ಕೋಝಿಕ್ಕೋಡ್: ಕಲ್ಲೈ ಎಂಬಲ್ಲಿ ರೈಲ್ವೇ ಟ್ರ್ಯಾಕ್ ಮೇಲೆ ಸ್ಫೋಟಕ ವಸ್ತು ಪತ್ತೆಯಾದ ಘಟನೆ ಇಂದು ನಡೆದಿದೆ.
ಪೊಲೀಸರು ಮತ್ತು ಆರ್‌ಪಿಎಫ್ ಅಧಿಕಾರಿಗಳು ತಪಾಸಣೆ ನಡೆಸುತ್ತಿದ್ದಾರೆ. ಟ್ರ್ಯಾಕ್ ಪರಿಶೀಲಿಸಲು ಬಂದ ನೌಕರರು ಸ್ಫೋಟಕಗಳನ್ನು ಪತ್ತೆ ಮಾಡಿದ್ದಾರೆ. ಬಾಂಬ್ ಸ್ಕ್ವಾಡ್ ಮತ್ತು ನಗರ ಪೊಲೀಸ್ ಆಯುಕ್ತರು ಶೀಘ್ರದಲ್ಲೇ ಸ್ಥಳಕ್ಕಾಗಮಿಸಲಿದ್ದಾರೆ. ಘಟನೆಯ ಬಗ್ಗೆ ಪೊಲೀಸರು ವಿವರವಾದ ತನಿಖೆ ಆರಂಭಿಸಿದ್ದಾರೆ.