ತಿರುವನಂತಪುರ: ರಾಜ್ಯ ಜೈಲು ಮುಖ್ಯಸ್ಥ ಋಷಿರಾಜ್ ಸಿಂಗ್ ಇಂದು ನಿವೃತ್ತರಾಗಲಿದ್ದಾರೆ. 36 ವರ್ಷಗಳ ಸುಧೀರ್ಘ ಸೇವಾವಧಿಯ ಬಳಿಕಿಂದವರು ನಿವೃತ್ತರಾಗುತ್ತಿದ್ದಾರೆ. ನಿವೃತ್ತಿಯ ನಂತರವೂ ತಾನು ಕೇರಳದಲ್ಲಿಯೇ ಇರುತ್ತೇನೆ ಎಂದು ಋಷಿರಾಜ್ ಸಿಂಗ್ ಹೇಳಿದ್ದಾರೆ.
ನಗರಗಳ ಸ್ವಚ್ಛಗೊಳಿಸುವಿಕೆ, ಮುನ್ನಾರ್‌ನಲ್ಲಿನ ಅತಿಕ್ರಮಣಗಳನ್ನು ತೆರವುಗೊಳಿಸುವಿಕೆ, ನಕಲಿ ಸಿಡಿಗಳ ನಿಗ್ರಹ, ನಕಲಿ ಮದ್ಯ ಮಾಫಿಯಾ ಮತ್ತು ವಿದ್ಯುತ್ ಕದಿಯುವಿಕೆ ನಿಯಂತ್ರಣಗಳೇ ಮೊದಲಾದ ಗಂಭೀರ ವಿಷಯಗಳಲ್ಲಿ ಋಷಿರಾಜ್ ಸಿಂಗ್ ವಿಶೇಷ ಕಾರ್ಯಾಚರಣೆಗಳನ್ನು ನಡೆಸಿದ್ದಾರೆ.
ಜೈಲು ಡಿಜಿಪಿ ಮತ್ತು ಸಾರಿಗೆ ಆಯುಕ್ತರು ಸೇರಿದಂತೆ ಹಲವಾರು ಪ್ರಮುಖ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. 1985 ನೇ ಬ್ಯಾಚ್ ನ ಐಪಿಎಸ್ ಅಧಿಕಾರಿಯಾಗಿದ್ದ ಋಷಿರಾಜ್ ಸಿಂಗ್ 24 ನೇ ವಯಸ್ಸಿನಲ್ಲಿ ಕೇರಳಕ್ಕೆ ಬಂದವರು.