ಬದಿಯಡ್ಕ: ಕುಂಬ್ಡಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದ ಜನಾನುರಾಗಿ ಯುವ ವೈದ್ಯ ಡಾಕ್ಟರ್ ಶುಹೈಬ್ ಅವರನ್ನು ವೈದ್ಯ ದಿನಾಚರಣೆಯ ಅಂಗವಾಗಿ ಗುರುವಾರ ಕೇರಳ ವ್ಯಾಪಾರೀ ವ್ಯವಸಾಯಿ ಏಕೋಪನಾ ಸಮಿತಿ ನಾರಂಪಾಡಿ ಘಟಕದ ವತಿಯಿಂದ ಅಭಿನಂದಿಸಲಾಯಿತು.
ಕುಂಬ್ಡಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದ ಸರಳ ಸಮಾರಂಭದಲ್ಲಿ ಡಾಕ್ಟರ್ ಶುಹೈಬ್ ಅವರನ್ನು ಘಟಕದ ಪ್ರಧಾನ ಕಾರ್ಯದರ್ಶಿ ಶ್ರೀಧರ್ ಪದ್ಮಾರ್ ಅವರು ಹೋಗುಚ್ಛ ಫಲಪುಷ್ಪ ನೀಡಿ ಗೌರವಿಸಿದರು , ಹೆಲ್ತ್ ಇನ್ಸ್ಪೆಕ್ಟರ್ ಸುನಿಲ್ ಅವರನ್ನು ಹಿರಿಯ ವ್ಯಾಪಾರಿ ಸದಸ್ಯ ಅಚ್ಚುತ ಪದ್ಮಾರ್ ಅಭಿನಂದಿಸಿದರು.
ಮಾಜಿ ಪಂಚಾಯತ್ ಪ್ರೆಸಿಡೆಂಟ್ ಹಾಗೂ ಪ್ರಸ್ತುತ ವ್ಯಾಪಾರೀ ಸದಸ್ಯರೂ ಅಗಿರುವ ಅಬೂಬಕ್ಕರ್ ಅವರು ಅಸಿಸ್ಟೆಂಟ್ ಹೆಲ್ತ್ ಇನ್ಸ್ಪೆಕ್ಟರ್ ರೋಬಿನ್ ಅವರನ್ನು ಅಭಿನಂದಿಸಿದರು. ಕಾರ್ಯಕ್ರಮಕ್ಕೆ ಕಾಕತಾಳೀಯವಾಗಿ ಆಗಮಿಸಿ ಉಪಸ್ಥಿತರಾದ ಡಾಕ್ಟರ್ ಕೇಶವ ನಾಯಕ್ ಖಂಡಿಗೆ ಅವರು ವೇದಿಕೆಗೆ ವಿಶೇಷ ಶೋಭೆ ತಂದರು.
ವ್ಯಾಪಾರಿ ಘಟಕದ ಕಾರ್ಯದರ್ಶಿ ಗೋಪಾಲ ಕೃಷ್ಣ ಸಿ ಹೆಚ್ ಸ್ವಾಗತಿಸಿ, ವ್ಯಾಪಾರಿ ಸದಸ್ಯ ಅಬೂಬಕ್ಕರ್ ಹಾಗೂ ರಮೇಶ್ ಕೃಷ್ಣ ಪದ್ಮಾರ್ ಶುಭಾಶಂಸನೆಗೈದರು.
ಸುಧೀರ್ ಕೃಷ್ಣ ಪದ್ಮಾರ್ ವಂದಿಸಿದರು. ಶ್ರೀಧರ್ ಪದ್ಮಾರ್ ಕಾರ್ಯಕ್ರಮ ನಿರೂಪಿಸಿದರು.
ವೈದ್ಯಾಧಿಕಾರಿ ಶುಹೈಬ್ ಮಾತನಾಡಿ ವ್ಯಾಪಾರಿ ಸದಸ್ಯರು ನಿರಂತರವಾಗಿ ನೀಡುತ್ತಿರುವ ಸಾಥ್ ಶ್ಲಾಘನೀಯ , ಕೋವಿಡ್ ಸಂಧರ್ಭದಲ್ಲಿ ಸ್ವಯಂಪ್ರೇರಿತರಾಗಿ ಆಹೋರಾತ್ರಿ ಶ್ರಮಿಸಿದ ವ್ಯಾಪಾರಿ ಸಹೋದರರು ನಮಗೆ ಸ್ಫೂರ್ತಿ ಎಂದರು.
ರೋಬಿನ್ ಅವರು ನೂತನ ಪಂಚಾಯತ್ ಕಟ್ಟಡ ಮತ್ತು ನೂತನ ಅರೋಗ್ಯ ಕೇಂದ್ರ ಕಟ್ಟಡಗಳ ಲೋಕಾರ್ಪಣೆಯ ಸಂಧರ್ಭದಲ್ಲಿ ಉಪಹಾರ ಮತ್ತು ಭೋಜನ ವ್ಯವಸ್ಥೆಗಳ ಸಂಪೂರ್ಣ ಪ್ರಾಯೋಜಕತ್ವ ನೀಡಿದ ಕೇರಳ ವ್ಯಾಪಾರೀ ವ್ಯವಸಾಯಿ ಏಕೋಪನಾ ಸಮಿತಿ ನಾರಂಪಾಡಿ ಯೂನಿಟ್ ನ ಪದಾಧಿಕಾರಿಗಳ ಮತ್ತು ಸದಸ್ಯರ ಶ್ರಮವನ್ನು , ಅರ್ಪಣಾ ಭಾವವನ್ನು ನೆನಪಿಸಿದರು.