ನವದೆಹಲಿ : ಬೇಳೆಕಾಳುಗಳ ಬೆಲೆ ಏರಿಕೆಯಿಂದ ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರ, ಚಿಲ್ಲರೆ ವ್ಯಾಪಾರಿಗಳು ಸೇರಿದಂತೆ ಬೇಳೆಕಾಳುಗಳ ವ್ಯಾಪಾರಿಗಳ ಪ್ರಮಾಣಕ್ಕೆ ನಿರ್ಬಂಧ ಹೇರಿದೆ. ಇನ್ನು ಇಂದಿನಿಂದ್ಲೇ ಈ ನಿಯಮ ಅನ್ವಯವಾಗಲಿದೆ ಎನ್ನಲಾಗ್ತಿದೆ.
ದೇಶದಲ್ಲಿ ಬೇಳೆಕಾಳುಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಬೆಲೆ ನಿಯಂತ್ರಣದ ಕ್ರಮವಾಗಿ ಈ ನಿರ್ಧಾರ ತೆಗೆದುಕೊಂಡಿದೆ. ಈ ಕುರಿತು ಸರ್ಕಾರಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು, ಸ್ಟಾಕ್-ಹೋಲ್ಡಿಂಗ್ ಮಿತಿಗಳು ಜುಲೈ 2ರಿಂದ ಜಾರಿಗೆ ಬರುತ್ತವೆ ಎಂದು ಮಾಹಿತಿ ನೀಡಿದ್ದಾರೆ.