ನವದೆಹಲಿ : ಕಾಂಗ್ರೆಸ್ ಸಂಸದರಿಗೆ ಲಕ್ಷದ್ವೀಪ ಪ್ರವೇಶಕ್ಕೆ ಅನುಮತಿ ನಿರಾಕರಿಸಿದ ಎರಡು ದಿನಗಳ ನಂತರ, ಕೇರಳದ ಎಡ ಪಕ್ಷದ ಸಂಸದರಿಗೂ ಕೇಂದ್ರಾಡಳಿತ ಪ್ರದೇಶಕ್ಕೆ ಪ್ರವೇಶಿಸಲು ಲಕ್ಷದ್ವೀಪ ಆಡಳಿತ ಅನುಮತಿ ನಿರಾಕರಿಸಿದೆ. ಸಂಸದರ ಭೇಟಿಯಿಂದ ಸಾರ್ವಜನಿಕ ಸಭೆ ಹಾಗೂ ಅಂತಹ ಕೂಟಗಳು ಏರ್ಪಡುವ ಸಾಧ್ಯತೆ ಇದೆ. ಇದು ದ್ವೀಪಗಳಲ್ಲಿ ಕೋವಿಡ್ ಹರಡಲು ಕಾರಣವಾಗಬಹುದು ಎಂದು ಘೋಷಿಸಲಾಗಿದೆ.
ರಾಜಕೀಯ ಚಟುವಟಿಕೆಗಳು ಖಂಡಿತವಾಗಿಯೂ ದ್ವೀಪಗಳಲ್ಲಿನ ಶಾಂತಿಯುತ ವಾತಾವರಣವನ್ನು ಭಂಗಗೊಳಿಸುತ್ತದೆ ಹಾಗೂ ಇದು ಸಾರ್ವಜನಿಕರ ಹಿತಾಸಕ್ತಿಗೆ ... ಕೇಂದ್ರಾಡಳಿತದ ಭದ್ರತೆಗೆ ವಿರುದ್ಧ ಎಂಬ ಕಾರಣಕ್ಕೂ ಸಂಸದರಿಗೆ ಅನುಮತಿ ನಿರಾಕರಿಸಲಾಗಿದೆ.
ಎಡಪಕ್ಷಗಳ ಎಂಟು ಸಂಸದರಾದ ಇ. ಕರೀಮ್, ವಿ.ಶಿವದಾಸನ್, ಎ.ಎಂ. ಆರಿಫ್, ಬಿನೊಯ್ ವಿಶ್ವಂ, ಎಂ.ವಿ. ಶ್ರೇಯಂ ಕುಮಾರ್, ಕೆ.ಸೋಮಪ್ರಸಾದ್, ಥಾಮಸ್ ಚಾಝಿಕಾದನ್ ಹಾಗೂ ಜಾನ್ ಬ್ರಿಟ್ಟಸ್ ಅವರು ಲಕ್ಷದ್ವೀಪಕ್ಕೆ ಭೇಟಿ ನೀಡಲು ಅನುಮತಿ ಕೋರಿದ್ದರು.
ಕಳೆದ ವಾರ ಕಾಂಗ್ರೆಸ್ ಸಂಸದರಾದ ಹಿಬಿ ಈಡನ್ ಹಾಗೂ ಟಿ.ಎನ್. ಪ್ರತಾಪನ್ ಮತ್ತು ಕಾಂಗ್ರೆಸ್ ಮುಖಂಡ ಸಿ.ಆರ್. ರಾಕೇಶ್ ಶರ್ಮಾ ಅವರ ಭೇಟಿ ರಾಜಕೀಯ ಕ್ರಮವೆಂದು ತೋರುತ್ತದೆ ಎಂಬ ಕಾರಣಕ್ಕೆ ಲಕ್ಷದ್ವೀಪ ಭೇಟಿಗೆ ಲಕ್ಷದ್ವೀಪ ಆಡಳಿತ ಅನುಮತಿ ನಿರಾಕರಿಸಿತ್ತು.