ಕಾಸರಗೋಡು: ರಾಜ್ಯ ಲೀಲಗಲ್ ಮೆಟ್ರಾಲಜಿ ಇಲಾಖೆ ವ್ಯಾಪ್ತಿಯಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಸ್ಥಾಪಿಸಲಾಗುವ ಉತ್ತರ ಮಲಬಾರ್ ಪ್ರದೇಶದ ಪ್ರಥಮ ಸೆಕೆಂಡರಿ ಸ್ಟಾಂಡರ್ಡ್ ಲೆಬೊರೆಟರಿ, ಟಾಂಕರ್ ಲಾರಿ ಕಾಲಿಬ್ರೇಷನ್ ಯೂನಿಟ್ ನಿರ್ಮಾಣ ಚಟುವಟಿಕೆಗಳಿಗೆ ಗುರುವಾರ ಚಾಲನೆ ಲಭಿಸಿದೆ.
ನಾಗರೀಕ ಪೂರೈಕೆ ಮತ್ತು ಲೀಗಲ್ ಮೆಟ್ರಾಲಜಿ ಸಚಿವ ಜಿ.ಆರ್.ಅನಿಲ್ ಉದ್ಘಾಟನೆ ನಡೆಸಿದರು. ಈ ಸಂದರ್ಭ ಮಾತನಾಡಿದ ಅವರು ಈ ಯೂನಿಟ್ ನಿರ್ಮಾಣ ಮೂಲಕ ಕಾಸರಗೋಡು ಜಿಲ್ಲೆಯಲ್ಲದೆ ಸಮೀಪದ ಜಿಲ್ಲೆಗಳಿಗೂ ಪ್ರಯೋಜನಕಾರಿಯಾಗಲಿದೆ. ಗ್ರಾಹಕ ನೀಡುವ ಮೊಬಲಗಿನ ನ್ಯಾಯ ಒದಗಿಸುವ ಖಚಿತತೆಯನ್ನು ಸೆಕೆಂಡರಿ ಸ್ಟಾಂಡರ್ಡ್ ಲೆಬೊರೇಟರಿ ಒದಗಿಸಲಿದೆ. ಸಾರ್ವಜನಿಕರಿಗೆ ತುಂಬ ಉಪಕಾರಿಯಾಗಲಿರುವ ಯೋಜನೆಯ ನಿರ್ಮಾಣ ತ್ವರಿತಗತಿಯಿಂದ ಪೂರ್ಣಗೊಳಿಸುವ ಕ್ರಮ ಕೈಗೊಳ್ಳಲಾಗುವುದು ಎಂದು ನುಡಿದರು.
ಬಟ್ಟತ್ತೂರಿನಲ್ಲಿ ನಡೆದ ಸಮಾರಂಭದಲ್ಲಿ ಶಾಸಕ ಸಿ.ಎಚ್.ಕುಂಞಂಬು ಅಧ್ಯಕ್ಷತೆ ವಹಿಸಿದ್ದರು. ಪಳ್ಳಿಕ್ಕರೆ ಗ್ರಾಮಪಂಚಾಯತ್ ಅಧ್ಯಕ್ಷ ಎಂ.ಕುಮಾರನ್, ಜಿಲ್ಲಾ ಪಂಚಾಯತ್ ಸದಸ್ಯರಾದ ವಿ.ಗೀತಾ, ವಿ.ಎಚ್.ಫಾತಿಮತ್ ಷಂನಾ, ಗ್ರಾಮ ಪಂಚಾಯತ್ ಸದಸ್ಯ ಎಂ.ಗೋಪಾಲನ್, ನಿರ್ಮಿತಿ ಕೇಂದ್ರ ಪ್ರತಿನಿಧಿ ಆರ್.ಸಿ.ಜಯರಾಜ್, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಮೊದಲಾದವರು ಉಪಸ್ಥಿತರಿದ್ದರು. ಲೀಗಲ್ ಮೆಟ್ರಾಲಜಿ ಇಲಾಖೆ ನಿಯಂತ್ರಣಾಧಿಕಾರಿ ಕೆ.ಟಿ.ವರ್ಗೀಸ್ ಪಣಿಕ್ಕರ್ ಸ್ವಾಗತಿಸಿದರು. ಕೋಯಿಕೋಡ್ ಪ್ರಭಾರ ಜಂಟಿ ನಿಯಂತ್ರಣಾಧಿಕಾರಿ ರಾಜೇಶ್ ಸಾಂ ವರದಿ ವಾಚಿಸಿದರು. ಸಹಾಯಕ ನಿಯಂತ್ರಣಾಧಿಕಾರಿ ಪಿ.ಶ್ರೀನಿವಾಸ ವಂದಿಸಿದರು.