ಕಾಸರಗೋಡು: ಕಾಸರಗೋಡು ಬ್ಲೋಕ್ ಪಂಚಾಯತ್ ವ್ಯಾಪ್ತಿಯ 6 ಗ್ರಾಮ ಪಂಚಾಯತ್ ಗಳಲ್ಲಿ ಸತತ ಮೂರು ತಿಂಗಳ ಅವಧಿಗೆ ಬೇಕಾಗಿರುವ ಕೋವಿಡ್ ಹೋಮಿಯೋಪತಿ ಇಮ್ಯೂನ್ ಬೂಸ್ಟರ್(ಪ್ರತಿರೋಧ ಔಷಧ) ವಿತರಣೆ ಜರುಗಿತು.
ರಾಜ್ಯದಲ್ಲಿ ಪ್ರಥಮ ಬಾರಿಗೆ ಬ್ಲೋಕ್ ಪಂಚಾಯತ್ ಒಂದು ಈ ರೀತಿ ಸತತ 3 ತಿಂಗಳ ಅವಧಿಗೆ ಪ್ರತಿರೋಧ ಔಷಧ ವಿತರಣೆ ನಡೆಸುತ್ತಿದೆ. ಕಾಸರಗೋಡು ಬ್ಲೋಕ್ ಪಂಚಾಯತ್ ನಲ್ಲಿ ಈ ಸಂಬಂಧ ಜರುಗಿದ ಸಮಾರಂಭದಲ್ಲಿ ಶಾಸಕ ಎನ್.ಎ.ನೆಲ್ಲಿಕುನ್ನು ಉದ್ಘಾಟಿಸಿದರು. ಬ್ಲೋಕ್ ಪಂಚಾಯತ್ ಅಧ್ಯಕ್ಷೆ ಸಿ.ಎ.ಸೈಮಾ, ಯೋಜನೆ ಸಮಿತಿ ಉಪಾಧ್ಯಕ್ಷ ಎ.ಎಂ.ಜಲೀಲ್, ಚೆಂಗಳ ಗ್ರಾಮ ಪಂಚಾಯತ್ ಅಧ್ಯಕ್ಷ ಖಾದರ್ ಬದ್ರಿಯಾ, ಹೋಮಿಯೋ ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ಆರ್.ಅಶೋಕ್ ಕುಮಾರ್ ಉಪಸ್ಥಿತರಿದ್ದರು.