ನವದೆಹಲಿ: ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ನೆರವು ಒದಗಿಸುವ ಸಲುವಾಗಿ ದಿನ 24 ಗಂಟೆ ಕಾರ್ಯನಿರ್ವಹಿಸುವ ಸಹಾಯವಾಣಿಗೆ ಕೇಂದ್ರ ಸರ್ಕಾರ ಮಂಗಳವಾರ ಚಾಲನೆ ನೀಡಿದೆ.
ರಾಷ್ಡ್ರೀಯ ಮಹಿಳಾ ಆಯೋಗ ಸ್ಥಾಪಿಸಿರುವ ಈ ಸಹಾಯವಾಣಿಗೆ (ಸಹಾಯವಾಣಿ ಸಂಖ್ಯೆ 7827170170) ಕೇಂದ್ರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, 'ಸಂಕಷ್ಟದಲ್ಲಿರುವ ಮಹಿಳೆಯರ ನೆರವಿಗೆ ಸರ್ಕಾರ ಹಾಗೂ ಆಯೋಗ ಸದಾ ಸಿದ್ಧ ಎಂಬ ಸಂದೇಶವನ್ನು ಈ ಸಹಾಯವಾಣಿ ರವಾನಿಸಿದೆ' ಎಂದು ಹೇಳಿದರು.
ದೌರ್ಜನಕ್ಕೆ ಒಳಗಾದ ಮಹಿಳೆಯರಿಗೆ ಪೊಲೀಸ್ ಇಲಾಖೆ, ಆಸ್ಪತ್ರೆಗಳು, ಜಿಲ್ಲಾ ಕಾನೂನು ಸೇವೆಗಳು ಹಾಗೂ ಮಾನಸಿಕ ಆರೋಗ್ಯ ಸೇವೆಗಳನ್ನು ನೀಡುವ ಕೇಂದ್ರಗಳ ನೆರವನ್ನು ಈ ಸಹಾಯವಾಣಿ ಒದಗಿಸುವುದು.