ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಅಂಟುರೋಗ ನಿಯಂತ್ರಣ ಚಟುವಟಿಕೆಗಳನ್ನು ಚುರುಕುಗೊಳಿಸಲಾಗುವುದು.
ಹರಿತ ಕೇರಳಂ ಮಿಷನ್ ನೇತೃತ್ವದಲ್ಲಿ ನಡೆದ ಜಿಲ್ಲಾ ಮಟ್ಟದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು.
ಮಳೆಗಾಲ ಆರಂಭಕ್ಕೆ ಮುನ್ಗನ ನಡೆಸಿದ್ದ ಶುಚೀಕರಣ ಚಟುವಟಿಕೆಗಳ ಕುರಿತು ಸಭೆ ಅವಲೋಕನ ನಡೆಸಿತು. ಮುಂದಿನ ಚಟುವಟಿಕೆಗಳನ್ನು ದಕ್ಷತೆಯಿಂದ ನಡೆಸಲಾಗುವುದು ಎಂದು ಅಧ್ಯಕ್ಷೆ ತಿಳಿಸಿದರು.
ಅಂಟುರೋಗಗಳ ನಿಯಂತ್ರಣದೊಂದಿಗೆ ಕೋವಿಡ್ ಪ್ರತಿರೋಧ ಚಟುವಟಿಕೆಗಳನ್ನು ನಡೆಸುವ ನಿಟ್ಟಿನಲ್ಲಿ ಎಲ್ಲ ಸ್ಥಳೀಯಾಡಳಿತ ಸಂಸ್ಥೆಗಳೂ ಪ್ರತ್ಯೇಕ ಕ್ರಿಯಾಯೋಜನೆಗಳನ್ನು ರಚಿಸಿ ಚಟುವಟಿಕೆಗಳನ್ನು ವಹಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣ್ ವೀರ್ ಚಂದ್ ತಿಳಿಸಿದರು.
ಹರಿತ ಕೇರಳಂ ಮಿಷನ್ ಜಿಲ್ಲಾ ಸಂಚಾಲಕ ಎಂ.ಪಿ.ಸುಬ್ರಹ್ಮಣ್ಯನ್ ವರದಿ ವಾಚಿಸಿದರು. ಸಹಾಯಕ ಜಿಲ್ಲಾ ವೈದ್ಯಾಧಿಕಾರಿ ಡಾ.ಇ.ಮೋಹನನ್ ಅಂಟುರೋಗ ನಿಯಂತ್ರಣ ವೇಳೆ ಕೈಗೊಳ್ಳಬೇಕಾದ ಜಾಗರೂಕತೆಗಳ ಬಗ್ಗೆ ಮಾಹಿತಿ ನೀಡಿದರು. ಸ್ಥಳೀಯಾಡಳಿತ ಸಂಸ್ಥೆಗಳ ಪದಾಧಿಕಾರಿಗಳು, ಜಿಲ್ಲಾ ಮಟ್ಟದ ಏಕೀಕರಣ ಸಮಿತಿ ಸದಸ್ಯರು, ಡಿ.ಡಿ.ಇ., ಜಿಲ್ಲಾ ಮಲೇರಿಯಾ ನಿಯಂತ್ರಣ ಅಧಿಕಾರಿ, ಕ್ಲೀನ್ ಕೇರಳ ಕಂಪನಿ ಜಿಲ್ಲಾ ಪ್ರಬಂಧಕ, ಹರಿತ ಕೇರಳಂ ಸಂಪನ್ಮೂಲ ವ್ಯಕ್ತಿಗಳು ಮೊದಲಾದವರು ಉಪಸ್ಥಿತರಿದ್ದರು.
ಪ್ರಧಾನ ತೀರ್ಮಾನಗಳು
ಜಿಲ್ಲಾ, ಬ್ಲೋಕ್, ಪಂಚಾಯತ್, ವಾರ್ಡ್, ಸಂಸ್ಥೆ ಮಟ್ಟದಲ್ಲಿ ರಾಪಿಡ್ ರೆಸ್ಪಾನ್ಸ್ ಟೀಂ(ಆರ್.ಆರ್.ಟಿ.) ರಚಿಸಿ, ತರಬೇತಿ ಆರಂಭಿಸಲಾಗಿದೆ. ಸೊಳ್ಳೆಗಳ ಸಂಖ್ಯೆ ಅಧಿಕವಾಗಿರುವ ಪಂಚಾಯತ್/ ನಗರಸಭೆ ಪ್ರದೇಶಗಳನ್ನು ಪತ್ತೆ ಮಾಡಿ ಆರ್.ಆರ್.ಡಿ.ಗಳನ್ನು ನಡೆಸುವುದು. ಪಂಚಾಯತ್ ಮಟ್ಟದ ಜಾಗೃತಿ ಸಮಿತಿಗಳು, ವಾರ್ಡ್ ಮಟ್ಟದ ಸಮಿತಿಗಳು, ಕ್ಲಸ್ಟರ್ ಗಳನ್ನು ಚುರುಕುಗೊಳಿಸುವುದು. ಜನಜಾಗೃತಿ ಕಾರ್ಯಕ್ರಮಗಳು, ಗಪ್ಪಿ ಮೀನಿನ ವಿತರಣೆ, ಫಾಗಿಂಗ್, ಐ.ಎಸ್.ಎಸ್.(ಇಂಡೋರ್ ಸ್ಪೇಸ್ ಸ್ಪ್ರೇ) ಇತ್ಯಾದಿ ಅಂಟುರೋಗ ಪ್ರತಿರೋಧ ಚಟುವಟಿಕೆಗಳನ್ನು ಪಂಚಾಯತ್ ಮಟ್ಟದಲ್ಲಿ ನಡೆಸುವುದು. ಅಂಟುರೋಗಗಳ ನಿಯಂತ್ರಣ ಸಂಬಂಧ ಶಂಕಾಸ್ಪದ ರೀತಿಯ ರೋಗಗಳನ್ನು ಪತ್ತೆಮಾಡಿ ಅವರಿಗೆ ಸೂಕ್ತ ಚಿಕಿತ್ಸೆ ಖಚಿತತೆ ಮೂಡಿಸುವ ನಿಟ್ಟಿನಲ್ಲಿ ಜಿಲ್ಲಾ/ ಜನರಲ್/ ತಾಲೂಕು ಆಸ್ಪತ್ರೆಗಳಲ್ಲಿ ಸೂಕ್ತ ಸೌಲಭ್ಯಗಳನ್ನು ಏರ್ಪಡಿಸಲಾಗುವುದು. ಸೊಳ್ಳೆ ನಿಯಂತ್ರಣ ಪ್ರಬಲಗೊಳಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಮೂಲಕ ಸಮಾಜಕ್ಕೆ ಅಂಟುರೋಗ ನಿವಾರಣೆ ಮತ್ತು ಪರಿಸರ ಶುಚೀಕರಣ ಕುರಿತು ಜಾಗೃತಿ ಮೂಡಿಸುವ ಯೋಜನೆಗಳನ್ನು ರಚಿಸಿ, ಜಾರಿಗೊಳಿಸುವುದು. ವಾರ್ಡ್ ಮಟ್ಟದಲ್ಲಿ ಸೂಕ್ಷ್ಮ ಮಟ್ಟದ ಯೋಜನೆ ಅಂಗವಾಗಿ ಶುಚಿತ್ವ ಮಾಪಿಂಗ್ ಮತ್ತು ಹಾಟ್ ಸ್ಪಾಟ್ ಐಡೆಂಟಿಫಿಕೇಷನ್ ನಡೆಸಲಾಗುವುದು.