ಮಂಜೇಶ್ವರ : ಕೊರೋನ ಕಾಲಘಟ್ಟವು ಮಕ್ಕಳ ವಿದ್ಯಾಭ್ಯಾಸದಲ್ಲಿ ಹಲವು ಬದಲಾವಣೆಗಳನ್ನು ತಂದೊಡ್ಡಿದ್ದು ಆನ್ಲೈನ್ ಶಿಕ್ಷಣವು ಅನಿವಾರ್ಯವೆನಿಸಿದೆ. ಕಳೆದ ವರ್ಷ ಹಲವು ಮಕ್ಕಳಿಗೆ ಈ ಆನ್ಲೈನ್ ಶಿಕ್ಷಣವು ಲಭಿಸದೇ ಇರುವುದನ್ನು ಕಂಡು, ಎಲ್ಲಾ ಮಕ್ಕಳಿಗೂ ಆನ್ಲೈನ್ ಶಿಕ್ಷಣ ಲಭಿಸುವಂತೆ ಮಾಡಲು ವ್ಯವಸ್ಥೆ ಮಾಡಲು ಶಿಕ್ಷಣ ಇಲಾಖೆ ಸೂಚಿಸಿದ ಬೆನ್ನಲ್ಲೇ ಕುಳೂರಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಥಳೀಯ ಸಂಘ ಸಂಸ್ಥೆಗಳು, ವಿದ್ಯಾಭಿಮಾನಿಗಳ ಸಹಯೋಗದಲ್ಲಿ ಶಾಲಾಭಿವೃದ್ಧಿ ಸಮಿತಿ ಸಭೆ ನಡೆಸಿ ಶಾಲೆಯಲ್ಲಿ ಆನ್ಲೈನ್ ಕ್ಲಾಸ್ ವೀಕ್ಷಿಸಲು ಸ್ಮಾರ್ಟ್ ಪೋನ್ ಇಲ್ಲದ 9 ಮಕ್ಕಳಿಗೆ ಕೊಡುಗೆ ರೂಪದಲ್ಲಿ ಸ್ಮಾರ್ಟ್ ಫೆÇೀನ್ ನೀಡುವ ತೀರ್ಮಾನ ಕೈಗೊಳ್ಳಲಾಗಿತ್ತು. ಅದರಂತೆ ಸ್ಥಳೀಯ ಸಂಘ ಸಂಸ್ಥೆಗಳ ಮತ್ತು ದಾನಿಗಳ ನೆರವಿನೊಂದಿಗೆ ಲಭಿಸಿದ ಸ್ಮಾರ್ಟ್ ಫೆÇೀನುಗಳ ವಿತರಣೆಯು ಕುಳೂರು ಶಾಲೆಯಲ್ಲಿ ನಡೆಯಿತು.
ವಾರ್ಡ್ ಸದಸ್ಯರಾದ ಜನಾರ್ಧನ ಪೂಜಾರಿಯವರು ಉದ್ಘಾಟಿಸಿ, ಫಲಾನುಭವಿಗಳಿಗೆ ಸ್ಮಾರ್ಟ್ ಫೆÇೀನ್ ವಿತರಣೆ ಮಾಡಿ 'ಕೋವಿಡ್ ಸಂದಿಗ್ಧ ಪರಿಸ್ಥಿತಿಯಲ್ಲಿ ಆನ್ಲೈನ್ ಕ್ಲಾಸ್ ಅನಿವಾರ್ಯ, ಈ ಸಮಯದಲ್ಲಿ ಮಕ್ಕಳು ಸ್ಮಾರ್ಟ್ ಫೆÇೀನ್ ಮೂಲಕ ಕಲಿಕೆಯಲ್ಲಿ ತೊಡಗಿದರೂ ಹೆತ್ತವರು ಅದರ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಾ, ಸ್ಮಾರ್ಟ್ ಫೆÇೀನುಗಳ ಸದ್ಬಳಕೆಯಾಗುವುದರೊಂದಿಗೆ ಮಕ್ಕಳ ಶಿಕ್ಷಣವು ಪರಿಪೂರ್ಣವಾಗಿ ನಡೆಯಲಿ' ಎಂದರು. ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಜಯರಾಜ್ ಶೆಟ್ಟಿ ಚಾರ್ಲ ವಹಿಸಿದ್ದರು. ಶಾಲಾ ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಪಿ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ಮಾರ್ಟ್ ಫೆÇೀನ್ ಕೊಡುಗೆಯಾಗಿ ನೀಡಿದ ಎಲ್ಲರನ್ನೂ ಅಭಿನಂದಿಸಿದರು. ಕಾರ್ಯಕ್ರಮದಲ್ಲಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಮೊಹಮ್ಮದ್ ಹಾಜಿ ಕಂಚಿಲ, ಕೋಶಾಧಿಕಾರಿಯಾದ ಚಿಕ್ಕಪ್ಪ ಶೆಟ್ಟಿ ಎಲಿಯಾಣ, ಪ್ರೀ ಪ್ರೈಮರಿ ವಿಭಾಗದ ಪಿ. ಟಿ. ಎ ಅಧ್ಯಕ್ಷ ಸತೀಶ್ ಎಲಿಯಾಣ ಉಪಸ್ಥಿತರಿದ್ದು ಮಕ್ಕಳ ಆನ್ಲೈನ್ ಶಿಕ್ಷಣಕ್ಕೆ ಶುಭ ಹಾರೈಸಿದರು. ಸ್ಮಾರ್ಟ್ ಫೆÇೀನ್ ಕೊಡುಗೆ ನೀಡಿದವರು ಹಾಗೂ ವಿವಿಧ ಸಂಘ ಸಂಸ್ಥೆಗಳಾದ ಸ್ನೇಹ ಆರ್ಟ್ ಆಂಡ್ ಸ್ಪೋಟ್ರ್ಸ್ ಕ್ಲಬ್, ಸ್ಪಂದನ ಆರ್ಟ್ ಆಂಡ್ ಸ್ಪೋಟ್ರ್ಸ್ ಕ್ಲಬ್, ಫ್ರೆಂಡ್ಸ್ ಕುಳೂರು, ಹಳೆ ವಿದ್ಯಾರ್ಥಿ ಸಂಘ, ಶಾಲಾ ರಕ್ಷಕ-ಶಿಕ್ಷಕ ಸಂಘದ ಸದಸ್ಯರು, ಶಾಲಾ ಶಿಕ್ಷಕ ವೃಂದ ಉಪಸ್ಥಿತರಿದ್ದರು. ಶಾಲಾ ಶಿಕ್ಷಕ ಜಯಪ್ರಶಾಂತ್ ಪಾಲೆಂಗ್ರಿ ಸ್ವಾಗತಿಸಿ, ಶಿಕ್ಷಕಿ ಸೌಮ್ಯ ಪಿ ವಂದಿಸಿದರು.