ಮಂಜೇಶ್ವರ: ಅಖಿಲ ಭಾರತೀಯ ಸಾಹಿತ್ಯ ಪರಿಷತ್ (ಅಭಾಸಾಪ) ಕಾಸರಗೋಡು ಜಿಲ್ಲಾ ಮಂಜೇಶ್ವರ ತಾಲೂಕು ಸಮಿತಿಯ ವತಿಯಿಂದ ಕನ್ನಡ ಕಾವ್ಯಗಳಲ್ಲಿ ಕೀಚಕ ಪ್ರಸಂಗ ಎಂಬ ವಿಚಾರ ಸಂಗೋಷ್ಠಿಯು ಇತ್ತೀಚೆಗೆ ಗೂಗಲ್ ಮೀಟ್ ಜಾಲತಾಣದಲ್ಲಿ ನಡೆಯಿತು.
ಬೆಂಗಳೂರು ಎಪಿಎಸ್ ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಿಕೆ ಡಾ.ಪ್ರಮೀಳಾ ಮಾಧವ್ ಅವರು ಕನ್ನಡದ ವಿವಿಧ ಕಾವ್ಯಗಳಲ್ಲಿ ಕೀಚಕ - ಸೈರಂಧ್ರಿ ಪ್ರಕರಣಗಳನ್ನು ವೈವಿಧ್ಯಮಯವಾಗಿ ಚಿತ್ರಿಸಲಾದುದನ್ನು ವಿವರಿಸಿದರು. ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನ ಉಪನ್ಯಾಸಕಿ ಡಾ.ಶುಭಾ ಮರವಂತೆ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಅಭಾಸಾಪ ಮಂಜೇಶ್ವರ ತಾಲೂಕು ಸಮಿತಿಯ ಗೌರವಾಧ್ಕಕ್ಷ ಡಾ.ಹರಿಕೃಷ್ಣ ಭರಣ್ಯ ಹಾಗೂ ಅಭಾಸಾಪ ಕಾಸರಗೋಡು ಜಿಲ್ಲಾ ಸಮಿತಿಯ ಕೋಶಾಧಿಕಾರಿ ಗಣೇಶ್ ಭಟ್ ವಾರಣಾಸಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಅಭಾಸಾಪ ಮಂಜೇಶ್ವರ ತಾಲೂಕು ಸಮಿತಿಯ ಅಧ್ಯಕ್ಷೆ ಪರಿಣಿತ ರವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಶಾಂತ್ ಹೊಳ್ಳ ಎನ್. ವಂದಿಸಿದರು. ಅಭಾಸಾಪ ಮಂಜೇಶ್ವರ ತಾಲೂಕು ಸಮಿತಿಯ ಕಾರ್ಯದರ್ಶಿ ದಿವಾಕರ ಬಲ್ಲಾಳ್ ಎ.ಬಿ. ಕಾರ್ಯಕ್ರಮ ನಿರೂಪಿಸಿದರು. ಸಂಧ್ಯಾಗೀತಾ ಬಾಯಾರು ಪ್ರಾರ್ಥನೆ ಹಾಡಿದರು. ಅಭಾಸಾಪ ಕಾಸರಗೋಡು ಜಿಲ್ಲಾ ಸಮಿತಿಯ ಅಧ್ಯಕ್ಷ ಪಿ.ಎನ್.ಮೂಡಿತ್ತಾಯ ಹಾಗೂ ಡಾ.ಯು.ಮಹೇಶ್ವರಿ, ಡಾ.ನಾ.ದಾಮೋದರ ಶೆಟ್ಟಿ ಮೊದಲಾದ ಗಣ್ಯರು ಸೇರಿದಂತೆ ಸುಮಾರು 100 ಕ್ಕೂ ಅಧಿಕ ಸಾಹಿತ್ಯಾಸಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.