದ ವ್ಯಕ್ತಿಯೊಬ್ಬರ ಅಂತ್ಯಕ್ರಿಯೆಯ ಬಳಿಕ ಶ್ವಾನವೊಂದು ಮೂಳೆಯ ತುಂಡೊAದನ್ನು ಸಮೀಪದ ಸ್ಥಳೀಯ ವ್ಯಕ್ತಿಯೊಬ್ಬರ ಅ|ಂಗಳದಲ್ಲಿ ಉಪೇಕ್ಷಿಸಿದ ಬಳಿಕ ಖಾಸಗೀ ವ್ಯಕ್ತಿಯು ಆ ಮೂಳೆ ಅರ್ಧ ದಹಿಸಿದ ದೇಹದ್ದೆಂದು ಆರೋಪಿಸಿ ಕುಂಬಳೆ ಪೋಲೀಸರಿಗೆ ದೂರು ನೀಡಿದ್ದರು. ಬಳಿಕ ಖಾಸಗೀ ವ್ಯಕ್ತಿಯು ನಿರಂತರವಾಗಿ ಶವ ದಹನಕ್ಕೆ ಅಡ್ಡಿಪಡಿಸಿದ್ದು, ಬಳಿಕ ಪೋಲೀಸರೂ ದಹನ ಮಾಡದಂತೆ ತಡೆಹಿಡಿದರು.
ಸ್ಥಳೀಯ ನಿವಾಸಿಗಳು ಖಾಸಗೀ ವ್ಯಕ್ತಿಯ ಅಡ್ಡಿಯ ಬಗ್ಗೆ ಗ್ರಾಮ ಪಂಚಾಯಿತಿಗೆ ದೂರು ನೀಡಿದರೂ ಅಧಿಕಾರಿಗಳು ನಿರ್ಲಕ್ಷö್ಯ ಧೋರಣೆ ತಳೆದಿದ್ದರು. ಈ ಪ್ರದೇಶದ ನಾಗರಿಕರು ಪ್ರಸ್ತುತ ಕಳೆದ ಹತ್ತು ವರ್ಷಗಳಿಂದ ಐದು ಕಿಲೋಮೀಟರ್ ದೂರದಲ್ಲಿರುವ ಕುಂಬಳೆಯಲ್ಲಿರುವ ಸಾರ್ವಜನಿಕ ಸ್ಮಶಾನದಲ್ಲಿ ಸಮಾಧಿಗಾಗಿ ಅವಲಂಬಿಸಿದ್ದಾರೆ.
ಈ ಬಗ್ಗೆ ಒಡ್ಡಿನಬಾಗಿಲು ರುದ್ರಭೂಮಿ ಸಂರಕ್ಷಣಾ ಸಮಿತಿ ರೂಪಿಸಿ ರುದ್ರಭೂಮಿ ಭೂ ದಾಖಲೆಗಳನ್ನು ಪರಿಶೀಲಿಸಿದಾಗ 85 ಸೆಂಟ್ಸ್ ಭೂಮಿಯನ್ನು ವಿಶೇಷವಾಗಿ ತಾಲ್ಲೂಕು ಕಚೇರಿಯ ದಾಖಲೆಗಳಲ್ಲಿ ಗುರುತಿಸಲಾಗಿದೆ. ಆದರೆ ಇದು ವರ್ಷಗಳ ಹಿಂದೆ ಕುಂಬಳೆ ಪಂಚಾಯತಿಯ ದಾಖಲೆಗಳಲ್ಲೂ ದಾಖಲಾಗಿರುವುದು ಋಜುಪಡಿಸಲಾಗಿದೆ. ಏತನ್ಮಧ್ಯೆ, ಕುಂಬಳೆ ಗ್ರಾಮ ಪಂಚಾಯತಿಯ 1961 ರಲ್ಲಿ ರುದ್ರ ಭೂಮಿ ಎಂದು ಸ್ಥಾಪಿಸಲಾದ ನಾಮಫಲಕ ಬದಲಾಯಿಸಿ ಕಾನೂನುಬಾಹಿರವಾಗಿ ರುದ್ರಭೂಮಿಯ ಮಧ್ಯಭಾಗದಲ್ಲಿ ಹಾದುಗೋಗುವ ಹಾಗೆ ರಸ್ತೆ ನಿರ್ಮಿಸಿ ಶವ ಸಂಸ್ಕಾರಕ್ಕೆ ಅಡ್ಡಿಯುಂಟುಮಾಡಿದೆ ಎಂದು ಸಮಿತಿ ಆರೋಪಿಸಿದೆ.
ಜಿಲ್ಲಾಧಿಕಾರಿ, ಮಾನವ ಹಕ್ಕುಗಳ ಆಯೋಗ, ಎಸ್‌ಸಿ ಆಯುಕ್ತರು, ಭೂ ವಿಜಿಲೆನ್ಸ್ ಆಯುಕ್ತರು, ಜಿಲ್ಲಾ ಪಂಚಾಯತಿ ಮತ್ತು ಪ್ರಧಾನ ಮಂತ್ರಿಗೆ ದೂರು ನೀಡಲಾಗಿದ್ದು, ಈ ಬಗ್ಗೆ ವಿಚಾರಿಸಲು ಸಂಬAಧಪಟ್ಟ ಅಧಿಕಾರಿಗಳಿಗೆ ಪ್ರಧಾನಿ ಕಚೇರಿ ಈಗಾಗಲೇ ನಿರ್ದೇಶನ ನೀಡಿದೆ. ಮತ್ತು ಪರಿಶಿಷ್ಟ ಜಾತಿ ಆಯುಕ್ತರು ಮತ್ತು ಪರಿಶಿಷ್ಟ ಪಂಗಡಗಳ ಅಧಿಕೃತರು ಈ ಬಗ್ಗೆ ವಿಚಾರಿಸಿ ಭೂಮಿಯನ್ನು ಶವ ಸಂಸ್ಕಾರಕ್ಕಾಗಿ ಪಂಚಾಯತಿ ಆಸ್ತಿ ರಿಜಿಸ್ಟರ್‌ಗೆ ಸೇರಿಸಬೇಕಾಗಿದೆ. ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು 2020 ರ ಜೂನ್ 25 ರಂದು ಪಂಚಾಯಿತಿಗೆ ನಿರ್ದೇಶನ ನೀಡಲಾಗಿದೆ ಎಂದು ಪದಾಧಿಕಾರಿಗಳು ತಿಳಿಸಿದ್ದಾರೆ.(ಆದೇಶ ಸಂಖ್ಯೆ 355/ಬಿ4/2019/ಕೆ.ಎಸ್.ಡಿ./ಕೆ.ಎಸ್.ಸಿ.ಎಸ್.ಸಿ. ಮತ್ತು ಎಸ್.ಟಿ.ಡಿ.ಟಿ.25-06-2020). ಆದರೆ, ಗ್ರಾಮ ಪಂಚಾಯತಿ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದ ದಿವ್ಯ ನಿರ್ಲಕ್ಯ ವಹಿಸಿದ ಕಾರಣ, ಗ್ರಾ.ಪಂ. ಕಾರ್ಯಾಲಯದ ಮುಂದೆ ಸಾರ್ವಜನಿಕ ಸಹಭಾಗಿತ್ವದೊಂದಿಗೆ ಧರಣಿ ಸತ್ಯಾಗ್ರಮ ಆಯೋಜಿಸುವುದಾಗಿ ಸಂರಕ್ಷಣಾ ಸಮಿತಿ ಪದಾಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಆರಿಕ್ಕಾಡಿ ಒಡ್ಡಿನಬಾಗಿಲು ಹಿಂದೂ ಪರಿಶಿಷ್ಟ ಜಾತಿ ಮತ್ತು ವರ್ಗ ರುದ್ರಭೂಮಿ ಸಂರಕ್ಷಣಾ ಸಮಿತಿ ಪದಾಧಿಕಾರಿಗಳಾದ ಜಯರಾಮ ಪೂಜಾರಿ, ಆನಂದ, ಪದ್ಮನಾಭ, ಸುಂದರ, ರಾಮ ಉಪಸ್ಥಿತರಿದ್ದು ಮಾಹಿತಿ ನೀಡಿದರು.