ಮಂಗಳೂರು: ಗ್ಯಾಸ್ ಗೀಜರ್ ಆನ್ ಮಾಡಿಕೊಂಡು ಬಿಸಿನೀರು ಸ್ನಾನ ಮಾಡುತ್ತಿದ್ದ ಯುವಕ ಬಾತ್ ರೂಂನಲ್ಲೇ ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಮೃತಪಟ್ಟ ಯುವಕನನ್ನು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಫರಂಗಿಪೇಟೆಯ ಮಾರಿಪಳ್ಳದ ಇಜಾಝ್ ಅಹ್ಮದ್ (23) ಎಂದು ಗುರುತಿಸಲಾಗಿದೆ. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯುವಕನನ್ನು ಆಸ್ಪತ್ರೆಗೆ ಸೇರಿಸಿದರೂ ಬದುಕುಳಿಯಲಿಲ್ಲ.
ಮಾರಿಪಳ್ಳ ನಿವಾಸಿ ಇಸ್ಮಾಯಿಲ್ ಎಂಬುವವರ ಪುತ್ರ ಸೋಮವಾರ ಸಂಜೆ ಮನೆಯಲ್ಲಿ ಗ್ಯಾಸ್ ಗೀಜರ್‌ನ ಸ್ವಿಚ್ ಆನ್ ಮಾಡಿ ಸ್ನಾನ ಮಾಡುತ್ತಿದ್ದರು. ಒಂದು ಗಂಟೆಯಾದರೂ ಮಗ ಹೊರಗೆ ಬಾರದ ಹಿನ್ನಲೆಯಲ್ಲಿ ಮನೆಯವರು ಕರೆದಿದ್ದಾರೆ.
ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ಮನೆಯವರು ಗಾಬರಿಯಿಂದ ಬಾಗಿಲು ಒಡೆದಿದ್ದಾರೆ. ಈ ವೇಳೆ ಇಜಾಝ್ ಪ್ರಜ್ಞಾಹೀನ ಸ್ಥಿತಿಯಲ್ಲಿರು. ತಕ್ಷಣ ಆಸ್ಪತ್ರೆಗೆ ಸೇರಿಸಿದರೂ ಅಷ್ಟರಲ್ಲಾಗಲೇ ಇಜಾಝ್ ಮೃತಪಟ್ಟಿದ್ದರು.
ಗ್ಯಾಸ್ ಗೀಜರ್‌ನಲ್ಲಿ ನೀರು ಬಿಸಿ ಮಾಡುವ ವೇಳೆಯಲ್ಲಿ ಗೀಜರ್‌ನಿಂದ ಹೊರಬರುವ ಕಾರ್ಬನ್ ಮಾನಾಕ್ಸೈಡ್ ದೇಹದೊಳಗೆ ಹೋಗಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಅಂದಾಜಿಸಲಾಗಿದೆ.
ಹಿಂದೆಯೂ ಇದೇ ಮಾದರಿ ಪ್ರಕರಣಗಳು ನಡೆದಿವೆ.