ಕೊಚ್ಚಿ: ಶುಲ್ಕವನ್ನು ಮುಂಚಿತವಾಗಿ ಪಾವತಿಸದಿರುವ ಯಾವುದೇ ವಿದ್ಯಾರ್ಥಿಗೆ ಶಿಕ್ಷಣ ನಿರಾಕರಿಸಬಾರದು ಎಂದು ಹೈಕೋರ್ಟ್ ನಿರ್ದೇಶಿಸಿದೆ. ಖಾಸಗೀ ವೈದ್ಯಕೀಯ ಕಾಲೇಜುಗಳಲ್ಲಿ ದ್ವಿತೀಯ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳಿಂದ ಮೂರನೇ ವರ್ಷದ ಶುಲ್ಕವನ್ನು ಮುಂಗಡವಾಗಿ ಪಾವತಿಸುವಂತೆ ತಿಳಿಸಿರುವುದರ ವಿರುದ್ಧ ಪೋಷಕರು ಹೈಕೋರ್ಟ್ ನ್ನು ಸಂಪರ್ಕಿಸಿದ್ದರು. ಈ ಅರ್ಜಿಯನ್ನು ಹೈಕೋರ್ಟ್ ಇಂದು ಪರಿಗಣಿಸಿ ಈ ಸೂಚನೆ ನೀಡಿದೆ.
ಮೂರನೇ ವರ್ಷದ ಶುಲ್ಕವನ್ನು ಮುಂಚಿತವಾಗಿ ಪಾವತಿಸದ ಕಾರಣ ಯಾವುದೇ ವಿದ್ಯಾರ್ಥಿಗೆ ಪ್ರವೇಶ ನಿರಾಕರಿಸಬಾರದು ಎಂದು ಹೈಕೋರ್ಟ್ ನಿರ್ದೇಶಿಸಿದೆ. ಹೈಕೋರ್ಟ್ ಸರ್ಕಾರ ಮತ್ತು ಖಾಸಗೀ ವೈದ್ಯಕೀಯ ಕಾಲೇಜು ನಿರ್ವಹಣಾ ಸಂಘಕ್ಕೆ ನೋಟಿಸ್ ಕಳುಹಿಸಿದೆ.