ತಿರುವನಂತಪುರ: ರಾಜ್ಯದಲ್ಲಿ ನಿನ್ನೆ ಐವರಲ್ಲಿ ಝಿಕಾ ವೈರಸ್ ಇರುವುದು ಪತ್ತೆಯಾಗಿದೆ. ಈ ಬಗ್ಗೆ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ನೆಯ್ಯಾಟಿಂಗರದ 35ರ ಹರೆಯದ ವ್ಯಕ್ತಿ, ಪೆಟ್ಟಾದ 44 ವರ್ಷದ, ನೇಮಂ ನ 27 ವರ್ಷದ, ವೆಲ್ಲಯಂಬಲಂನ 32 ವರ್ಷ ಮತ್ತು ಎರ್ನಾಕುಳಂನಲ್ಲಿ ಕೆಲಸ ಮಾಡುವ ತಿರುವನಂತಪುರದ 36 ವರ್ಷದ ವ್ಯಕ್ತಿಗಲಲ್ಲಿ ಈ ವೈರಸ್ ದೃಢಪಟ್ಟಿದೆ. ಸಾರ್ವಜನಿಕ ಆರೋಗ್ಯ ಪ್ರಯೋಗಾಲಯ, ತಿರುವನಂತಪುರಂ ವೈದ್ಯಕೀಯ ಕಾಲೇಜು ವೈರಾಲಜಿ ಲ್ಯಾಬ್, ಎನ್.ಐ.ವಿ. ಆಲಪ್ಪುಳದಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದ್ದು, ವೈರಸ್ ಸೋಂಕಿರುವುದು ಕಂಡುಬಂದಿದೆ. ಇದು ರಾಜ್ಯದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆಯನ್ನು 61 ಕ್ಕೆ ಏರಿಸಿದೆ.
ಪ್ರಸ್ತುತ 7 ರೋಗಿಗಳು ಚಿಕಿತ್ಸೆಯಲ್ಲಿದ್ದಾರೆ. ಅವರಲ್ಲಿ ಯಾರಿಗೂ ಗಂಭೀರ ಸ್ವರೂಪದ ಸೋಂಕು ಕಂಡುಬಂದಿಲ್ಲ. ಆಸ್ಪತ್ರೆಗೆ ಸೇರಿಸಲಾಗಿಲ್ಲ. ಪ್ರತಿಯೊಬ್ಬರ ಆರೋಗ್ಯವೂ ತೃಪ್ತಿದಾಯಕವಾಗಿದೆ.