ಅಂಗಮಾಲಿ: ಕಾಲಡಿ ಶ್ರೀ ಶಂಕರಾಚಾರ್ಯ ಸಂಸ್ಕøತ ವಿಶ್ವವಿದ್ಯಾಲಯದಿಂದ ಕಾಣೆಯಾದ ಉತ್ತರ ಪತ್ರಿಕೆಗಳು ಪತ್ತೆಯಾಗಿವೆ. ಉತ್ತರ ಪತ್ರಿಕೆಗಳು ರಿಜಿಸ್ಟ್ರಾರ್‍ನ ಕಪಾಟಿನಲ್ಲಿ ಕಂಡುಬಂದಿವೆ. ಎಂ.ಎ ಸಂಸ್ಕೃತ ಸಾಹಿತ್ಯ ವಿಭಾಗವು ಮೂರನೇ ಸೆಮಿಸ್ಟರ್ ಬರೆದ 276 ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳು ಇತ್ತೀಚೆಗೆ ನಾಪತ್ತೆಯಾಗಿ ವಿವಾದಗಳೆದ್ದಿದ್ದವು.
ಘಟನೆಯ ತನಿಖೆಗೆ ಆದೇಶಿಸಿದ್ದ ವಿಶ್ವವಿದ್ಯಾಲಯ, ಪರೀಕ್ಷೆಗಳ ಉಸ್ತುವಾರಿ ಸಮಿತಿಯ ಅಧ್ಯಕ್ಷರನ್ನು ಅಮಾನತುಗೊಳಿಸಿತ್ತು. ಉತ್ತರಪತ್ರಿಕೆಗಳು ಇದೀಗ ಲಭಿಸಿರುವುದರಿಂದ ಹೊಸ ನಿರ್ಧಾರ ನಿರೀಕ್ಷಿಸಲಾಗಿದೆ. ಜುಲೈ 13 ರಂದು ಉತ್ತರ ಪತ್ರಿಕೆಗಳು ನಾಪತ್ತೆಯಾಗಿವೆ ಎಂದು ದ|ಊರಲಾಗಿತ್ತು.
ಕಳೆದ ಜನವರಿಯಲ್ಲಿ ಪರೀಕ್ಷೆ ನಡೆದಿತ್ತು. ಕೊರೋನದ ಸಂದರ್ಭದಲ್ಲಿ ಯಾವುದೇ ಕೇಂದ್ರೀಕೃತ ಮೌಲ್ಯಮಾಪನ ಇರಲಿಲ್ಲ. ಬದಲಾಗಿ, ಉತ್ತರ ಪತ್ರಿಕೆಗಳನ್ನು ಸಂಬಂಧಪಟ್ಟ ಶಿಕ್ಷಕರಿಗೆ ಮೌಲ್ಯಮಾಪನಕ್ಕಾಗಿ ಹಸ್ತಾಂತರಿಸಲಾಗಿತ್ತು. ಏಪ್ರಿಲ್ ಅಂತ್ಯದೊಳಗೆ ಅದನ್ನು ಹಿಂದಿರುಗಿಸಲು ಸೂಚಿಸಲಾಗಿತ್ತು.
ಆದರೆ ಕೊರೋನದ ಎರಡನೇ ಅಲೆಯ ಹಿನ್ನೆಲೆಯಲ್ಲಿ ಲಾಕ್‍ಡೌನ್ ಮೇ ಆರಂಭದಲ್ಲಿ ಪ್ರಾರಂಭವಾಯಿತು ಮತ್ತು ಮುಂದುವರಿಯಿತು. ಕಳೆದ ತಿಂಗಳು ವಿಶ್ವವಿದ್ಯಾನಿಲಯವು ಕಾರ್ಯಾಚರಣೆಯನ್ನು ಪುನರಾರಂಭಿಸಿದಾಗ, ಮೌಲ್ಯಮಾಪನಕ್ಕಾಗಿ ಉತ್ತರಪತ್ರಗಳನ್ನು ಹಿಂತಿರುಗಿಸಲಾಗಿಲ್ಲ ಎಂಬುದು ಗುರುತಿಸಲ್ಪಟ್ಟಿತ್ತು. ಈ ವೇಳೆ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನಗೈದು ಹಿಂತಿರುಗಿಸಲಾಗಿತ್ತು ಎಂಬ ಪ್ರಾಧ್ಯಾಪಕರ ಹೇಳಿಕೆಯ ಬೆನ್ನಿಗೆ ಅದು ನಾಪತ್ತೆಯಾಗಿರುವುದಾಗಿ ದೂರು ನೀಡಲಾಗಿತ್ತು.