ಕುಂಬಳೆ: ಪುತ್ತಿಗೆ ಸಮೀಪದ ಉರ್ಮಿಯಲ್ಲಿ ಯುವಕನನ್ನು ಸಹೋದರ ಇರಿದು ಕೊಲೆಗೈದ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ. ಮುಹಮ್ಮದ್ ನಿಸಾರ್ (29) ಎಂಬಾತನನ್ನು ಆತನ ಸಹೋದರ ರಫೀಕ್ (31) ಇರಿದು ಕೊಲೆಗೈದನು. ಶನಿವಾರ ಮಧ್ಯಾಹ್ನ ಈ ಕುಕೃತ್ಯ ನಡೆದಿದೆ. ರಫೀಕ್‍ನನ್ನು ಬದಿಯಡ್ಕ ಪೋಲೀಸರು ಬಂಧಿಸಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಕುಟುಂಬದ ಜಗಳವು ಕೊಲೆಗೆ ಕಾರಣವಾಗಿದೆ ಎನ್ನಲಾಗಿದೆ. ಮೃತದೇಹವನ್ನು ಕುಂಬಳೆ ಸಹಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ.
ಚೇರ್ಲ ಅಬ್ದುಲ್ಲಾ ಮೌಲವಿ ಅವರ ಪುತ್ರಾದ ಇವರು, ಸಹೋದರರಾದ ಮುನೀರ್, ಇಕ್ಬಾಲ್, ಸಲೀಮ್ ಮತ್ತು ಶಬೀರ್ ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾರೆ. ಘಟನೆ ಪುತ್ತಿಗೆ, ಸೀತಾಂಗೋಳಿ ಪರಿಸರದಲ್ಲಿ ದಿಗ್ಬ್ರಮೆಗೆ ಕಾರಣವಾಗಿದೆ.