ನವದೆಹಲಿ: ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ನಡುವೆ ಕೇಂದ್ರ ಸಂಪುಟ ಪುನಾರಚನೆ ಮುಗಿದಿದೆ. ಬದಲಾದ ದಿಢೀರ್ ಬೆಳವಣಿಗೆಯಲ್ಲಿ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಆರೋಗ್ಯ ಸಚಿವರು ಯಾರು ಆಗುತ್ತಾರೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ.
ಕೇಂದ್ರದ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದಲ್ಲಿ ನೂತನ ಸಚಿವ ಮನ್ಸುಖ್ ಮಾಂಡವೀಯಾರಿಗೆ ಕೇಂದ್ರ ಆರೋಗ್ಯ ಖಾತೆ ಜೊತೆ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಹೊಣೆಯನ್ನು ವಹಿಸಲಾಗಿದೆ. ಆರೋಗ್ಯ ಸಚಿವಾಲಯ ಮತ್ತು ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯವನ್ನು ಮನ್ಸುಖ್ ಮಾಂಡವೀಯಾ ನಿರ್ವಹಿಸಲಿದ್ದಾರೆ.
ದೇಶದ ಆರೋಗ್ಯ ಕ್ಷೇತ್ರದಲ್ಲಿ ಔಷಧಗಳು ಮತ್ತು ಇತರ ಔಷಧಿಗಳು ಅತ್ಯಗತ್ಯವಾಗಿರುವುದರಿಂದ ಇದನ್ನು ಮಾಡಲಾಗುತ್ತಿದೆ ಮತ್ತು ಎರಡೂ ಸಚಿವರು ಒಂದೇ ಖಾತೆಯನ್ನು ನಿರ್ವಹಿಸುತ್ತಿರುವುದು ಪ್ರಖ್ಯಾತವಾಗಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ವೈದ್ಯಕೀಯ ಔಷಧಿಗಳು ಹಾಗೂ ಇತರೆ ಔಷಧಿಗಳು ಅತ್ಯವಶ್ಯಕವಾಗಿ ಇರುವುದರಿಂದ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಈ ಎರಡು ಸಚಿವಾಲಯಗಳನ್ನು ಒಬ್ಬರೇ ಸಚಿವರು ನಿರ್ವಹಣೆ ಮಾಡಲಿದ್ದಾರೆ ಎಂದು ಕೇಂದ್ರ ಸರ್ಕಾರದ ಮಲಗಳಿಂದ ತಿಳಿದು ಬಂದಿದೆ.
43 ನೂತನ ಸಚಿವರ ಪ್ರಮಾಣ ವಚನ:
ನವದೆಹಲಿ ರಾಷ್ಟ್ರಪತಿ ಭವನದಲ್ಲಿ ಆಷಾಢ 16, 1943ನೇ ಶಖೆ ಬುಧವಾರ 6 ಗಂಟೆಗೆ ನೂತನ ಸಚಿವರ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ಆರಂಭವಾಯಿತು. ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಂಪುಟಕ್ಕೆ 43 ನೂತನ ಸಚಿವರು ಸೇರ್ಪಡೆಯಾದರು. ಬುಧವಾರ ಕೇಂದ್ರ ಸಂಪುಟ ಸೇರಿದ 43 ಸಚಿವರ ಪೈಕಿ 15 ನೂತನ ಸಚಿವರಿಗೆ ಸಂಪುಟ ದರ್ಜೆ ಸ್ಥಾನಮಾನ ಹಾಗೂ ಬಾಕಿ 28 ಸಚಿವರಿಗೆ ರಾಜ್ಯ ಖಾತೆಯ ಸ್ಥಾನಮಾನ ನೀಡಲಾಗುವುದು ಎಂದು ತಿಳಿದು ಬಂದಿದೆ.
ಪ್ರಧಾನಮಂತ್ರಿ ಮೋದಿ ಅಭಿನಂದನೆ:
ಕೇಂದ್ರ ಸರ್ಕಾರದ ಸಂಪುಟ ಸಚಿವರಾಗಿ ಹಾಗೂ ರಾಜ್ಯ ಸಚಿವರಾಗಿ ಬುಧವಾರ ಪ್ರಮಾಣ ವಚನ ಸ್ವೀಕರಿಸಿದ ತಮ್ಮ ಸಹೋದ್ಯೋಗಿಗಳನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಟ್ವೀಟ್ ಮೂಲಕ ಅಭಿನಂದಿಸಿದ್ದಾರೆ.
ಪ್ರಮಾಣವಚನ ಸ್ವೀಕರಿಸಿದ ಎಲ್ಲ ಸಹೋದ್ಯೋಗಿಗಳನ್ನು ನಾನು ಅಭಿನಂದಿಸುತ್ತೇನೆ ಮತ್ತು ಅವರ ಮಂತ್ರಿ ಅಧಿಕಾರಾವಧಿಗೆ ಶುಭ ಹಾರೈಸುತ್ತೇನೆ. ಜನರ ಆಕಾಂಕ್ಷೆಗಳನ್ನು ಈಡೇರಿಸಲು ಮತ್ತು ಬಲವಾದ ಮತ್ತು ಸಮೃದ್ಧ ಭಾರತವನ್ನು ನಿರ್ಮಿಸಲು ನಮ್ಮ ಕಾರ್ಯವನ್ನು ಮುಂದುವರಿಸಬೇಕಿದೆ," ಎಂದು ಟ್ವೀಟ್ ಮಾಡಿದ್ದಾರೆ.