ತಿರುವನಂತಪುರ: ರಾಜ್ಯದಲ್ಲಿ ಲಾಕ್‌ಡೌನ್ ನಿರ್ಬಂಧಗಳಲ್ಲಿ ಯಾವುದೇ ರೀಯಾಯ್ತಿಗಳು ಸದ್ಯಕ್ಕಿಲ್ಲ. ವಾರಾಂತ್ಯದ ಲಾಕ್‌ಡೌನ್ ನ್ನು ಮುಂದುವರಿಸಲು ಇಂದಿನ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಬಕ್ರೀಡ್‌ಗೆ ಸಂಬಂಧಿಸಿದಂತೆ ಮೂರು ದಿನಗಳ ವಿನಾಯಿತಿ ನಿನ್ನೆ ಕೊನೆಗೊಂಡಿತ್ತು. ಬಳಿಕ ಇಂದಿನಿಂದ ಈ ಹಿಂದಿನ ನಿರ್ಬಂಧಗಳು ಮುಂದುವರಿಯುತ್ತಿವೆ.
ಕೊರೋನಾ ಸೋಂಕು ಹರಡುವಿಕೆಯ ಮಧ್ಯೆ ಬಕ್ರೀದ್ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನಿರ್ಬಂಧಗಳನ್ನು ಸಡಿಲಿಸಿದ್ದು ಭಾರೀ ಟೀಕೆಗೆ ಕಾರಣವಾಗಿತ್ತು. ಬಕ್ರೀಡ್‌ಗೆ ಸಂಬಂಧಿಸಿದಂತೆ ಸರ್ಕಾರ ವಿನಾಯಿತಿ ನೀಡಿದ್ದು ಯಾವ ಮಾನದಂಡದಲ್ಲಿ ಎಂದು ಸುಪ್ರೀಂ ಕೋರ್ಟ್ ನಿನ್ನೆ ಟೀಕಿಸಿತ್ತು. ಈ ಹಿನ್ನೆಲೆಯಲ್ಲಿ ಮತ್ತೆ ನಿರ್ಬಂಧಗಳನ್ನು ಬಿಗಿಗೊಳಿಸಲಾಗುತ್ತಿದೆ.