ಮಧೂರು: ಸಂಕಷ್ಟಹರ ಚತುರ್ಥೀ ಅಂಗವಾಗಿ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಾಲಯದಲ್ಲಿ ಮಂಗಳವಾರ ವಿಶೇಷ ಪೂಜೆ ನೆರವೇರಿತು. ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಅವರ ನೇತೃತ್ವದಲ್ಲಿ ಕಾರ್ಯಕ್ರಮ ಜರುಗಿತು. ಬೆಳಗ್ಗೆ ವಿಶೇಷ ಗಣಪತಿ ಹೋಮ, ಸಹಸ್ರ ಅಪ್ಪ ಸೇವೆ, ವೇದ ಪಾರಾಯಣ, ಮೋದಕ ಹವನ ಸೇವೆ, ಸಂಕಷ್ಟ ಚತುರ್ಥೀ ಪೂಜೆ ನೆರವೇರಿತು.