ಕೊಚ್ಚಿ: ಸರ್ಕಾರದೊಂದಿಗೆ ಸಹಿ ಮಾಡಿದ 3,500 ಕೋಟಿ ರೂ.ಗಳ ಹೂಡಿಕೆ ಯೋಜನೆಯಿಂದ ಹಿಂದೆ ಸರಿಯುವ ನಿರ್ಧಾರವನ್ನು ಪ್ರಕಟಿಸಿದ ಬಳಿಕ ತಮಿಳುನಾಡು ಕೈಟೆಕ್ಸ್ ಕಂಪೆನಿಯನ್ನು ತಮಿಳುನಾಡು ಸರ್ಕಾರ ರಾಜ್ಯಕ್ಕೆ ಆಹ್ವಾನಿಸಿದೆ. ಇದನ್ನು ಕೈಟೆಕ್ಸ್ ಎಂಡಿ ಸಾಬು ಎಂ ಜಾಕೋಬ್ ಇಂದು ಬಹಿರಂಗ ಪಡಿಸಿರುವರು. ತಮಿಳುನಾಡಿನಲ್ಲಿ ಸೌಲಭ್ಯಗಳನ್ನು ಒದಗಿಸುವುದಾಗಿ ಸರ್ಕಾರ ಭರವಸೆ ನೀಡಿದೆ ಎಂದಿರುವ ಸಾಬು ಜಾಕೋಬ್ ತಮಿಳುನಾಡು ಸರ್ಕಾರ ಈ ಬಗ್ಗೆ ಆಹ್ವಾನ ನೀಡಿದ್ದು, ಸುದೀರ್ಘ ಸಂಪ್ರದಾಯವನ್ನು ಹೊಂದಿರುವ ಕೈಟೆಕ್ಸ್‍ನಂತಹ ಕಂಪನಿಯನ್ನು ಹಿಂತೆಗೆದುಕೊಳ್ಳುವುದು ರಾಜ್ಯದ ಕೈಗಾರಿಕಾ ಕ್ಷೇತ್ರಕ್ಕೆ ದೊಡ್ಡ ಹಿನ್ನಡೆಯಾಗಲಿದೆ ಎಂಬ ಟೀಕೆಗಳ ಬೆನ್ನಲ್ಲೇ ಈ ಹೇಳಿಕೆ ನೀಡಿರುವುದು ಉಲ್ಲೇಖಾರ್ಹ.
ಕೇರಳದಲ್ಲಿ ಜಾರಿಗೆ ಬರಬೇಕಿದ್ದ 3,500 ಕೋಟಿ ರೂ.ಗಳ ಯೋಜನೆ ಇದೀಗ ತಮಿಳುನಾಡಲ್ಲಿ ಜಾರಿಗೆ ತರಲು ಕಂಪನಿಗೆ ಆಹ್ವಾನ ನೀಡಿರುವುದು ಕೇರಳಕ್ಕಾದ ಹಿನ್ನಡೆಯೆಂದೇ ಬಿಂಬಿಸಬಹುದಾಗಿದೆ. ರಾಜಕೀಯ ನಾಯಕರ ಪ್ರಚೋದನೆಗೆ ಕಂಪನಿಯ ಅನಗತ್ಯ ತಪಾಸಣೆ ಮತ್ತು ಅಸಮಾಧಾನವನ್ನು ವಿರೋಧಿಸಿ ಕಿಟೆಕ್ಸ್ ಕೇರಳದಲ್ಲಿ ಯೋಜನೆಯಿಂದ ಹಿಂದೆ ಸರಿಯಲು ನಿರ್ಧರಿಸಿತ್ತು.
ನಿರ್ಧಾರವನ್ನು ಪ್ರಕಟಿಸಿದ ಸಾಬು ಜಾಕೋಬ್, ಒಂದು ತಿಂಗಳಲ್ಲಿ, ಕೈಟೆಕ್ಸ್‍ನಲ್ಲಿ ವಿವಿಧ ಇಲಾಖೆಗಳಿಂದ 11 ತಪಾಸಣೆ ನಡೆಸಲಾಗಿದೆ ಎಂದು ಹೇಳಿದರು. ಗ್ಲೋಬಲ್ ಇನ್ವೆಸ್ಟರ್ಸ್ ಫೆÇೀರಂನಲ್ಲಿ 35,000 ಜನರಿಗೆ ಉದ್ಯೋಗ ನೀಡುವ 3,500 ಕೋಟಿ ರೂ.ಗಳ ಒಪ್ಪಂದದಿಂದ ಹೊರಬರಲು ಕಿಟೆಕ್ಸ್ ನಿರ್ಧರಿಸಿದೆ. ಕೇರಳ ಹೂಡಿಕೆ ಸ್ನೇಹಿ ರಾಜ್ಯವಲ್ಲ ಎಂಬ ತಿಳುವಳಿಕೆಯ ಮೇರೆಗೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಆದರೆ, ಎದ್ದಿರುವ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದು ಮತ್ತು ಇತರ ಇಲಾಖೆಗಳೊಂದಿಗೆ ಉನ್ನತ ಮಟ್ಟದ ವಿಚಾರಣೆ ನಡೆಸಲಾಗುವುದು ಎಂದು ಕೈಗಾರಿಕಾ ಸಚಿವ ಪಿ.ರಾಜೀವ್ ಹೇಳಿದ್ದಾರೆ. ಈ ನಿಟ್ಟಿನಲ್ಲಿ ಹೆಚ್ಚಿನ ಚರ್ಚೆಗಳು ಅಥವಾ ಇತರ ಪರಿಣಾಮಕಾರಿ ಮಧ್ಯಸ್ಥಿಕೆಗಳನ್ನು ಪ್ರಾರಂಭಿಸಲಾಗಿಲ್ಲ ಎಂದು ತಿಳಿದುಬಂದಿದೆ.
ಕೈಟೆಕ್ಸ್‍ನಲ್ಲಿ ಕೈಗಾರಿಕಾ ಇಲಾಖೆಯ ನೇತೃತ್ವದಲ್ಲಿ ಯಾವುದೇ ತಪಾಸಣೆ ನಡೆದಿಲ್ಲ ಮತ್ತು ಇತರ ಕೆಲವು ಇಲಾಖೆಗಳು ಮತ್ತು ವಲಯದ ಮ್ಯಾಜಿಸ್ಟ್ರೇಟ್‍ರಿಂದ ತಪಾಸಣೆ ನಡೆಸಲಾಗಿದೆ ಎಂದು ಸಚಿವರು ವಿವರಿಸಿದರು.