ತಿರುವನಂತಪುರ: ರಾಜ್ಯದಲ್ಲಿ ಕೋವಿಡ್ ಪರೀಕ್ಷಾ ಸಕಾರಾತ್ಮಕತೆ ಪ್ರಮಾಣ 10 ಕ್ಕಿಂತ ಹೆಚ್ಚಿರುವುದರಿಂದ ಮುಖ್ಯಮಂತ್ರಿಯವರ ನೇತೃತ್ವದಲ್ಲಿ ಇಂದು ನಿರ್ಣಾಯಕ ಸಭೆ ನಡೆಯಲಿದೆ. ಲಾಕ್‍ಡೌನ್ ನಿಬಂಧನೆÀಗಳಲ್ಲಿ ಮತ್ತಷ್ಟು ವಿನಾಯ್ತಿಗಳು ಬೇಕೇ ಎಂದು ಚರ್ಚಿಸಲಾಗುವುದು. ನಿಬಂಧನೆಗಳಿರುತ್ತಾ ಟಿಪಿಆರ್ ದರ ಕಡಿಮೆಯಾಗದಿರುವ ಬಗ್ಗೆ ಸಭೆಯಲ್ಲಿ ಚರ್ಚಿಸುವ ಸಾಧ್ಯತೆಗಳಿವೆ. ಏತನ್ಮಧ್ಯೆ ಕೇರಳದ ಕೋವಿಡ್ ಪರಿಸ್ಥಿತಿಯನ್ನು ಅವಲೋಕನ ನಡೆಸಲು ಕೇಂದ್ರ ತಂಡ ಕೇರಳಕ್ಕೆ ಆಗಮಿಸಿದೆ.
ಕೇರಳ ತಲಪಿದ ಕೇಂದ್ರ ತಂಡ:
ರಾಜ್ಯದ ಕೋವಿಡ್ ಪರಿಸ್ಥಿತಿಯನ್ನು ಅವಲೋಕನ ನಡೆಸಲು ಕೇಂದ್ರ ತಂಡ ಕೇರಳಕ್ಕೆ ಆಗಮಿಸಿದೆ. ಸೋಂಕು ಹರಡುವಿಕೆಯು ಹೆಚ್ಚುತ್ತಿರುವುದರಿಂದ ಪರಿಸ್ಥಿತಿಯನ್ನು ನಿರ್ಣಯಿಸಲು ತಜ್ಞರ ತಂಡ ಭೇಟಿ ನೀಡಿದೆ. ವರದಿಯ ಪ್ರಕಾರ, ಕೇಂದ್ರ ತಂಡವು ಟಿಪಿಆರ್ ಕಡಿಮೆ ಮತ್ತು ಪ್ರಕರಣಗಳ ಸಂಖ್ಯೆ ದಿನಕ್ಕೆ 10,000 ಕ್ಕಿಂತ ಹೆಚ್ಚಿದೆಯೇ ಎಂದು ನಿರ್ಣಯಿಸುತ್ತದೆ.
ತಜ್ಞರ ತಂಡ ಆರು ರಾಜ್ಯಗಳಿಗೆ ಭೇಟಿ:
ಕೇಂದ್ರವು ತಜ್ಞರ ತಂಡವನ್ನು ಕೇರಳ ಸೇರಿದಂತೆ ಆರು ರಾಜ್ಯಗಳಿಗೆ ಕಳುಹಿಸಿದೆ, ಇದರಲ್ಲಿ ಅತಿ ಹೆಚ್ಚು ಕೋವಿಡ್ ಪ್ರಕರಣಗಳಿರುವ ರಾಜ್ಯಗಳಾಗಿವೆ. ಈ ತಂಡವು ಅರುಣಾಚಲ ಪ್ರದೇಶ, ತ್ರಿಪುರ, ಒಡಿಶಾ, ಛತ್ತೀಸ್‍ಗಡ, ಮಣಿಪುರ ಮತ್ತು ಕೇರಳಕ್ಕೆ ಭೇಟಿ ನೀಡಲಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಇಬ್ಬರು ಸದಸ್ಯರ ತಂಡ ಪ್ರತಿ ರಾಜ್ಯಕ್ಕೂ ಭೇಟಿ ನೀಡುತ್ತಿದೆ. ತಂಡವು ವೈದ್ಯರು ಮತ್ತು ಸಾರ್ವಜನಿಕ ಆರೋಗ್ಯ ತಜ್ಞರನ್ನು ಒಳಗೊಂಡಿರುತ್ತದೆ.
ಲಾಕ್‍ಡೌನ್ ನಿಬಂಧನೆಗಳ ಕುರಿತು ಚರ್ಚಿಸಲಿರುವ ಸಿ.ಎಂ.:
ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ ಇಂದು ಸೇರಿ ರಾಜ್ಯದಲ್ಲಿ ಲಾಕ್‍ಡೌನ್ ನಿಬರ್ಂಧಗಳನ್ನು ಮತ್ತಷ್ಟು ಸಡಿಲಿಸುವ ಕುರಿತು ಚರ್ಚಿಸಲಿದೆ. ಟಿಪಿಆರ್ ಹತ್ತಕ್ಕಿಂತ ಕಡಿಮೆಯಾಗದಿದ್ದಲ್ಲಿ ನಿಯಮಗಳಲ್ಲಿ ಹೊಸ ಅನ್ ಲಾಕ್ ಗೆ ಅವಕಾಶ ನೀಡಬೇಕೆ ಎಂದು ಉನ್ನತ ಮಟ್ಟದ ಸಭೆಯಲ್ಲಿ ಚರ್ಚಿಸಲಾಗುವುದು. ಪ್ರಸ್ತುತ ನಿಬರ್ಂಧಗಳು ಮುಂದುವರಿಯುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಲಾಕ್‍ಡೌನ್ ನಿಬರ್ಂಧಗಳ ಮೂಲಕ ಟಿಪಿಆರ್ ಅನ್ನು ಐದಕ್ಕಿಂತ ಕಡಿಮೆ ತರಲು ಸರ್ಕಾರ ಉದ್ದೇಶಿಸಿದೆ. ಆದರೆ ಟಿಪಿಆರ್ ಇನ್ನೂ ಹತ್ತಕ್ಕಿಂತ ಮೇಲಿದೆ.