ಕೊಚ್ಚಿ: ಪ್ರಸಿದ್ಧ ಮಲಯಾಳಂ ಚಿತ್ರ ನಟ ಕೆಟಿಎಸ್ ಕೆಟಿಎಸ್ ಪಡನ್ನಯಿಲ್ ಅವರು(88) ವಯೋ ಸಹಜ ಕಾಯಿಲೆಯಿಂದಾಗಿ ಇಲ್ಲಿನ ಆಸ್ಪತ್ರೆಯಲ್ಲಿ ಗುರುವಾರ ಮುಂಜಾನೆ ನಿಧನರಾದರು ಎಂದು ಮೂಲಗಳು ತಿಳಿಸಿವೆ.
'ಜುಲೈ 19ರಿಂದ ಇಲ್ಲಿನ ಇಂದಿರಾ ಗಾಂಧಿ ಸಹಕಾರಿ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಬಳಿಕ ಅವರನ್ನು ಹೃದಯ ಆರೈಕೆ ಘಟಕಕ್ಕೆ ಸ್ಥಳಾಂತರಿಸಲಾಗಿತ್ತು. ಬುಧವಾರ ಬೆಳಿಗ್ಗೆ 6.40ಕ್ಕೆ ಅವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು' ಎಂದು ಆಸ್ಪತ್ರೆ ವಕ್ತಾರರು ಹೇಳಿದರು.
ರಂಗಭೂಮಿ ಮೂಲಕ ಪಡನ್ನಯಿಲ್ ಅವರು ಅಭಿನಯ ವೃತ್ತಿಯನ್ನು ಆರಂಭಿಸಿದರು. 1990ರ ದಶಕದಲ್ಲಿ ಅವರು ಮಾಲಯಾಳಂ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರು.
ರಾಜಸೇನನ್ ನಿರ್ದೇಶನದ 'ಅನಿಯನ್ ಬಾವಾ ಚೆಟ್ಟನ್ ಬಾವಾ' ಚಿತ್ರವು ಅವರ ಚೊಚ್ಚಲ ಚಿತ್ರವಾಗಿದ್ದು 60 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಅವರು ತಮ್ಮ ಹಾಸ್ಯ ನಟನೆಗೆ ಜನಪ್ರಿಯತೆ ಪಡೆದಿದ್ದರು. ಕಿರುತೆರೆಯಲ್ಲೂ ಕಾಣಿಸಿಕೊಂಡಿದ್ದರು.
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಶಿಕ್ಷಣ ಸಚಿವ ವಿ.ಸಿವನ್ ಕುಟ್ಟಿ ಅವರು ಸಂತಾಪ ಸೂಚಿಸಿದ್ದಾರೆ.