ತಿರುವನಂತಪುರ: ಪೋನ್ ಕರೆ ವಿವಾದದಲ್ಲಿ ಸಿಲುಕಿರುವ ಸಚಿವ ಎ.ಕೆ.ಶಶೀಂದ್ರನ್ ಅವರಿಂದ ರಾಜೀನಾಮೆ ಪಡೆಯುವ ಯಾವುದೇ ಸಾಧ್ಯತೆಗಳಿಲ್ಲ ಎನ್ನಲಾಗಿದೆ. ಈ ನಿಟ್ಟಿನಲ್ಲಿ ಎನ್‍ಸಿಪಿ ಮುಖಂಡರು ಮತ್ತು ಸಿಪಿಎಂ ಈ ಬಗ್ಗೆ ಮೃದು ಧೋರಣೆ ತಾಳಿದೆ ಎಂದು ತಿಳಿದುಬಂದಿದೆ. ಎನ್‍ಸಿಪಿ ರಾಜ್ಯ ಅಧ್ಯಕ್ಷ ಪಿಸಿ ಚಾಕೊ ಈ ಹಿಂದೆ ಶಶೀಂದ್ರನ್ ಅವರನ್ನು ಸಮರ್ಥಿಸಿಕೊಂಡಿದ್ದರು. ಪಿಸಿ ಚಾಕೊ ಪಕ್ಷದೊಳಗಿನÀ ಸಮಸ್ಯೆಯನ್ನು ಪರಿಹರಿಸಲು ಪಿಸಿ ಚಾಕೋ ಶಶಿಂದ್ರನ್ ಅವರಿಗೆ ಕರೆ ನೀಡಿದ್ದರು. ವಿವಿಧ ಮಾಧ್ಯಮ ವರದಿಗಳ ಪ್ರಕಾರ, ದೂರಿದಾತೆಯನ್ನು ಅವಮಾನಿಸಲು ಸಚಿವರ ಕಡೆಯಿಂದ ಯಾವುದೇ ಒತ್ತಡಗಳಿರಲಿಲ್ಲ ಎಂದು ಸಿಪಿಎಂ ಮತ್ತು ಎಡರಂಗವು ತಿಳಿಸಿದೆ.
ಸಿಪಿಎಂ ನಾಯಕತ್ವವು ಎಕೆ ಶೀಂದ್ರನ್ ಅವರನ್ನು ಸದ್ಯಕ್ಕೆ ಅಮಾನತುಗೊಳಿಸದಿರಲು ನಿರ್ಧರಿಸಿದೆ. ವರದಿಗಳ ಪ್ರಕಾರ, ಎಕೆಜಿ ಕೇಂದ್ರದಲ್ಲಿ ನಡೆದ ಸಿಪಿಎಂ ಪಕ್ಷದ ಕೇಂದ್ರ ಸಮಿತಿ ಸಭೆ ಆರೋಪಗಳನ್ನು ಪರಿಶೀಲಿಸಲು ನಿರ್ಧರಿಸಿದೆ.
ಕ್ಲಿಫ್ ಹೌಸ್‍ನಲ್ಲಿ ನಿನ್ನೆ ನಡೆದ ಸಭೆಯಲ್ಲಿ ಮುಖ್ಯಮಂತ್ರಿಗಳು ಎ.ಕೆ.ಶಶೀಂದ್ರನ್ ಅವರಲ್ಲಿ ರಾಜೀನಾಮೆಯ ಬಗ್ಗೆ ಸೂಚಿಸಿಲ್ಲ ಎಂಬುದು ಗಮನಾರ್ಹ. ಈ ಹಿಂದೆ ಮುಖ್ಯಮಂತ್ರಿ ಅವರು ಏನು ಹೇಳಬೇಕೆಂಬುದನ್ನು ಎಚ್ಚರಿಕೆಯಿಂದ ಆಲಿಸಿದ್ದಾರೆ ಎಂದು ಶಶೀಂದ್ರನ್ ಹೇಳಿದ್ದಾರೆ. ವರದಿಗಳ ಪ್ರಕಾರ, ಎನ್‍ಸಿಪಿಯ ಆಂತರಿಕ ವ್ಯವಹಾರಗಳಲ್ಲಿ ತಾನು ಭಾಗಿಯಾಗಿದ್ದೇನೆ ಎಂಬ ಶಶೀಂದ್ರನ ವಿವರಣೆಯಲ್ಲಿ ಪಕ್ಷದ ನಾಯಕತ್ವ ಮತ್ತು ಎಡರಂಗ ಬೆಂಬಲಿಸಿದೆ ಎನ್ನಲಾಗಿದೆ.
ಮೊನ್ನೆ ಎನ್‍ಸಿಪಿ ಅಧ್ಯಕ್ಷ ಪಿಸಿ ಚಾಕೊ ಅವರು ಸಚಿವರ ಪರ ಮಾತನಾಡಿದ್ದರು. ಪಕ್ಷದೊಳಗಿನ ಸಮಸ್ಯೆಯನ್ನು ಪರಿಹರಿಸಲು ಪೋನ್ ಕರೆ ಮಾಡಲಾಗಿತ್ತು ಎಂದು ಅವರು ಹೇಳುತ್ತಾರೆ. ಈ ವಿಷಯದಲ್ಲಿ ಸಚಿವರು ಮಧ್ಯಪ್ರವೇಶಿಸಬೇಕು ಎಂದು ಪಕ್ಷದ ಮುಖಂಡರು ಒತ್ತಾಯಿಸಿದರು. ಶಶೀಂದ್ರನ್ ನೇರವಾಗಿ ವಿವರಣೆ ನೀಡಿದರೆ ಸಮಸ್ಯೆ ಬಗೆಹರಿಯುತ್ತದೆ ಎಂದು ನಾಯಕರು ಹೇಳಿರುವರು. ಪ್ರಕರಣವನ್ನು ಇತ್ಯರ್ಥಪಡಿಸಬೇಕು ಎಂದು ಶಶೀಂದ್ರನ್ ಸಂಭಾಷಣೆಯಲ್ಲಿ ಹೇಳಿಲ್ಲ ಎಂದು ಪಿಸಿ ಚಾಕೊ ಹೇಳಿದ್ದಾರೆ.