ಕೊಚ್ಚಿ: ರಾಜ್ಯದಲ್ಲಿ ಕೊರೋನಾ ತಡೆಗಟ್ಟುವ ಚಟುವಟಿಕೆಗಳಿಗಾಗಿ ಮುಖ್ಯಮಂತ್ರಿಯ ಪರಿಹಾರ ನಿಧಿಗೆ ಚಿನ್ನವನ್ನೂ ನೀಡಲಾಗಿದೆ ಎಂದು ವರದಿಯಾಗಿದೆ. ನೆಕ್ಲೇಸ್, ಕಡಗಗಳು, ಉಂಗುರಗಳು ಮತ್ತು ನಾಣ್ಯಗಳಂತಹ ವಿವಿಧ ರೂಪಗಳಲ್ಲಿ ಚಿನ್ನವನ್ನು ಪಡೆಯಲಾಯಿತು. ಆದರೆ ರಾಜ್ಯ ಸರ್ಕಾರ ಈಗ ಅದನ್ನೆಲ್ಲ ಮಾರಾಟ ಮಾಡಲು ಮುಂದಾಗಲಿದೆ.
ಹಣಕಾಸು ಸಚಿವಾಲಯದ ಅಧಿಕಾರಿಗಳ ಪ್ರಕಾರ, 2018 ರ ಪ್ರವಾಹದ ವೇಳೆ ಹೆಚ್ಚಿನ ಚಿನ್ನ ಪರಿಹಾರ ನಿಧಿಗೆ ನೀಡಲಾಗಿದೆ. ಈ ಅವಧಿಯಲ್ಲಿ 500 ಗ್ರಾಂ ಗಿಂತ ಹೆಚ್ಚು ಚಿನ್ನ ಸರ್ಕಾರಕ್ಕೆ ದೇಣಿಗೆ ನೀಡಲಾಗಿತ್ತು. ಒಂದು ವರ್ಷದಲ್ಲಿ ಎರ್ನಾಕುಳಂ ಒಂದರಿಂದೇ 224.67 ಗ್ರಾಂ ಚಿನ್ನ ಬಂದಿದೆ.