ತಿರುವನಂತಪುರ: ಲೋಕನಾಥ ಬೆಹ್ರಾ ರಾಜ್ಯ ಪೆÇಲೀಸ್ ಮುಖ್ಯಸ್ಥ ಹುದ್ದೆಯಿಂದ ನಿವೃತ್ತರಾಗಿದ್ದಾರೆ. 36 ವರ್ಷಗಳ ಸೇವೆಯ ನಂತರ ಬೆಹ್ರಾ ಸಾರ್ವಜನಿಕ ಸೇವೆಯಿಂದ ನಿವೃತ್ತರಾದರು. ಪೆರೂರ್ಕಡದ ಎಸ್‍ಎಪಿ ಮೈದಾನದಲ್ಲಿ ನಡೆದ ವಿದಾಯ ಮೆರವಣಿಗೆಯಲ್ಲಿ ಡಿಜಿಪಿ ಮೆರವಣಿಗೆಯನ್ನು ಸ್ವೀಕರಿಸಿದರು. ತಮ್ಮ ವಿದಾಯ ಭಾಷಣದಲ್ಲಿ, ಕೇರಳ ಪೋಲೀಸರು ಸೇವಾ ತತ್ಪರತೆಯಲ್ಲಿ ಪ್ರಥಮ ಸ್ಥಾನದಲ್ಲಿದ್ದಾರೆ ಮತ್ತು ತನ್ನೊಂದಿಗೆ ಸಹಕರಿಸಿರುವುದಕ್ಕೆ ಧನ್ಯವಾದಗಳು ಎಂದು ಬೆಹ್ರಾ ಹೇಳಿದ್ದಾರೆ.
ಲೋಕನಾಥ್ ಬೆಹ್ರಾ ಅವರು ಡಿಜಿಪಿ, ರಾಜ್ಯ ಪೋಲೀಸ್ ಮುಖ್ಯಸ್ಥ, ವಿಜಿಲೆನ್ಸ್ ನಿರ್ದೇಶಕ, ಜೈಲು ಮುಖ್ಯಸ್ಥ ಮತ್ತು ಅಗ್ನಿಶಾಮಕ ಮುಖ್ಯಸ್ಥರ ಎಲ್ಲಾ ನಾಲ್ಕು ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ ಏಕೈಕ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಲೋಕನಾಥ್ ಬೆಹ್ರಾ ಅವರು ಪ್ರಕರಣದ ತನಿಖೆ ಸೇರಿದಂತೆ ಪೋಲೀಸರ ಎಲ್ಲಾ ಕ್ಷೇತ್ರಗಳಲ್ಲಿ ಆಧುನಿಕ ತಂತ್ರಜ್ಞಾನವನ್ನು ಬಳಸಲು ಕಾರಣವಾದ ಅಂಶದ ಬಗೆಗೂ ತೃಪ್ತಿಪಟ್ಟುಕೊಂಡಿದ್ದಾರೆ ಎಂದು ಹೇಳಿದರು.
ನ್ಯೂನತೆಗಳನ್ನು ಹಾಗೆಯೇ ತೆಪ್ಪಗಿದ್ದು ಬಿಡಲಾಗಿಲ್ಲ. ಆ ಬಗ್ಗೆ ಸಮಗ್ರ ಅವಲೋಕನ ಮಾಡಿ ಮುಂದೆ ಸಾಗುವ ವ್ಯಕ್ತಿ. ತನ್ನ ವಿದಾಯ ಭಾಷಣದಲ್ಲಿ, ಬೆಹ್ರಾ ಕೇರಳದ ಪ್ರೀತಿಗಾಗಿ ಧನ್ಯವಾದಗಳನ್ನು ಅರ್ಪಿಸಿದರು ಮತ್ತು ತಾನೆಂದಿಗೂ ಮಲಯಾಳಿ ಎಂದು ಪುನರುಚ್ಚರಿಸಿದರು. ಸಮಾರಂಭದಲ್ಲಿ ಹಿರಿಯ ಪೋಲೀಸ್ ಅಧಿಕಾರಿಗಳು ಭಾಗವಹಿಸಿದ್ದರು.