ಬದಿಯಡ್ಕ: ಜನ ಮೈತ್ರಿ ಪೋಲೀಸ್ ಬದಿಯಡ್ಕ, ನವಜೀವನ ಹೈಸ್ಕೂಲ್ ಎಸ್.ಪಿ.ಸಿ.ಘಟಕ, ಐ.ಸಿ.ಸಿ ಕ್ಲಬ್ ಪಿಲಾಂಕಟ್ಟೆ ಇದರ ಸಹಯೋಗದಲ್ಲಿ ವರದಕ್ಷಿಣೆ ವಿರುದ್ಧ ಬದಿಯಡ್ಕದಲ್ಲಿ ನಿನ್ನೆ ಮೆರವಣಿಗೆ ನಡೆಯಿತು.
ಬದಿಯಡ್ಕ ಮೇಲಿನ ಪೇಟೆಯಲ್ಲಿ ಬದಿಯಡ್ಕ ಸರ್ಕಲ್ ಇನ್ಸ್ಪೆಕ್ಟರ್ ಸಲೀಂ ಧ್ವಜ ಬೀಸಿ ಉದ್ಘಾಟಿಸಿದರು. ನವಜೀವನ ಶಾಲೆಯ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಶ್ರಫ್ ಮುನಿಯೂರ್, ಅಧ್ಯಾಪಕರಾದ ನಿರಂಜನ್ ರೈ ಪೆರಡಾಲ, ರಾಜೇಶ್ ಮಾಸ್ತರ್ ಅಗಲ್ಪಾಡಿ, ಈಶ್ವರ ಮಾಸ್ತರ್, ವಿಜಯನ್ ಮಾಸ್ತರ್, ಜನ ಮೈತ್ರಿ ಪೋಲೀಸ್ ಅಧಿಕಾರಿಗಳಾದ ಅನೂಪ್, ದಿಲೀಪ್, ಕ್ಲಬ್ಬಿನ ಪದಾಧಿಕಾರಿ ಶಾಬಿತ್ ಪಿಲ್ಲಾಂಕಟ್ಟೆ, ಎಸ.ಪಿ.ಸಿ. ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಭಾಗವಹಿಸಿದರು.