ಕಾಸರಗೋಡು: ಕುಟುಂಬಶ್ರೀ ಆಷಾಡ ಮಾಸ ಔಷಧ ಗಂಜಿ ಉತ್ಸವ ಸರಣಿಗೆ ಸೋಮವಾರ ಚಾಲನೆ ಲಭಿಸಿದೆ.
ವಿದ್ಯಾನಗರದ ಜಿಲ್ಲಾ ಪಂಚಾಯತ್ ಕ್ಯಾಂಟೀನ್ ನಲ್ಲಿ ಈ ಸಂಬಂಧ ಜರುಗಿದ ಸಮಾರಂಭದಲ್ಲಿ ಸ್ಥಳೀಯಾಡಳಿತ, ಅಬಕಾರಿ ಸಚಿವ ಎಂ.ವಿ.ಗೋವಿಂದನ್ ಮಾಸ್ಟರ್ ಗಂಜಿ ಸೇವನೆ ನಡೆಸುವ ಮೂಲಕ ಉತ್ಸವವನ್ನು ಉದ್ಘಾಟಿಸಿದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣ್ ವೀರ್ ಚಂದ್, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಷಾನವಾಝ್ ಪಾದೂರು, ಸ್ಥಾಯೀ ಸಮಿತಿ ಅಧ್ಯಕ್ಷೆ ಯರಾದ ಕೆ.ಶಕುಂತಲಾ, ಗೀತಾಕೃಷ್ಣನ್, ಸದಸ್ಯರು, ಕುಟುಂಬಶ್ರೀ ಮಿಷನ್ ಜಿಲ್ಲಾ ಸಂಚಾಲಕ ಟಿ.ಟಿ.ಸುರೇಂದ್ರನ್, ಜಿಲ್ಲಾ ಆಯುರ್ವೇದ ಆಸ್ಪತ್ರೆ ವರಿಷ್ಠಾಧಿಕಾರಿ ಡಾ.ಇಂದು ದಿಲೀಪ್, ಮಾಜಿ ಸಂಸದ ಪಿ.ಕರುಣಾಕರನ್ ಮೊದಲಾದವರು ಉಪಸ್ಥಿತರಿದ್ದರು.
ಕಾಸರಗೋಡು ಜಿಲ್ಲೆಯ ಎಲ್ಲ ಜನಕೀಯ(ಜನಪರ) ಹೋಟೆಲ್ ಗಳಲ್ಲಿ ಆ.16 ವರೆಗೆ ಕುಟುಂಬಶ್ರೀ ಜಿಲ್ಲಾ ಮಿಷನ್ ವತಿಯಿಂದ ಸ್ಪೆಷ್ಯಲ್ ಆಷಾಢ ಮಾಸದ ಔಷಧ ಗಂಜಿ ಉತ್ಸವ ಮುಂದುವರಿಯಲಿದೆ. ಆಯುರ್ವೇದ ಪ್ರಕಾರದ ಔಷಧಗಳನ್ನು ಸೇರಿಸಿ ಆಷಾಡ ಮಾಸದ ಗಂಜಿ ಸಿದ್ಧಪಡಿಸಲಾಗುತ್ತದೆ.