ಕಾಸರಗೋಡು: ರಾಜ್ಯದ ಉನ್ನತ ಪದವಿಗಳಲ್ಲಿರುವ ಐಎಎಸ್ ಅಧಿಕಾರಿಗಳನ್ನು ಬೃಹತ್ ಪ್ರಮಾಣದಲ್ಲಿ ವರ್ಗಮಾಡಲಾಗಿದೆ. ಕಾಸರಗೋಡು ಜಿಲ್ಲಾಧಿಕಾರಿ ಡಾ.ಡಿ. ಸಜಿತ್ ಬಾಬು ಅವರನ್ನು ರಾಜ್ಯ ಆಹಾರ ಪೂರೈಕೆ ಇಲಾಖೆಯ ನಿರ್ದೇಶಕರಾಗಿ ಪದೋನ್ನತಿಗೈಯ್ಯಲಾಗಿದೆ. ರಾಜ್ಯ ಮಿಷನ್ ನಿರ್ದೇಶಕರ ಹೆಚ್ಚುವರಿ ಜವಾಬ್ದಾರಿಯನ್ನೂ ನೀಡಲಾಗಿದೆ.
ಕಾಸರಗೋಡಿನ ನೂತನ ಜಿಲ್ಲಾಧಿಕಾರಿಯಾಗಿ ಭಂಡಾರಿ ಸ್ವಾಗತ್ ರಣವೀರ್ ಚಂದ್ ಅವರನ್ನು ನೇಮಕಮಾಡಲಾಗಿದೆ. ಅವರು ರಾಜ್ಯ ಇನ್ವೆಸ್ಟ್ ಸೆಲ್ ನ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದರು. ಇವರು 2010 ಐಎಎಸ್ ಬ್ಯಾಚ್ ಅಧಿಕಾರಿ. ನಾಗರಿಕ ಸೇವಾ ಪರೀಕ್ಷೆಯಲ್ಲಿ ಅವರು 69ನೇ ರ್ಯಾಂಕ್ ಪಡೆದಿದ್ದರು. ನಿರ್ಗಮಿತ ಜಿಲ್ಲಾಧಿಕಾರಿ ಸಜಿತ್ ಬಾಬು ಕಾಸರಗೋಡಲ್ಲಿ ಕಳೆದ ಮೂರು ವರ್ಷಗಳಿಂದ ಜಿಲ್ಲಾಧಿಕಾರಿಗಳಾಗಿದ್ದರು.