ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನ ಹಿನ್ನೆಲೆಯಲ್ಲಿ ಉಭಯ ಸದನಗಳಲ್ಲಿ ಕಾರ್ಯಕಲಾಪ ಸುಗಮವಾಗಿ ಸಾಗಲು ಅನುವುವಾಗುವಂತೆ ಕಾಂಗ್ರೆಸ್ ಪಕ್ಷದ ಸದಸ್ಯರ ಗುಂಪುನ್ನು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಪುನರ್ ರಚಿಸಿದ್ದಾರೆ.
ಲೋಕಸಭೆಯಲ್ಲಿ ಅಧೀರ್ ರಂಜನ್ ಚೌದರಿ ನಾಯಕರಾಗಿದ್ದು, ಗೌರವ್ ಗೊಗೊಯ್ ಉಪನಾಯಕರಾಗಿದ್ದಾರೆ. ಕೆ. ಸುರೇಶ್ - ಮುಖ್ಯ ವಿಪ್ ,ಮನೀಶ್ ತಿವಾರಿ ಡಾ. ಶಶಿ ತರೂರ್, ರಾವ್ನೀತ್ ಸಿಂಗ್ ಬಿಟ್ಟು- ವಿಪ್ ,ಮಾಣಿಕಂ ಟ್ಯಾಗೋರ್- ವಿಪ್ ಆಗಿ ನೇಮಕಗೊಂಡಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ರಾಜ್ಯಸಭೆಯ ನಾಯಕರಾಗಿದ್ದು, ಆನಂದ್ ಶರ್ಮಾ ಉಪನಾಯಕರಾಗಿದ್ದಾರೆ. ಜೈರಾಮ್ ರಮೇಶ್- ಮುಖ್ಯ ವಿಪ್ ,ಅಂಬಿಕಾ ಸೋನಿ, ಪಿ. ಚಿದಂಬರಂ, ದಿಗ್ವಿಜಯ್ ಸಿಂಗ್ ಕೆ. ಸಿ. ವೇಣುಗೋಪಾಲ್ ಉಳಿದ ಸದಸ್ಯರಾಗಿದ್ದಾರೆ.
ಈ ಗುಂಪುಗಳ ಜಂಟಿ ಸಭೆಗಳನ್ನು ಕರೆಯಬಹುದಾಗಿದೆ ಮತ್ತು ಅಗತ್ಯವಿದ್ದಾಗ ಮಲ್ಲಿಕಾರ್ಜುನ ಖರ್ಗೆ ಜಂಟಿ ಸಭೆಗಳ
ಕನ್ವೀನರ್ ಆಗಿರುತ್ತಾರೆ ಎಂದು ಸೋನಿಯಾ ಗಾಂಧಿ ತಿಳಿಸಿದ್ದಾರೆ.