HEALTH TIPS

ಆಸ್ಪತ್ರೆಗಳು ಮಾನವೀಯ ಸೇವೆ ಸಲ್ಲಿಸುವ ಬದಲು ಬೃಹತ್ ರಿಯಲ್ ಎಸ್ಟೇಟ್ ಉದ್ಯಮಗಳಂತೆ ಮಾರ್ಪಟ್ಟಿವೆ- ಸುಪ್ರೀಂ

              ನವದೆಹಲಿ: ಕೋವಿಡ್ -19 ದುರಂತದ ಸಂದರ್ಭದಲ್ಲಿ ಆಸ್ಪತ್ರೆಗಳು ಮಾನವೀಯ ಸೇವೆ ಸಲ್ಲಿಸುವ ಬದಲು ಬೃಹತ್ ರಿಯಲ್ ಎಸ್ಟೇಟ್ ಉದ್ಯಮಗಳಂತೆ ಮಾರ್ಪಟ್ಟಿವೆ ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.

           ವಸತಿ ಕಾಲೋನಿಗಳಲ್ಲಿ 2-3 ಕೊಠಡಿಗಳ ಫ್ಲಾಟ್ ಗಳಿಂದ ನಡೆಯುತ್ತಿರುವ ನರ್ಸಿಂಗ್ ಹೋಮ್ ಗಳು ಅಗ್ನಿ ಮತ್ತು ಕಟ್ಟಡ ಸುರಕ್ಷತಾ ನಿಯಮಗಳು ಉಲ್ಲಂಘನೆಯಾಗದಂತೆ ಸ್ವಲ್ಪ ಗಮನ ಹರಿಸಬೇಕಾಗಿದೆ ಎಂದು ನಿರ್ದೇಶನ ನೀಡಿದೆ.

            ಕಟ್ಟಡದ ಉಪ-ಕಾನೂನು ಉಲ್ಲಂಘನೆಯನ್ನು ಸರಿಪಡಿಸಲು ಆಸ್ಪತ್ರೆಗಳಿಗೆ ಮುಂದಿನ ವರ್ಷದ ಜುಲೈವರೆಗೂ ಗಡುವನ್ನು ವಿಸ್ತರಿಸಿರುವ ಗುಜರಾತ್ ಸರ್ಕಾರವನ್ನು ಸುಪ್ರೀಂಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಕಟ್ಟಡಗಳಿಗೆ ಬೆಂಕಿ ಬಿದ್ದ ಘಟನೆಗಳಲ್ಲಿ ಜನರು ಸಾವನ್ನಪ್ಪುವುದು ಮುಂದುವರೆದಿದೆ. ಮಾನವ ದುರಂತದ ಸಂದರ್ಭದಲ್ಲಿ ಮಾನವೀಯ ಸೇವೆ ಸಲ್ಲಿಸುವ ಬದಲು ಈ ಆಸ್ಪತ್ರೆಗಳು ಬೃಹತ್ ರಿಯಲ್ ಎಸ್ಟೇಟ್ ಉದ್ಯಮಗಳಂತೆ ಮಾರ್ಪಟ್ಟಿವೆ ಎಂದು ಹೇಳಿದೆ.

ಕಳೆದ ವರ್ಷದ ಆದೇಶದಂತೆ ಗುಜರಾತ್ ಸರ್ಕಾರ ಗಡುವು ವಿಸ್ತರಿಸಿಲ್ಲ, ಆಸ್ಪತ್ರೆಗಳು ತೊಂದರೆಯಲ್ಲಿರುವ ರೋಗಿಗಳಿಗೆ ಸಹಾಯವನ್ನು ಒದಗಿಸಲು ಉದ್ದೇಶಿಸಿವೆ ಆದರೆ ಅವು ಹಣದ ಗಣಿಗಾರಿಕೆ ಯಂತ್ರಗಳಾಗಿವೆ ಎಂದು ನ್ಯಾಯಮೂರ್ತಿಗಳಾದ ಡಿ. ವೈ. ಚಂದ್ರಚೂಡ್ ಮತ್ತು ಎಂ ಆರ್ ಶಾ ಅವರನ್ನೊಳಗೊಂಡ ನ್ಯಾಯಪೀಠ ಹೇಳಿತು.

            ಕೋವಿಡ್ ದುರಂತದ ಸಂದರ್ಭದಲ್ಲಿ ಆಸ್ಪತ್ರೆಗಳು ಬೃಹತ್ ಉದ್ಯಮಗಳಾಗಿ ರೂಪುಗೊಂಡಿವೆ. ಈ ರೀತಿಯ ನರ್ಸಿಂಗ್ ಹೋಮ್ ಗಳು, ವಸತಿ ಕಾಲೋನಿಗಳಲ್ಲಿ ಎರಡ್ಮೂರು ಕೊಠಡಿಗಳ ಫ್ಲಾಟ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅವುಗಳು ಕೆಲಸ ನಿರ್ವಹಿಸಲು ಅವಕಾಶ ನೀಡಬಾರದು, ಈ ಆಸ್ಪತ್ರೆಗಳನ್ನು ಬಂದ್ ಮಾಡುವುದು ಒಳ್ಳೆಯದು ಮತ್ತು ರಾಜ್ಯ ಸರ್ಕಾರ ಅಗತ್ಯ ಮೂಲಸೌಕರ್ಯ ಒದಗಿಸಬೇಕೆಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.

            ನಾಸಿಕ್, ಮಹಾರಾಷ್ಟ್ರದಲ್ಲಿ ಕಳೆದ ವರ್ಷ ಸಂಭವಿಸಿದ ಬೆಂಕಿ ಘಟನೆಗಳನ್ನು ಉಲ್ಲೇಖಿಸಿದ ನ್ಯಾಯಪೀಠ, ಗುಜರಾತ್ ಸರ್ಕಾರ ಅಧಿಸೂಚನೆಯನ್ನು ಹಿಂದಕ್ಕೆ ಪಡೆಯಬೇಕು ಹಾಗೂ ಒಂದು ವಾರದೊಳಗೆ ಅಧಿಸೂಚನೆ ಕುರಿತು ವಿವರಣೆ ನೀಡಬೇಕೆಂದು ಕೋರಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries