ಎರ್ನಾಕುಳಂ: ಸುಮಾರು 200 ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳು ಕಣ್ಮರೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀ ಶಂಕರಾಚಾರ್ಯ ಸಂಸ್ಕೃತ ವಿಶ್ವವಿದ್ಯಾಲಯದ ಪರೀಕ್ಷೆಗಳ ಉಸ್ತುವಾರಿ ಅಧ್ಯಕ್ಷರನ್ನು ಅಮಾನತುಗೊಳಿಸಲಾಗಿದೆ. ಸಿಂಡಿಕೇಟ್ ಉಪಸಮಿತಿಯೊಂದಿಗೆ ವಿಶ್ವವಿದ್ಯಾಲಯವು ತನಿಖೆಗಾಗಿ ಪೊಲೀಸರಿಗೆ ದೂರು ನೀಡಲಿದೆ. ಮೌಲ್ಯಮಾಪನದ ನಂತರ ಉತ್ತರಪತ್ರಿಕೆ ಹಿಂತಿರುಗಿಸಲಾಗಿದೆ ಎಂದು ಸಂಸ್ಕೃತ ಸಾಹಿತ್ಯ ವಿಭಾಗದ ಪರೀಕ್ಷೆಗಳ ಉಸ್ತುವಾರಿ ಅಧ್ಯಕ್ಷ ಡಾ. ಕೆ. ಎ.ಸಂಗಮೇಶನ್ ಹೇಳಿರುವರು. ಆದರೆ ಅದನ್ನು ತಾನು ಈವರೆಗೆ ಪಡೆದಿಲ್ಲ ಎಂದು ಸಂಸ್ಕ್ರತ ವಿಭಾಗ ಮುಖ್ಯಸ್ಥೆ ಆರ್. ಅಂಬಿಕಾ ಸ್ಪಷ್ಟಪಡಿಸಿದರು.
ಉಪಕುಲಪತಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ವಿವರಣೆಯು ತೃಪ್ತಿಕರವಾಗಿಲ್ಲದ್ದರಿಂದ ಪರೀಕ್ಷಾ ಅಧ್ಯಕ್ಷರನ್ನು ಅಮಾನತುಗೊಳಿಸಲು ನಿರ್ಧರಿಸಲಾಯಿತು. ಸಂಸ್ಕೃತ ಸಾಹಿತ್ಯ ವಿಭಾಗದ ಮೂರನೇ ಸೆಮಿಸ್ಟರ್ ಪರೀಕ್ಷೆಯ 276 ಪತ್ರಿಕೆಗಳು ಕಾಣೆಯಾಗಿವೆ. ಕಳೆದ ಜನವರಿಯಲ್ಲಿ ಪರೀಕ್ಷೆ ನಡೆದಿತ್ತು.
ಕೊರೋನದ ಸಂದರ್ಭದಲ್ಲಿ ಯಾವುದೇ ಕೇಂದ್ರೀಕೃತ ಮೌಲ್ಯಮಾಪನ ಇರಲಿಲ್ಲ. ಬದಲಾಗಿ, ಉತ್ತರ ಪತ್ರಿಕೆಗಳನ್ನು ಸಂಬಂಧಪಟ್ಟ ಶಿಕ್ಷಕರಿಗೆ ಮೌಲ್ಯಮಾಪನಕ್ಕಾಗಿ ಹಸ್ತಾಂತರಿಸಲಾಗಿತ್ತು. ಏಪ್ರಿಲ್ ಅಂತ್ಯದೊಳಗೆ ಮೌಲ್ಯಮಾಪನಕ್ಕೊಳಪಡಿಸಿ ಹಿಂತಿರಿಗಿಸಲು ಸೂಚಿಸಲಾಗಿತ್ತು. ಆದರೆ ಕೋವಿಡ್ ಎರಡನೇ ತರಂಗದ ಕಾರಣ ಲಾಕ್‌ಡೌನ್ ಮೇ ಆರಂಭದಲ್ಲಿ ಪ್ರಾರಂಭವಾಯಿತು. ಕಳೆದ ತಿಂಗಳು ವಿಶ್ವವಿದ್ಯಾನಿಲಯವು ಕಾರ್ಯಾಚಟುವಟಿಕೆ ಪುನರಾರಂಭಿಸಿದಾಗ, ಮೌಲ್ಯಮಾಪನಗ್ಯೆದ ಉತ್ತರಪತ್ರಗಳನ್ನು ಹಿಂತಿರುಗಿಸಲಾಗಿಲ್ಲ ಎಂಬುದು ತಿಳಿದುಬಂತು.