HEALTH TIPS

ಧರ್ಮಸ್ಥಳ, ಕುಕ್ಕೆ ದೇವಳಗಳು ನಾಳೆಯಿಂದ ಭಕ್ತಾದಿಗಳಿಗೆ ಮುಕ್ತ: ಹಲವು ನಿಯಮಗಳ ಅನುಸರಣೆಯೂ ಅಗತ್ಯ

                ಮಂಗಳೂರು; ಸೋಮವಾರದಿಂದ ಕರ್ನಾಟಕ ರಾಜ್ಯಾದ್ಯಂತ ದೇಗುಲಗಳು ಬಾಗಿಲು ತೆರೆಯಲಿವೆ. ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ದೇವಸ್ಥಾನಗಳೂ ಭಕ್ತರಿಗೆ ದೇವರ ದರ್ಶನದ ವ್ಯವಸ್ಥೆ ಮಾಡಿವೆ. ಪ್ರಮುಖವಾಗಿ ಇತಿಹಾಸ ಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಹಲವು ಮಾರ್ಪಾಡುಗಳನ್ನು ಮಾಡಲಾಗಿದೆ‌.


            ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಂಗಳಾರತಿ ಸೇವೆಯನ್ನು ಹೊರತುಪಡಿಸಿ ಉಳಿದ ಯಾವುದೇ ಸೇವೆಗಳ ವ್ಯವಸ್ಥೆ ಇಲ್ಲ. ಪ್ರತಿ 15 ನಿಮಿಷಕ್ಕೊಮ್ಮೆ ಭಕ್ತಾಧಿಗಳಿಗಾಗಿ ದೇವರಿಗೆ ಮಂಗಳಾರತಿ ಸೇವೆ ಮಾಡಲಾಗುತ್ತದೆ. ಕೋವಿಡ್‌ನ ಎಲ್ಲಾ ಮಾರ್ಗಸೂಚಿಗಳನ್ನು ಪಾಲಿಸಿಕೊಂಡು ದರ್ಶನ ಪಡೆಯಬೇಕು.

        ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಕ್ಷೇತ್ರದಲ್ಲಿ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ದೇವಸ್ಥಾನದ ಹೊರಾಂಗಣ ಹಾಗೂ ಒಳಾಂಗಣದಲ್ಲಿ ಸಾಮಾಜಿಕ ಅಂತರದ ಗುರುತುಗಳನ್ನು ಮಾಡಲಾಗಿದೆ. ಭಕ್ತರು ಸಹ ಸಹಕಾರ ನೀಡಲು ಮನವಿ ಮಾಡಲಾಗಿದೆ.

         ದೇವರ ದರ್ಶನದ ಸಮಯದಲ್ಲೂ ಕೆಲ ಬದಲಾವಣೆ ಮಾಡಲಾಗಿದೆ.‌ ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 1.30ವರೆಗೆ ದರ್ಶನದ ವ್ಯವಸ್ಥೆ ಮಾಡಲಾಗಿದೆ. ಬಳಿಕ ಮಧ್ಯಾಹ್ನ 2.30 ರಿಂದ ರಾತ್ರಿ 7 ಗಂಟೆವರೆಗೆ ಭಕ್ತರು ದೇವರ ದರ್ಶನ ಪಡೆಯಬಹುದು.

          ಭಕ್ತಾಧಿಗಳು ಕೋವಿಡ್ ಮಾರ್ಗಸೂಚಿ ಚಾಚೂ ತಪ್ಪದೆ ಪಾಲಿಸಲು ಮನವಿ ಮಾಡಲಾಗಿದ್ದು, ದೇವಸ್ಥಾನದ ಎಲ್ಲಾ ಸಿಬ್ಬಂದಿಗಳಿಗೆ ಈ ಕುರಿತ ಸೂಚನೆ ನೀಡಲಾಗಿದೆ..

               ಧರ್ಮಸ್ಥಳ; 

            ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲೂ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಲಾಗಿದೆ‌. ಈ ಹಿನ್ನಲೆಯಲ್ಲಿ ದೇಗುಲವನ್ನು ಸಂಪೂರ್ಣ ಸ್ಯಾನಿಟೈಸ್ ಮಾಡಲಾಗಿದೆ.

ಅನ್ನದಾನ, ದೇವರ ದರ್ಶನದ ವ್ಯವಸ್ಥೆ ಮಾಡಲಾಗಿದ್ದು, ಸೇವೆಗಳನ್ನು ಆರಂಭಿಸುವ ಬಗ್ಗೆ ದೇವಸ್ಥಾನದ ಆಡಳಿತ ಮಂಡಳಿ ಇನ್ನೂ ನಿರ್ಧಾರ ಕೈಗೊಂಡಿಲ್ಲ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries